September 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿಸ್ಥಳೀಯ/ಪ್ರಾದೇಶಿಕ ಸುದ್ದಿ

ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ : ಪಡುಬಿದ್ರಿ ರೋಟರಿ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷ ಹಾಗೂ ಪಡುಬಿದ್ರಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಮಹಮ್ಮದ್ ನಿಯಾಜ್;

ವರದಿ/ ಚಿತ್ರ:ಈ ಮೀಡಿಯಾ

ಉಚ್ಚಿಲ: ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ನೆರವೇರಿತು.

ಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯರವರು ಮಂತ್ರಿ ಮಂಡಲ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸಿದರು.

ಮುಖ್ಯ ಅತಿಥಿಯಾಗಿ ಪಡುಬಿದ್ರಿ ರೋಟರಿ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷ ಹಾಗೂ ಪಡುಬಿದ್ರಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಮಹಮ್ಮದ್ ನಿಯಾಜ್ ರವರು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಕರ್ತವ್ಯದ ಬಗ್ಗೆ ಸವಿವರವಾಗಿ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಮಾಹಿತಿ ನೀಡಿದರು.

ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಕುಮಾರಿ ಶಹಮ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಕುಮಾರಿ ಲಾವಣ್ಯರವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು

ಪ್ರಾಥಮಿಕ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ವೈ ಇವರು ಸಂದರ್ಭಉಚಿತವಾಗಿ ಮಾತನಾಡಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಚುನಾವಣಾ ಅಧಿಕಾರಿಯಾಗಿ ಶಿಕ್ಷಕಿ ಶ್ರೀಮತಿ ಜ್ಯೋತಿಯವರು ವಿವಿಧ ಮಂತ್ರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಯ ಬಗ್ಗೆ ತಿಳಿ ಹೇಳಿದರು.

ಕುಮಾರಿ ಸಪ್ನ ಕಾರ್ಯಕ್ರಮವನ್ನು ನಿರೂಪಿಸಿದರು ಶಾಲಾ ವಿದ್ಯಾರ್ಥಿ ನಾಯಕಿ ಕುಮಾರ ಶಹಮ ಸ್ವಾಗತಿಸಿದರು. ಕುಮಾರಿ ಸಾನಿಯಾ ವಂದಿಸಿದರು.ಇದೇ ಸಂದರ್ಭ ಉಡುಪಿ ಬಡಗು ಬೆಟ್ಟು ಕೋ ಆಪರೇಟಿವ್ ಸೊಸೈಟಿಯವರು ನೀಡಿದ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು.

Related posts

ಪಡುಬಿದ್ರಿ ಬಿಲ್ಲವ ಸಂಘದಲ್ಲಿಆಟಿಡೊಂಜಿ ದಿನ ಕಾರ್ಯಕ್ರಮಚೆನ್ನೆ ಮಣೆ ಆಟ ಆಡುವ ಮೂಲಕ ಉದ್ಘಾಟನೆ ನೆರವೇರಿಸಿದ ಪಿ.ಕೆ. ಸದಾನಂದ, ವೈ ಸುಧೀರ್ ಕುಮಾರ್

Voiceoftulunadu

ವಾರ್ಷಿಕ ಸಂತ ಉತ್ಸವ ಸಂಭ್ರಮಿಸಿದ ಸೈಂಟ್ ಪೀಟರ್‍ಸ್ ಅಸೋಸಿಯೇಶನ್ ಮುಂಬಯಿ ಸಂತೋತ್ಸವಗಳು ಸಾಮಾಜಿಕ ಜವಾಬ್ದಾರಿ ಅರಿವಿಗೆ ಪೂರಕ : ಫಾ| ಐವಾನ್ ಡಿಅಲ್ಮೇಡಾ;

Voiceoftulunadu

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ವಿಗ್ರಹ ರಚನಾ ಕಾರ್ಯಕ್ಕೆ ಮುಹೂರ್ತ: ಕುಬೇರಾ ತಂಡಕ್ಕೆ ಶಾರದಾ ಮಾತೆ, ನವ ದುರ್ಗೆಯರ ವಿಗ್ರಹ ನಿರ್ಮಾಣಕ್ಕೆ ವೀಳ್ಯ ;

Voiceoftulunadu

Leave a Comment