November 5, 2026
Uncategorizedಅಂತಾರಾಷ್ಟ್ರೀಯಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ವಿದುಷಿ ರೂಪಾ ಕಿರಣ್ ನೇತೃತ್ವದಲ್ಲಿ ಅಜ್ಮಾನಿನಲ್ಲಿ ಅಕ್ಟೋಬರ್ 4 ರಂದು ಭವ್ಯ ‘ನೃತ್ಯ ವೈಭವ – 2026’ ಸಾಂಸ್ಕೃತಿಕ ಕಲಾ ಮಹೋತ್ಸವ ;

ವರದಿ/ ಚಿತ್ರ: ಸಂತೋಷ್ ಶೆಟ್ಟಿ ಪೊಳಲಿ

ಯುಎಇ/ಅಜ್ಮಾನ್ : ಕುಲಾಲ ಫ್ಯಾಮಿಲಿ ಯುಎಇ ಇದರ ಹೆಮ್ಮೆಯ ಸದಸ್ಯೆ ವಿದುಷಿ ರೂಪಾ ಕಿರಣ್ ಅವರ ನೇತೃತ್ವದ ‘ನೃತ್ಯ ಶಕ್ತಿ – ಸೌಲ್ ಆಫ್ ಡ್ಯಾನ್ಸ್’ ಸಂಸ್ಥೆಯ ವತಿಯಿಂದ ‘ನೃತ್ಯ ವೈಭವ – 2026’ ಎಂಬ ಭವ್ಯ ಸಾಂಸ್ಕೃತಿಕ ಮತ್ತು ನೃತ್ಯ ಕಾರ್ಯಕ್ರಮವನ್ನು ಅಕ್ಟೋಬರ್ 4 ರ ಭಾನುವಾರದಂದು ಆಯೋಜಿಸಲಾಗಿದೆ.

ಅಜ್ಮಾನಿನ ನಾರ್ತ್ ಗೇಟ್ ಬ್ರಿಟಿಷ್ ಸ್ಕೂಲ್‌ನಲ್ಲಿ ಸಂಜೆ 4:00 ಗಂಟೆಯಿಂದ ಆರಂಭವಾಗಲಿರುವ ಈ ಕಾರ್ಯಕ್ರಮವು ಭಾರತೀಯ ನೃತ್ಯ ಪರಂಪರೆ, ಲಯ ಹಾಗೂ ಭಾವಗಳ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಲಿದೆ.

ಸಂಸ್ಥೆಯ ವಿದ್ಯಾರ್ಥಿಗಳ ಕಲಾ ಸಾಮರ್ಥ್ಯವನ್ನು ಅನಾವರಣಗೊಳಿಸುವ ಜೊತೆಗೆ ನೃತ್ಯ ರಂಗದ ಭವಿಷ್ಯದ ತಲೆಮಾರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ಶಿಸ್ತು, ಸಮರ್ಪಣಾ ಭಾವ ಹಾಗೂ ಸಾಂಪ್ರದಾಯಿಕ ಮೌಲ್ಯಗಳನ್ನು ಸಾರುವ ಈ ವೇದಿಕೆಯಲ್ಲಿ ನೃತ್ಯ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಕೋರಿದ್ದಾರೆ.

Related posts

ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಆವರಣದಲ್ಲಿ ವನಮಹೋತ್ಸವ :ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ವೈ ಸುಧೀ‌ರ್ ಕುಮಾರ್ ;

Voiceoftulunadu

ಗ್ರಾಹಕರ ಸೇವೆಯೇ ಸಹಕಾರಿ ಸಂಘದ ಗುರಿ : ಡಾ. ದೇವಿಪ್ರಸಾದ್‌ ಶೆಟ್ಟಿ ಬೆಳಪು,ಬೆಳಪು ವ್ಯವಸಾಯ ಸಹಕಾರಿ ಸಂಘದ ಮಹಾಸಭೆ;

Voiceoftulunadu

ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ನಡೆದ ಬೃಹತ್ ಜಾಗೃತಿ ಕಾರ್ಯಕ್ರಮ: “ಆಪರೇಷನ್ ರೈಸ್” ಹಾಗೂ “ಬೇಡ ಬ್ರೋ” ಎಂಬ ಉಪಕ್ರಮಗಳಡಿಯಲ್ಲಿ ಮಾದಕ ವಸ್ತುಗಳ ವಿರುದ್ದ ಜಾಗೃತಿ ಅಭಿಯಾನದ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮ:

Voiceoftulunadu

Leave a Comment