November 3, 2026
Uncategorizedಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಶ್ರೀ ಪೇಜಾವರ ಶ್ರೀ ಚಾತುರ್ಮಾಸ್ಯ ನವದೆಹಲಿ 2026 ; ಪ್ರಧಾನಿ ಮೋದಿ – ಪೇಜಾವರ ಶ್ರೀ ಭೇಟಿ ಪ್ರಧಾನಿ ಮೋದಿಗೆ ಯಕ್ಷಗಾನ ರಾಜಕಿರೀಟ ತೊಡಿಸಿ ಸ್ವಾಮೀಜಿಯವರಿಂದ ಸನ್ಮಾನ ;

ನವದೆಹಲಿ: ಶ್ರೀ ವಿಶ್ವಪ್ರಸನ್ನ ತೀರ್ಥಸ್ವಾಮೀಜಿಯವರ ಚಾರಿತ್ರಿಕ ಇಂದ್ರಪ್ರಸ್ಥ ಚಾತುರ್ಮಾಸ್ಯ ವ್ರತ ಸಮಾಪ್ತಿಗೆ ಕೆಲವೇ ದಿನಗಳಿವೆ. ಈ ನಡುವೆ ಮಂಗಳವಾರ ಸಂಜೆ ಸ್ವಾಮೀಜಿಯವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.ಸ್ವಾಮೀಜಿಯವರನ್ನು ಆದರದಿಂದ ಬರಮಾಡಿಕೊಂಡ ಮೋದೀಜಿಯವರು ಉಭಯ ಕುಶೋಲಲೋಪರಿ ನಡೆಸಿದರು.

ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವವು 2031 ರಲ್ಲಿ ನಡೆಯಲಿದೆ. ಈ ಬಗ್ಗೆ ಪಂಚವಾರ್ಷಿಕ ಯೋಜನೆಯನ್ನು ಶ್ರೀಗಳು ಹಮ್ಮಿಕೊಂಡಿದ್ದು, ಅದರ ಲಾಂಛನವನ್ನು ನರೇಂದ್ರ ಮೋದಿಜೀ ಬಿಡುಗಡೆಗೊಳಿಸಿದರು . ಇದೇ ಸಂದರ್ಭ ಪ್ರಧಾನಮಂತ್ರಿಯವರನ್ನು ಯಕ್ಷಗಾನದ ರಾಜಕಿರೀಟ ತೊಡಿಸಿ ಶಾಲು, ಸ್ವರ್ಣ ಲೇಪಿತ ಕಾಲೀಯ ಕೃಷ್ಣನ ಪ್ರತಿಮೆ ಸಹಿತ ಫಲ ಮಂತ್ರಾಕ್ಷತೆ ನೀಡಿ ಸ್ವಾಮೀಜಿಯವರು ಸನ್ಮಾನಿಸಿದರು.

ಇದೇ ಸಂದರ್ಭ ಮೋದೀಜೀಯವರ ಜನ್ಮದಿನದಂದು ಅವರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ ಅವರ ಹೆಸರು ಗೋತ್ರ ನಕ್ಷತ್ರ ರಾಶಿಯಲ್ಲಿ ಸಂಕಲ್ಪ ನೆರವೇರಿಸಿ ವೇದವ್ಯಾಸ ಗುರುಕುಲದಲ್ಲಿ ಪೂರ್ಣನವಗ್ರಹ ಹೋಮ, ಹಾಗೂ ರಾಷ್ಟ್ರಸೂಕ್ತ ಹೋಮ ನಡೆಸಲಾಗಿತ್ತು. ಅದರ ಪ್ರಸಾದವನ್ನೂ ಸ್ವಾಮೀಜಿಯವರು ಮೋದಿಯವರಿಗೆ ಶುಭಕೋರಿದರು.ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿಯವರು ಮಾತನಾಡಿ, ಪ್ರಧಾನಿಯವರಿಂದ ಗುರುಗಳ ಜನ್ಮಶತಾಬ್ದ ಪಂಚವಾರ್ಷಿಕ ಯೋಜನೆಗಳ ಲಾಂಛನ ಅನಾವರಣಗೊಂಡಿರುವುದು ಬಹಳ ಅರ್ಥಪೂರ್ಣವಾಗಿದೆ. ದೇಶ ಧರ್ಮದ ಒಳತಿಗೆ ಹಗಲು ರಾತ್ರಿಯೆನ್ನದೆ ದುಡಿಯುತ್ತಿರುವ ಪ್ರಧಾನಿಗಳು ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಅತ್ಯಂತ ಉತ್ತಮ ರೀತಿಯಲ್ಲಿ ದೇಶವನ್ನು ಮುನ್ನಡೆಸುತ್ತಾ ದೇಶದ ಮತ್ತು ಭಾರತೀಯರ ಗೌರವವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ.

ಇನ್ನೂ ಬಹುಕಾಲ ಅವರು ಯಶಸ್ವಿಯಾಗಿ ಭಾರತವನ್ನು ಮುನ್ನಡೆಸುವಂತಾಗಲಿ ಎಂದರು.ಮೋದೀಜಿಯವರು ಸಂದೇಶ ನೀಡಿ, ಶ್ರೀ ವಿಶ್ವೇಶತೀರ್ಥರು ಮತ್ತು ಪೇಜಾವರ ಮಠ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳು ಸದಾ ಪ್ರೇರಣಾದಾಯಿಯಾಗಿದೆ. ಬಿಜೆಪಿಗೂ ಉಡುಪಿ ನೀಡಿದ ಕೊಡುಗೆ ನಮಗೆ ಯಾವತ್ತೂ ಸ್ಮರಣೀಯ. ಗುರುಗಳ ಜನ್ಮ ಶತಾಬ್ದ ಯೋಜನೆಗಳುಯಶಸ್ವಿಯಾಗಿ ಸಮಾಜಕ್ಕೆ ದೇಶಕ್ಕೆ ಮತ್ತಷ್ಟು ಬಲನೀಡುವಂತಾಗಲಿ ಎಂದರು.

ಈ ಸಂದರ್ಭ ಅಖಿಲ ಭಾರತ ಮಾಧ್ವ ಮಹಾಮಂಡಲದ ಅಧ್ಯಕ್ಷ ಗೌತಮ್, ಚೆನ್ನೈ ಉಡುಪಿ ಹೋಮ್ಸ್ ಮಾಲಕ ಪಿ ರಾಮ್ ಪ್ರಸಾದ್, ಎಂ ಆರ್ ಜಿ ಗ್ರೂಪ್ ಮುಖ್ಯಸ್ಥ ಡಾ. ಕೆ ಪ್ರಕಾಶ್ ಶೆಟ್ಟಿ , ಕೊಯಮುತ್ತೂರಿನ ಉದ್ಯಮಿ ರವಿ ಶ್ಯಾಮ್, ನವದೆಹಲಿ ಕೇಂದ್ರೀಯ ವಿವಿ ಕುಲಪತಿ ಪ್ರೊ ಶ್ರೀನಿವಾಸ ವರಖೇಡಿ, ಹರೀಶ್ ರಾಯಸ್, ಹೆಚ್ ವಾಸುದೇವ ಭಟ್, ಬದರಿ ನಾರಾಯಣ ಲಡ್ಡಾ, ಶ್ರೀನಿವಾಸ ಪ್ರಸಾದ್ ಮೈಸೂರು, ಟಿ ಪಿ ಅನಂತ್ ಬೆಂಗಳೂರು, ವೇದವ್ಯಾಸ ಗುರುಕುಲದ ಪ್ರಾಚಾರ್ಯ সে১. ವಿಠೋಬಾಚಾರ್ಯ, ಸ್ವಾಮೀಜಿಯವರ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.

ಮಠದ ಪಿ ಆರ್ ಒ ವಾಸುದೇವ ಭಟ್ ಪೆರಂಪಳ್ಳಿ ಸಂಯೋಜನೆಯಲ್ಲಿ ಕಾರ್ಯಕ್ರಮ ಸಹಕರಿಸಿದರು. ಲಾಂಛನವನ್ನು ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಾಸುದೇವ ಭಟ್ ವಿನ್ಯಾಸಗೊಳಿಸಿ ಉಡುಪಿಯ ನಿಧಿ ಗ್ರಾಫಿಟಿಕ್ ನ ಮುರಲಿಕೃಷ್ಣ ರಾವ್ ಕೃತಿಗಿಳಿಸಿದ್ದಾರೆ.

Related posts

ಕಾಪು ತಾಲೂಕಿನಾದ್ಯಂತ ಸೌಹಾರ್ದಯುತ ಈದ್ ಮಿಲಾದ್ ಆಚರಣೆ :ಮಕ್ಕಳ ದಫ್ ಪ್ರದರ್ಶನ, ಪ್ರವಾದಿ ಮೊಹಮ್ಮದ್ ಅವರ ಸಂದೇಶ ಸಾರುವ ಹಾಡು, ವಾಹನ ಜಾಥಾದ ಮೆರಗು ;

Voiceoftulunadu

ಬಿ.ಸಿ.ರೋಡ್‌: ಅ. 23, 24ರಂದು ಕಲಾನಿಕೇತನದ ‘ರಜತ ಕಲಾಯಾನ’ ಸಮಾರೋಪ ಎರಡು ದಿನಗಳ ನೃತ್ಯೋತ್ಸವ ಕಾರ್ಯಕ್ರಮ;

Voiceoftulunadu

ಮೂಡುಬಿದಿರೆ: ಫ್ರೆಂಡ್ಸ್ ಇಲೆವೆನ್ ಬೆದ್ರ ಸಂಘಟನೆಯ ನೂತನ ಸಾರಥಿಗಳಾಗಿ ರಘುವೀರ್ ದೇವಾಡಿಗ ಮತ್ತು ಅಶ್ವಿನ್ ಜೆ. ಪಿರೇರಾ ಆಯ್ಕೆ ;

Voiceoftulunadu

Leave a Comment