November 3, 2026
Uncategorizedಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮಣಿಪಾಲ ಈಶ್ವರ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಹರೀಶ್ ಜಿ ಕಲ್ಮಾಡಿವೈಷ್ಣವಿ ಸಭಾಭವನದಲ್ಲಿ ನಡೆದ ಮಹಾಸಭೆ ;

ವರದಿ /ಚಿತ್ರ: ಈ ಮೀಡಿಯಾ

ಮಣಿಪಾಲ: ಮಣಿಪಾಲ ಈಶ್ವರ ನಗರ ರೆಸಿಡೆಂಟ್ಸ್ ವೆಲೇರ್ ಅಸೋಸಿಯೇಷನ್ ವಾರ್ಷಿಕ ಮಹಾಸಭೆಯು ಸಭಾಭವನದಲ್ಲಿ ಜರಗಿತು. ವೈಷ್ಣವಿಸಭೆಯಲ್ಲಿ ಹರೀಶ್ ಜಿ ಕಲ್ಮಾಡಿಯವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.ಅಧ್ಯಕ್ಷ ಹರೀಶ ಜಿ ಕಲ್ಮಾಡಿ ಸ್ವಾಗತಿಸಿ, ಕಾರ್ಯದರ್ಶಿ ಡಾ. ಬಾಲಚಂದ್ರರವರು ವಾರ್ಷಿಕ ವರದಿ ಮಂಡಿಸಿದರು.

ಕೋಶಾಧಿಕಾರಿ ಗಣಪತಿ ಕಾಮತ್ ಅವರು ಗತ ವರ್ಷದ ಲೆಕ್ಕ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಮುಖ್ಯ ಸಲಹೆಗಾರರಾದ ಹೆಚ್ ಕೆ. ವಿಶ್ವನಾಥ ರಾವ್ ಅವರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.ಕೊರಿಯೋಗ್ರಾಫರ್ ಮುಕ್ತ ಮೇಡಂ, ನಗರಸಭಾ ಸದಸ್ಯ ಮಂಜುನಾಥ್ ಹಾಗೂ ಉದ್ಯಮಿ ದೇವು ಪೂಜಾರಿ ಅವರನ್ನು ಕೂಡ ಸನ್ಮಾನಿಸಲಾಯಿತು.

ಇದೇ ಸಂದರ್ಭ 9 ಜನ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅಸೋಸಿಯೇಷನ್ ಹಾಗೂ ಡಾ.ಕರ್ನಲ್ ಮಾಧವ ಶಾನುಭಾಗ್ ಅವರಿಂದ ಸಹಾಯಧನ ವಿತರಿಸಲಾಯಿತು ಕಾರ್ಯಕ್ರಮವನ್ನು ಡಾ. ದಿವ್ಯಶ್ರೀ ರಘು ಅವರು ನಿರೂಪಿಸಿದರು.ಅನಂತರ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.

Related posts

ಅಗರಿ ಎಂಟರ್‌ಪ್ರೈಸಸ್‌ ಅಗರಿ ಹಬ್ಬ : ಹಬ್ಬಗಳ ಉತ್ಸವದ 11ನೇ ಹಂತದ ಮೂರನೇ ಡ್ರಾ ಕಾರ್ಯಕ್ರಮ ;

Voiceoftulunadu

ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಗುಂಡಿನ ದಾಳಿಗೆ ಬಲಿ. ಉದ್ಯಮಿ ಪ್ರಿನ್ಸ್ ಪಾಯಿಂಟ್ ಡೇವಿಡ್ ಡಿಸೋಜಾ ಮೃತಪಟ್ಟವರು;

Voiceoftulunadu

ಸಹೋದರತ್ವ ಸಾರುವ ರಕ್ಷಾ ಬಂಧನ ಭಾತೃತ್ವದ ಬೆಸುಗೆ ಬೆಸೆಯಲಿ : ಕುತ್ಯಾರು ನವೀನ್ ಶೆಟ್ಟಿ , ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ‘ಮಾಧ್ಯಮ ಬಂಧುಗಳೊಂದಿಗೆ ರಕ್ಷಾ ಬಂಧನ’ ಕಾರ್ಯಕ್ರಮ ;

Voiceoftulunadu

Leave a Comment