November 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುಬ್ಬಿವಾಣಿ ಟ್ರಸ್ಟ್‌ನ ‘ಅವಳ ಹೆಜ್ಜೆ 2026’ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ ;

ಬೆಂಗಳೂರು/ ವಿಜಯಪುರ: ಕಳೆದ ಮೇ ತಿಂಗಳಲ್ಲಿ ಯಶಸ್ವಿಯಾಗಿ ಜರುಗಿದ ಮುಖ್ಯ ಕಿರುಚಿತ್ರೋತ್ಸವ ಹಾಗೂ ಜುಲೈ ತಿಂಗಳಲ್ಲಿ ಬೆಂಗಳೂರಿನ IIWC ಯಲ್ಲಿ ನಡೆದ ಮರುಪ್ರದರ್ಶನದ ಬೆನ್ನಲ್ಲೇ, ಗುಬ್ಬಿವಾಣಿ ಟ್ರಸ್ಟ್‌ ಆಯೋಜಿತ “ಅವಳ ಹೆಜ್ಜೆ ಕಿರುಚಿತ್ರೋತ್ಸವ”ದ ಮತ್ತೊಂದು ವಿಶೇಷ ಮರುಪ್ರದರ್ಶನವು ಸೆಪ್ಟೆಂಬರ್ 24, 2026ರಂದು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ (KSAWUV) ನಡೆಯಲಿದೆ.

ಕೇವಲ ಗ್ಲಾಮರ್ ಗೆ ಸೀಮಿತವಾಗದೇ ಕ್ಯಾಮೆರಾ ಹಿಂದೆಯೂ ಮಹಿಳೆಯರಿರಬೇಕು ಮತ್ತು ಮಹಿಳಾ ನಿರ್ದೇಶಕಿಯರ ಕಥನಗಳಿಗೆ ಬಲವಾದ ವೇದಿಕೆ ಸಿಗಬೇಕು ಎಂಬ ಧ್ಯೇಯದೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ರೂಪುಗೊಂಡಿರುವ ಒಂದು ಸಾಂಸ್ಕೃತಿಕ ಚಳವಳಿಯೇ ‘ಅವಳ ಹೆಜ್ಜೆ ಕಿರುಚಿತ್ರೋತ್ಸವ’.

ಕಿರುಚಿತ್ರ ಪ್ರದರ್ಶನಗಳ ಜೊತೆಗೆ, ಗುಬ್ಬಿವಾಣಿ ಟ್ರಸ್ಟ್ ಯುವಜನರಿಗಾಗಿ ಅನೇಕ ವಿಶೇಷ ಕಾರ್ಯಾಗಾರಗಳು ಹಾಗೂ ಇಂಟರ್ನ್‌ಶಿಪ್ ಅವಕಾಶಗಳನ್ನೂ ನೀಡುತ್ತದೆ. ಸಹಯೋಗದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಆಸಕ್ತ ಶಿಕ್ಷಣ ಸಂಸ್ಥೆಗಳು ಅಥವಾ ಇತರ ಸಂಘ-ಸಂಸ್ಥೆಗಳು ನಮ್ಮನ್ನು ಸಂಪರ್ಕಿಸಬಹುದು.

ಮಾಧ್ಯಮ ಮಾಹಿತಿ, ಇಂಟರ್ನ್‌ಶಿಪ್ ಅರ್ಜಿ ಅಥವಾ ಸಹಯೋಗದ ವಿನಂತಿಗಾಗಿ ಸಂಪರ್ಕಿಸಿ : ವೆಬ್‌ಸೈಟ್ – www.gubbivanitrust.ngoಫೋನ್: 72599 36111 | 88677 47236

ಇಮೇಲ್: gubbivanitrust@gmail.com

ಧನ್ಯವಾದಗಳೊಂದಿಗೆ, ಶಾಂತಲಾ ದಾಮ್ಲೆ ಅವಳ ಹೆಜ್ಜೆ ಕಾರ್ಯಕ್ರಮ ನಿರ್ದೇಶಕಿ, ಗುಬ್ಬಿವಾಣಿ ಟ್ರಸ್ಟ್. ಬೆಂಗಳೂರು

Related posts

ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ₹4.69 ಕೋಟಿ ನಿವ್ವಳ ಲಾಭ : ಸದಸ್ಯರಿಗೆ ಶೇ.22ರಷ್ಟು ಡಿವಿಡೆಂಡ್ ಘೋಷಣೆ; ₹218.55 ಕೋಟಿ ಠೇವಣಿ, ₹174.82 ಕೋಟಿ ಸಾಲ ;

Voiceoftulunadu

ಅಂಬೇಡ್ಕ‌ರ್ ಕೊಡುಗೆಗಳನ್ನು ಭಾರತೀಯರು ತಿಳಿದುಕೊಳ್ಳಲೇಬೇಕು: ಮಾವಳ್ಳಿ ಶಂಕರ್ ಅಭಿಮತ ಕ್ಲಸ್ಟ‌ರ್ ವಿವಿ ವತಿಯಿಂದ ಒಂದು ದಿನದ ಅಂಬೇಡ್ಕರ್ ರವರ ರಾಷ್ಟ್ರೀಯ ವಿಚಾರ ಸಂಕಿರಣ ;

Voiceoftulunadu

ಮಾದಕ ವಸ್ತುಗಳ ಸೇವನೆ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ: ಮಂಜುನಾಥ ಟಿ,;

Voiceoftulunadu

Leave a Comment