November 4, 2026
Uncategorizedಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಅ.9 ರಂದು ಕುಂತಳನಗರ ಸ್ಕಿಲ್ ಡೆವಲಪ್ರೈಂಟ್ ಸೆಂಟರ್ನಲ್ಲಿ ಬೃಹತ್ ಉದ್ಯೋಗ ಮೇಳ : ಎಂಆರ್ಜಿ ಗ್ರೂಪ್ ಪ್ರಾಯೋಜಕತ್ವದ 5ನೇ ಉದ್ಯೋಗ ಮೇಳ ;

ವರದಿ/ ಚಿತ್ರ: ಈ ಮೀಡಿಯಾ

ಕುಂತಳ ನಗರ : ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ ವತಿಯಿಂದ ಸಂಘದ ಕುಂತಳನಗರ ಸ್ಕಿಲ್ ಡೆವಲಪೈಂಟ್ ಸೆಂಟರ್ನಲ್ಲಿ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಎಂಆರ್ಜಿ ಗ್ರೂಪ್ನ ಪ್ರಾಯೋಜಕತ್ವದ 53 ಉದ್ಯೋಗ ಮೇಳ ಅ .9ರಂದು ಜರುಗಲಿದೆ.

ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಪ್ಲೇಸ್ಕೆಂಟ್ ಮತ್ತು ಟೈನಿಂಗ್ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಹಾಗೂ ತಂಡದ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಉದ್ಯೋಗ ಮೇಳ ನಡೆಯಲಿದೆ.

ಈ ಬಾರಿಯ ಉದ್ಯೋಗ ಮೇಳದಲ್ಲಿ ನಾನಾ ಕ್ಷೇತ್ರಗಳಿಗೆ ಸಂಬಂಧಿಸಿದ 50 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುವ 2, ఎంజినియరింగా ಪದವಿಧರರು, ಡಿಪ್ಲೊಮಾ, 0630, ఎంబిఎ ಸಹಿತ ಯಾವುದೇ ಪದವಿ ಹಾಗೂಪದವೀಧರರು, ಸ್ನಾತಕೋತ್ತರ ಪಿಯುಸಿ, ಎಸ್‌ಎಸ್‌ಎಲ್ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ಉದ್ಯೋಗಾಕಾಂಕ್ಷಿಗಳು ಒಂದೇ ವೇದಿಕೆಯಲ್ಲಿ ಹಲವು ಕಂಪನಿಗಳ ಪ್ರತಿನಿಧಿಗಳನ್ನು ನೇರವಾಗಿ ಭೇಟಿ ಮಾಡಿ, ಕೌಶಲ್ಯಕ್ಕೆ ಅನುಗುಣವಾದ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದು ಸಂದರ್ಶನದಲ್ಲಿ ಭಾಗವಹಿಸಲು ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು, ಅವರ ಕೌಶಲ್ಯ ಮತ್ತು ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಕಂಪನಿಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವುದು ಹಾಗೂ ಗ್ರಾಮೀಣ ಭಾಗದ ಪ್ರತಿಭಾವಂತ ಯುವಕ-ಯುವತಿ ಯರಿಗೆ ವೇದಿಕೆ ಒದಗಿಸುವುದು ಈ ಉದ್ಯೋಗ ಮೇಳದ ಪ್ರಮುಖ ಉದ್ದೇಶವಾಗಿದೆ.

ವಿದೇಶಿ ಉನ್ನತ ಶಿಕ್ಷಣಕ್ಕೆ ವಿಶೇಷಮಾರ್ಗದರ್ಶನ: ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಾಗಿ ವಿಶೇಷ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆಯನ್ನೂ ಈ ಸಂದರ್ಭ ಮಾಡಲಾಗುತ್ತಿದೆ.

ವಿದೇಶಿ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿನಿಧಿಗಳು ಭಾಗವಹಿಸಿ, ನಾನಾ ಕೋರ್ಸುಗಳು, ವಿಶ್ವ ವಿದ್ಯಾಲಯಗಳ ಆಯ್ಕೆ, ಪ್ರವೇಶ ಪ್ರಕ್ರಿಯೆ, ವಿದ್ಯಾರ್ಥಿವೇತನ, ಶಿಕ್ಷಣ ಸಾಲ, ಹಾಗೂ IELTS/TOE-FL/PTE/GRE/GMAT ಮುಂತಾದ ಪರೀಕ್ಷೆಗಳು ಹಾಗೂ ಪೀಸಾ ಪ್ರಕ್ರಿಯೆ ಸೇರಿದಂತೆ ವಿದೇಶಿ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ಯನ್ನು ನೀಡಲಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಅಥವಾ ನೋಂದಣಿ ಲಿಂಕ್ ಮೂಲಕ https://-forms.gle/cLx9WGdptoiJ Ysvx7? utm_source ಮೂಲಕ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳ ಬಹುದು ಎಂದು ಪ್ರಕಟಣೆ ತಿಳಿಸಿದೆ.

Related posts

ಪೊಳಲಿ :ಕ್ಷೇತ್ರದಲ್ಲಿ ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲು ಮನವಿ ;

Voiceoftulunadu

ಸುಮನಸಾ ಕೊಡವೂರು ಸಂಘಟನೆಯ ರಜತ ಮಹೋತ್ಸವದ ಅಂಗವಾಗಿ ವಿನೂತನ ಪ್ರಯೋಗ : ಕಾರ್ಯಕ್ರಮ ಉದ್ಘಾಟಿಸಿದ ರಂಗಕರ್ಮಿ, ನೀನಾಸಂ ಜಯರಾಮ ನೀಲಾವರ ;

Voiceoftulunadu

ಟೀಮ್ ಮಾರುತಿ ಮೂಳೂರು: ಐದನೇ ವರ್ಷದ ಪಿಲಿ ಪೆಜ್ಜೆ ಊದು ಸೇವೆ, ವಿದ್ಯಾರ್ಥಿವೇತನ, ಸನ್ಮಾನವಿದ್ಯಾರ್ಥಿ ಆಸರೆ : 2 ಲಕ್ಷ 35 ಸಾವಿರ ರೂ. ವಿದ್ಯಾರ್ಥಿ ವೇತನ ವಿತರಣೆ ;

Voiceoftulunadu

Leave a Comment