28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಉಜಿರೆಯ  ಎಸ್.ಡಿ.ಎಂ ಪದವಿಪೂರ್ವ ಕಾಲೇಜ್‌ನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಸಮಾರಂಭ ವಿದ್ಯಾಥಿಗಳು ಭವಿಷ್ಯದ ಬಗ್ಯೆ ಕನಸು ಕಂಡು ನನಸಾಗಿಸಬೇಕು : ಸೋನಿಯಾ ಯಶೋವರ್ಮ


ಮುಂಬಯಿ, ಜೂ.೦೩: ಪಿ.ಯು.ಸಿ  ಶಿಕ್ಷಣದ ಪ್ರಮುಖ ಹಂತವಾಗಿದ್ದು ವಿದ್ಯಾಥಿಗಳು ತಮ್ಮ ಭವಿಷ್ಯದ ಬಗ್ಯೆ ಸುಂದರ ಕನಸು ಕಂಡು ಅದನ್ನು ನನಸಾಗಿಸಲು ಪ್ರಯತ್ನಿಸಬೇಕು ಎಂದು ಸೋನಿಯಾ ಯಶೋವರ್ಮ ಹೇಳಿದರು.

ಇಂದಿಲ್ಲಿ ಬುಧವಾರ ಬೆಳ್ತಂಗಡಿ ಅಲ್ಲಿನ ಉಜಿರೆಯ  ಎಸ್.ಡಿ.ಎಂ ಸನಿವಾಸ ಪದವಿಪೂರ್ವ ಕಾಲೇಜ್‌ನಲ್ಲಿ ಪಿ.ಯು.ಸಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಸೋನಿಯಾ ಮಾತನಾಡಿ ಶಿಸ್ತು ಮತ್ತು ಸಮಯಪಾಲನೆಯೊಂದಿಗೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬಹುದು ಎಂದು ಮಕ್ಕಳಿಗೆ ಶುಭ ಹಾರೈಸಿದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ವಿದ್ಯಾಥಿನಿಲಯಗಳ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರನ್ ವರ್ಮ ಮಾತನಾಡಿ, ವಸತಿ ನಿಲಯಗಳು ಶಿಕ್ಷಣದೊಂದಿಗೆ ಜೀವನಶಿಕ್ಷಣವನ್ನೂ, ಉತ್ತಮ ಸಂಸ್ಕಾರವನ್ನೂ ನೀಡುತ್ತವೆ. ವಿದ್ಯಾಥಿಗಳು ಹೊಣೆಗಾರಿಕೆಯೊಂದಿಗೆ ಕೃತಜ್ಞತಾ ಭಾವವನ್ನೂ ಬೆಳೆಸಿಕೊಳ್ಳಬೇಕು ಎಂದು ಸಲಹಿದರು.

ಸಂಸ್ಥೆಯ ಪ್ರಾಂಶುಪಾಲ ಸುನಿಲ್ ಪಂಡಿತ್ ಅಧ್ಯಕ್ಷತೆ ವಹಿಸಿದ್ದು, ಉಪನ್ಯಾಸಕಿ ವಾಣಿ ಸ್ವಾಗತಿಸಿದರು. ಕವಿತಾ ಧನ್ಯವಾದವಿತ್ತರು.
ಚಿತ್ರ: ಸೋನಿಯಾ ಯಶೋವರ್ಮ ಸಮಾರಂಭವನ್ನು ಉದ್ಘಾಟಿಸಿದರು.

Related posts

ಹೆಬ್ರಿಯ ಚಾಣಕ್ಯ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಚೆಸ್ ತರಗತಿ ಉದ್ಘಾಟನೆ : ಚೆಸ್‌ ತರಗತಿ ಉದ್ಘಾಟಿಸಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ;

Voiceoftulunadu

ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ನಡೆದ ಬೃಹತ್ ಜಾಗೃತಿ ಕಾರ್ಯಕ್ರಮ: “ಆಪರೇಷನ್ ರೈಸ್” ಹಾಗೂ “ಬೇಡ ಬ್ರೋ” ಎಂಬ ಉಪಕ್ರಮಗಳಡಿಯಲ್ಲಿ ಮಾದಕ ವಸ್ತುಗಳ ವಿರುದ್ದ ಜಾಗೃತಿ ಅಭಿಯಾನದ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮ:

Voiceoftulunadu

ಶ್ರೀರಸ್ತು ಸೌಹಾರ್ದ ಸೊಸೈಟಿ ವತಿಯಿಂದ ಮಕ್ಕಳಿಗಾಗಿ ಸಹಕಾರ ಧ್ವಜ ಚಿತ್ರ ಬಿಡಿಸುವ ಸ್ಪರ್ಧೆ;

Voiceoftulunadu

Leave a Comment