28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ಎಂಇಟಿ ಸಂಸ್ಥೆಯ ಶೈಕ್ಷಣಿಕ ಸಲಹಾ ಮಂಡಳಿ ಸದಸ್ಯರಾಗಿ ಸುನೀಲ್ ಲೋಬೊ ನೇಮಕ ;

ವರದಿ /ಚಿತ್ರ :ರೋನ್ಸ್ ಬಂಟ್ವಾಳ್

ಮುಂಬಯಿ, ಸೆ.03: ರಾಷ್ಟ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲೊಂದಾದ ಬೃಹನುಂಬಯಿಯಲ್ಲಿನ ಎಂಐಟಿ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೊಮಾ ಇನ್ ಮ್ಯಾನೆಜ್‌ಮೆಂಟ್ ಸಂಸ್ಥೆಯ ಶೈಕ್ಷಣಿಕ ಸಲಹಾ ಮಂಡಳಿಯ ಸದಸ್ಯರಾಗಿ ಮಂಗಳೂರು ಮೂಲದ ಸುನೀಲ್ ಲೋಬೊ ಅವರನ್ನು 2026-27ನೇ ಶೈಕ್ಷಣಿಕ ವರ್ಷಗಳ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ನೇಮಕಾತಿ ಮಾಡಿದೆ.

ಕರ್ನಾಟಕ ಕರಾವಳಿಯ ಮಂಗಳೂರು ದೇರಬೈಲ್ ಅಲ್ಲಿನ ಪ್ಯೂಬರ್ಟ್ ಲೋಬೊ (ದಿವಂಗತರು) ಮತ್ತು ಬೆಳ್ತಂಗಡಿಯ ಸಿಲಿಯಾ ಲೋಬೊ (ನೀ ಸಿಕ್ಕೇರಾ) ಅವರ ಸುಪುತ್ರರಾಗಿದ್ದು, ನಾಡಿನ ಹೆಸರಾಂತ ಧುರೀಣ ಎ.ಎಲ್ ಸಿಕ್ಕೇರಾ (ದಿವಂಗತರು) ಅವರ ಮೊಮ್ಮಗನಾಗಿರುವರು. ದೋಹಾ ಬ್ಯಾಂಕ್‌ನ ಭಾರತ ವಿಭಾಗದ ಕಾರ್ಪೊರೇಟ್ ಬ್ಯಾಂಕಿಂಗ್ ಮುಖ್ಯಸ್ಥರಾದ ಸುನೀಲ್ ಅವರ ವೃತ್ತಿಪರ ಅನುಭವ, ಆಡಳಿತಾತ್ಮಕ ಸಾಮರ್ಧ ಮತ್ತು ಸಾಮಾಜಿಕ ಸೇವೆಯ ಹಿನ್ನೆಲೆಯು ಎಂಇಟಿ ಸಂಸ್ಥೆಯ ಶೈಕ್ಷಣಿಕ ಸಲಹಾ ಮಂಡಳಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಕಾರ್ಪೊರೇಟ್ ಹಾಗೂ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್, ವೆಲ್ತ್ ಮ್ಯಾನೇಜ್‌ಮೆಂಟ್ ಮತ್ತು ಬ್ಯಾಂಕಿಂಗ್ ಕಾರ್ಯಾಚರಣೆ ಕ್ಷೇತ್ರಗಳಲ್ಲಿ 25ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಸುನಿಲ್ ಲೋಬೊ ಅವರ ದೀರ್ಘಕಾಲದ ಬ್ಯಾಂಕಿಂಗ್ ಅನುಭವ ಹಾಗೂ ಸಂಸ್ಥೆ ಮತ್ತು ಸಮಾಜದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ಈ ಜವಾಬ್ದಾರಿಯನ್ನು ನೀಡಲಾಗಿದೆ.

ಸಂಸ್ಥೆಯ ಪರಿಣಾಮಕಾರಿ ಆಡಳಿತ, ಶೈಕ್ಷಣಿಕ ಹಾಗೂ ಸಾಂಸ್ಥಿಕ ಅಭಿವೃದ್ಧಿಗೆ ಅವರು ತಮ್ಮ ಅನುಭವ ಮತ್ತು ಮಾರ್ಗದರ್ಶನ ನೀಡಲಿದ್ದಾರೆ ಎನ್ನಲಾಗಿದೆ.ಸಾಮಾಜಿಕ ಹಾಗೂ ಸಮುದಾಯ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ಅವರು ಕೆನರಾ ಕ್ಯಾಥೋಲಿಕ್ ಅಸೋಸಿಯೇಶನ್ (ಕೆಸಿಎ) ಬಾಂದ್ರಾ ಸಂಸ್ಥೆಯ ಅಧ್ಯಕ್ಷರಾಗಿ ವಿವಿಧ ಶೈಕ್ಷಣಿಕ, ವೈದ್ಯಕೀಯ, ಸಮುದಾಯ ಮತ್ತು ಉದ್ಯಮಶೀಲತಾ ಕಾರ್ಯಕ್ರಮಗಳಿಗೆ ನೇತೃತ್ವ ನೀಡುತ್ತಿದ್ದಾರೆ.

ಸುನಿಲ್ ಅವರು ಬೊಂಬೇ ವೈಎಂಸಿಯ 42ನೇ ಅಧ್ಯಕ್ಷರಾಗಿ 2023-24ರ ಅವಧಿಯಲ್ಲಿ ಸೇವೆ ಸಲ್ಲಿಸಿದ್ದು, 2009ರಿಂದ ಸಂಸ್ಥೆಯೊಂದಿಗೆ ವಿವಿಧ ಜವಾಬ್ದಾರಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ, ವಿವಿಧ ಶೈಕ್ಷಣಿಕ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿ ಟ್ರಸ್ಟಿಯಾಗಿ ಹಾಗೂ ವಿಲ್ಲಿಂಗ್‌ಟನ್ ಕ್ಯಾಥೊಲಿಕ್ ಜಿಮ್ಹಾನಾ, ದಿ. ಕ್ಯಾಥೊಲಿಕ್ ಜಿವ್ಹಾನಾ ಲಿಮಿಟೆಡ್, ಮರೀನ್ ಡ್ರೈವ್ ಮತ್ತು ಬಾಂದ್ರಾ ಜಿಮ್ಹಾನಾ ಮುಂತಾದ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿರುವರು.

Related posts

ಕುಂದಾಪುರ : ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಇಡೀ ಅಂಗಡಿ ಭಸ್ಮ ಸುಮಾರು 40 ಲಕ್ಷಕ್ಕೂ ಅಧಿಕ ರೂಪಾಯಿ ನಷ್ಠದ ಅಂದಾಜು ;

Voiceoftulunadu

ಹೆಬ್ರಿಯ ಚಾಣಕ್ಯ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಚೆಸ್ ತರಗತಿ ಉದ್ಘಾಟನೆ : ಚೆಸ್‌ ತರಗತಿ ಉದ್ಘಾಟಿಸಿದ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಾಧಿಕಾರಿ ನಿತ್ಯಾನಂದ ಶೆಟ್ಟಿ;

Voiceoftulunadu

ಕರಾವಳಿಗೆ ಮತ್ತೊಂದು ಹೆಮ್ಮೆಯ ಗರಿ: ಮೂಡುಬಿದಿರೆಯ ಉಷಾ ದಯಾನಂದ ಪೈ ಅವರಿಗೆ ‘ಅತ್ಯುತ್ತಮ ನಂದಿನಿ ಡೀಲರ್’ ಪ್ರಶಸ್ತಿ ಗೌರವ!

Voiceoftulunadu

Leave a Comment