September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಿದ ಶಿಕ್ಷಣ ಸಂಸ್ಥೆ ;

ವರದಿ /ಚಿತ್ರ :ಈ ಮೀಡಿಯಾ

ಬಂಟಕಲ್ : ಬಂಟಕಲ್ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ನಿರಾಮಯ ಇನ್ಸಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್, ಇನ್ನಂಜೆ ಎಸ್ ವಿ ಎಚ್ ಪಿ ಯು ಕಾಲೇಜು ಮತ್ತು ಎಸ್ ವಿ ಎಸ್ ಆಂಗ್ಲ ಮಾಧ್ಯಮ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಎಸ್ ವಿ ಎಚ್ ಅಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಕಡಿಯಾಳಿ ಆಂಗ್ಲ ಮಾಧ್ಯಮ ಶಾಲೆ ಒಳಗೊಂಡಂತೆ ಸೋದೆ ಸಮೂಹ ಸಂಸ್ಥೆಗಳಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಬಂಟಕಲ್ ಕಾಲೇಜಿನ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಣಿಪಾಲದ ಟ್ಯಾಪ್ ಮಿ ಸಂಸ್ಥೆಯ ಶೈಕ್ಷಣಿಕ ಡೀನ್ ಡಾ. ಗುರುರಾಜ್ ಕಿದಿಯೂರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು.ಇವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಿದರು.

ಸೋದೆ ಸಮೂಹಶಿಕ್ಷಣ ಮುಖ್ಯ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ರಾಧಾಕೃಷ್ಣ ಎಸ್ ಐತಾಳ್, ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್, ನಿರಾಮಯ ಕಾಲೇಜ್ ಆಫ್ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ನವೀನ್ ಬಲ್ಲಾಳ್, ನಿರಾಮಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೋಶನಿ ರೊಡ್ರಿಗಸ್, ಅಲೈಡ್ ಹೆಲ್ತ್ ಸೈನ್ಸಸ್ ಪ್ರಾಂಶುಪಾಲರಾದ ಶಿವಶಂಕರ್ ಪೈ ಮತ್ತು ಇಂಜಿನಿಯರಿಂಗ್ ಕಾಲೇಜಿನ ಡೀನ್ಗಳು ಉಪಸ್ಥಿತರಿದ್ದರು.

ಇನ್ನಂಜೆ ವಿದ್ಯಾಸಂಸ್ಥೆಗಳಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶ್ರೀ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ರತ್ನಕುಮಾ‌ರ್ ಧ್ವಜಾರೋಹಣವನ್ನು ರವರು ನಡೆಸಿಕೊಟ್ಟರು.ವಿಶ್ವದ ಈ ಸಂದರ್ಭದಲ್ಲಿ ಭಾರತವನ್ನು ಶಕ್ತಿಶಾಲಿ ದೇಶವನ್ನಾಗಿ ಪ್ರತಿಯೊಬ್ಬರು ರೂಪಿಸಲುಕಾರ್ಯ ಪ್ರ ವೃತ್ತ ರಾ ಗ ಬೇ ಕೆಂ ದು ತಿಳಿಸಿದರು.ಈ ಸಂದರ್ಭದಲ್ಲಿ ಇನ್ನಂಜೆ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಅಧ್ಯಾಪಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಡಿಯಾಳಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ 2 ಶ್ರೀನಿವಾಸ ತಂತ್ರಿಗಳು ಧ್ವಜಾರೋಹಣ ನಡೆಸಿಕೊಟ್ಟರು.ಇವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಮತ್ತು ಯುವ ಜನತೆಯ ಜವಾಬ್ದಾರಿಯ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Related posts

ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರ ಪ್ರಶಸ್ತಿಗೆ ಹಿರಿಯ ಪತ್ರಕರ್ತ,ಶಿಕ್ಷಕ ಜಯಾನಂದ ಪೆರಾಜೆ ಆಯ್ಕೆ ;

Voiceoftulunadu

ಮೂಲ್ಕಿಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಧಾರ್ಮಿಕ ಚಿಂತಕ ಪಂಜ ಭಾಸ್ಕರ ಭಟ್ ಅವರಿಗೆ ವೇದವಿಭೂಷಣ ಪ್ರಶಸ್ತಿ ಪ್ರದಾನ : ಧಾರ್ಮಿಕ ನಂಬಿಕೆಯಿಂದ ಜೀವನ ಪಾವನ : ಚಂದ್ರಶೇಖರ ಸ್ವಾಮೀಜಿ;

Voiceoftulunadu

ಮೂಲ್ಕಿ ಬಳಿಯ ಕೆರೆಕಾಡು ಅಕ್ಷಯ ಮಹಿಳಾ ಮಂಡಳಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾಧವ ಶೆಟ್ಟಿಗಾರ್ ದಂಪತಿಯನ್ನು ಸನ್ಮಾನ : ತುಳುನಾಡಿನ ಆಹಾರ ಪದ್ಧತಿ ಶ್ರೇಷ್ಟ , ಅಮೂಲ್ಯ ಶೆಟ್ಟಿ ಕಟೀಲು;

Voiceoftulunadu

Leave a Comment