28.5 C
ಮಂಗಳೂರು
September 4, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿಸ್ಥಳೀಯ/ಪ್ರಾದೇಶಿಕ ಸುದ್ದಿ

ಹಿರಿಯಡಕ: ಸಂಜೀವಿನಿ ಒಕ್ಕೂಟದಲ್ಲಿ ₹23 ಲಕ್ಷ ವಂಚನೆ: ದಂಪತಿ ಬಂಧನ;

ವರದಿ /ಚಿತ್ರ: ವಿನೋದ್ ಶೆಟ್ಟಿ ಉಡುಪಿ

ಉಡುಪಿ: ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಡೂರು ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಲ್ಲಿ ₹23 ಲಕ್ಷ ಹಣ ದುರ್ಬಳಕೆ ಹಾಗೂ ವಂಚನೆ ನಡೆಸಿದ ಆರೋಪದಡಿ ಇಬ್ಬರನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾಗಿದ್ದ ಸುಗಂಧಿ ಹಾಗೂ ಅವರ ಪತಿ ಸಂತೋಷ ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಸುಗಂಧಿ ಅವರು 2023ರಿಂದ 2025ರ ಅವಧಿಯಲ್ಲಿ ಸದಸ್ಯರಿಂದ ಸಂಗ್ರಹಿಸಿದ ಸಾಲ ಮರುಪಾವತಿ ಹಣವನ್ನು ರಿಜಿಸ್ಟರ್‌ನಲ್ಲಿ ದಾಖಲಿಸಿದರೂ, ಅದನ್ನು ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ, ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್‌ಗಳಿಗೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯ ನಕಲಿ ಸಹಿ ಮಾಡಿ ಬ್ಯಾಂಕ್‌ನಿಂದ ಹಣ ಪಡೆದಿರುವ ಆರೋಪವೂ ಇದೆ.

ಲೆಕ್ಕಪರಿಶೋಧನೆ ವೇಳೆ ವಂಚನೆ ಬೆಳಕಿಗೆ ಬಾರದಂತೆ ಬೇರೆ ಬೇರೆ ಸಾಲದ ಖಾತೆ ಪುಸ್ತಕಗಳನ್ನು ನಿರ್ವಹಿಸಿ ಕಾರ್ಯಕಾರಿ ಸಮಿತಿಗೆ ಅನುಮಾನ ಬಾರದ ರೀತಿಯಲ್ಲಿ ದಾಖಲೆಗಳನ್ನು ಸೃಷ್ಟಿಸಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ. ಈ ಮೂಲಕ ಒಟ್ಟು ₹23 ಲಕ್ಷವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪೇಜಾವರ ಶ್ರೀ ಚಾತುರ್ಮಾಸ್ಯ ನವದೆಹಲಿ 2026 : ಪೇಜಾವರ ಶ್ರೀ ಭೇಟಿ ಮಾಡಿದ ಬಿ ಎಲ್ ಸಂತೋಷ್, ಸಂಸದೆ ಬಾನ್ಸುರಿ ಸ್ವರಾಜ್‌;

Voiceoftulunadu

ಮುಂಬೈಯಲ್ಲಿ “ವೇಳ್ ಘಡಿ” ಚಿತ್ರದ ಟ್ರೈಲರ್ ಹಾಗೂ ಜೋನ್ ವಿಲ್ಸನ್ ಲೋಬೋ ಅವರ “ಲೋಬೋ ಪ್ರೋಡಕ್ಷನ್” ಲೋಕಾರ್ಪಣೆ : ಕೊಂಕಣಿ ಭಾಷಾಭಿಮಾನಕ್ಕೆ ಹೊಸ ಸ್ಫೂರ್ತಿ: ಜೆನೆವೀವ್ ಪಿ. ವಾಸ್ ;

Voiceoftulunadu

ಪಡುಬಿದ್ರಿ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಸರ್ವ ಸಂಘಟನೆಗಳ ಒಕ್ಕೂಟದ ವತಿಯಿಂದ ಆಗ್ರಹ : ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಕಿಣಿ ಅವರಿಗೆ ಮನವಿ ಸಲ್ಲಿಸಿದ ಸಂಘಟನೆ ;

Voiceoftulunadu

Leave a Comment