September 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಧಾರ್ಮಿಕ ಚಿಂತಕ ಪಂಜ ಭಾಸ್ಕರ ಭಟ್ ಅವರಿಗೆ ವೇದವಿಭೂಷಣ ಪ್ರಶಸ್ತಿ ಪ್ರದಾನ : ಧಾರ್ಮಿಕ ನಂಬಿಕೆಯಿಂದ ಜೀವನ ಪಾವನ : ಚಂದ್ರಶೇಖರ ಸ್ವಾಮೀಜಿ;

ವರದಿ/ ಚಿತ್ರ: ರೋಶನ್ ನೆಲ್ಲಿಗುಡ್ಡೆ

ಮೂಲ್ಕಿ:ನಮ್ಮಲ್ಲಿನ ದೇವತಾ ಭಾವನೆಗಳನ್ನು ಪ್ರತಿಬಿಂಬಿಸುವಾಗ ಜೀವನದಲ್ಲಿ ಸುಖ ದುಖಃಗಳ ಸಮಾನತೆಯೊಂದಿಗೆ ಪ್ರಚುರಪಡಿಸುವ ಧಾರ್ಮಿಕ ನಂಬಿಕೆಗೆ ಪ್ರಬಲ ಆಧ್ಯಾತ್ಮಿಕತೆಯನ್ನು ವ್ಯಕ್ತಪಡಿಸುವ ವ್ಯಕ್ತಿತ್ವದವರನ್ನು ಬಲವಾಗಿ ನಂಬುತ್ತೇವೆ, ನಮ್ಮ ನಂಬಿಕೆಯನ್ನು ಸಾಕಾರಗೊಳಿಸುವವರನ್ನು ಗೌರವಿಸುವುದು ಸಹ ನಮ್ಮ ಜವಬ್ದಾರಿ ಎಂದು ಬೆಂಗಳೂರಿನ ಆಧ್ಯಾತ್ಮಿಕಗುರು, ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಅವರು ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಧಾರ್ಮಿಕ ಚಿಂತಕ ಪಂಜ ಭಾಸ್ಕರ ಭಟ್ ಅವರಿಗೆ ವೇದವಿಭೂಷಣ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.ಪಂಜ ಭಾಸ್ಕರ ಭಟ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಗುರುಪರಂಪರೆಯನ್ನು ಸದಾ ಗೌರವಿಸುವ ವ್ಯಕ್ತಿಗಳಿಂದ ಗೌರವ ಸ್ವೀಕರಿಸುವುದೇ ಜೀವನದ ಅಮೂಲ್ಯ ಕ್ಷಣವಾಗಿದೆ, ಈ ಪುರಸ್ಕಾರವು ನನ್ನ ಹೊಣೆಗಾರಿಕೆಯನ್ನು ಇನ್ನಷ್ಟು ಹಚ್ಚಿಸಿದೆ ಎಂದರು.

ಸೇವಾಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ಯುವ ಉದ್ಯಮಿ ರಾಹುಲ್ ಚಂದ್ರಶೇಖರ್, ನಿರ್ದೇಶಕ ರಾಘುವ ಸೂರ್ಯ, ಕಾನೂನು ಸಲಹೆಗಾರರಾದ ರೋಶಿನಿ ರಾಘವ್ ಸೂರ್ಯ, ಆಶ್ರಮದ ಪದಾಧಿಕಾರಿಗಳು, ವೇದವಿದ್ವಾಂಸರು, ವಿವಿಧ ಕ್ಷೇತ್ರಗಳ ಗಣ್ಯರು, ಭಕ್ತರು ಇದ್ದರು-೦-

Related posts

ರಾಜ್ಯ ಸಭಾ ಸದಸ್ಯರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮಾಣವಚನ ಸ್ವೀಕಾರ: ಉಪರಾಷ್ಟ್ರಪತಿ ಕಚೇರಿಯಲ್ಲಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ ಖರ್ಗೆ;

Voiceoftulunadu

ಪೊಯ್ಸರ್ ಜಿಮ್ಖಾನಾದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ; ಯುವ ಕ್ರೀಡಾಪಟುಗಳಿಗೆ ಸನ್ಮಾನಮಕ್ಕಳ ವ್ಯಕ್ತಿತ್ವ-ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಪಾತ್ರ ಮಹತ್ವದ್ದು : ಗೋಪಾಲ್ ಸಿ.ಶೆಟ್ಟಿ ;

Voiceoftulunadu

ಸಹಕಾರ ಭಾರತಿ ಉಡುಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಜಿಲ್ಲಾ ಅಧ್ಯಕ್ಷ ದಿನೇಶ್‌ ಹೆಗ್ಡೆ ಆತ್ರಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ;

Voiceoftulunadu

Leave a Comment