ವರದಿ/ಚಿತ್ರ: ಈ ಮೀಡಿಯಾ
ಉಡುಪಿ: ಕೇಂದ್ರ ಪ್ರಾಯೋಜಕತ್ವದ ಹವಾಮಾನ ಆಧಾರಿತಬೆಳೆ ವಿಮೆ ಯೋಜನೆ (RWBCIS) ಅವಧಿ ವಿಸ್ತರಣೆಗೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಜುಲೈ 15 ರವರೆಗೆ ವಿಸ್ತರಿಸಿದ್ದು, ವಿಮಾ ಯೋಜನೆಗೆ ಬಾಕಿ ಉಳಿದಿರುವ ರೈತರು ವಿಮಾ ಸೌಲಭ್ಯಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ಸಂಸದ ಕೋಟ ಪತ್ರಿಕಾ ತಿಳಿಸಿದ್ದಾರೆ.
ಕಳೆದ ಬಾರಿ ಸಂತ್ರಸ್ತ ರೈತರಿಗೂ ವಿಮಾ ಸೌಲಭ್ಯ ಸಿಗುವಲ್ಲಿ ಮಳೆಮಾಪನವೂ ಸೇರಿದಂತೆ, ಕೆಲವು ಕಾರಣಗಳಿಂದ ಗೊಂದಲವಾಗಿತ್ತು.ಈ ಬಾರಿ ಅಂತಹ ಗೊಂದಲವಾಗದಂತೆ ಜಾಗೃತೆ ವಹಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
