November 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಉಚ್ಚಿಲ ದಸರಾ – 2026: ಅ. 12ರಂದು ಸಿಎಂ ಡಿ. ಕೆ. ಶಿವಕುಮಾರ್ ಭೇಟಿ: ಡಾ. ಜಿ. ಶಂಕರ್ ,ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ ಡಿಕೆಶಿ ;

ವರದಿ /ಚಿತ್ರ : ಈ ಮೀಡಿಯಾ

ಉಚ್ಚಿಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅ. 12 ರಂದು ಅಪರಾಹ್ನ 4 ಗಂಟೆಗೆ ಶ್ರೀಕ್ಷೇತ್ರ ಉಚ್ಚಿಲಕ್ಕೆ ಆಗಮಿಸಿ, ಉಡುಪಿ ಉಚ್ಚಿಲ ದಸರಾ ವೈಭವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ, ಉಡುಪಿ ಉಚ್ಚಿಲ ದಸರಾದ ರೂವಾರಿ ನಾಡೋಜ ಡಾ. ಶಂಕರ್ ಹೇಳಿದ್ದಾರೆ.

ಅ.12 ರಂದು సీఎం ಡಿಕೆ ಶಿವಕುಮಾರ್ಅವರು, ಮಧ್ಯಾಹ್ನ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಮಹಿಳಾ ದಸರಾ ಉದ್ಘಾಟಿಸುವರು. ಈ ಸಂದರ್ಭ ಮುಖ್ಯಮಂತ್ರಿಯವರನ್ನು ಅಭಿನಂದಿಸಲಾಗುವುದು. ಅವಿಭಜಿತ ಜಿಲ್ಲೆಯ ಬಂದರುಹಾಗೂ ಮಹಿಳಾ ಮೀನುಗಾರರ ಸಮಸ್ಯೆಗಳ ಕುರಿತು ಮನವಿ ನೀಡಲಾಗುವುದು.

ದಸರಾ ಪ್ರಯುಕ್ತ ನಡೆಯುತ್ತಿರುವ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲಿದ್ದಾರೆ. ಇದೇ ವೇಳೆ ದಸರಾ ಅಂಗವಾಗಿ ಆಯೋಜಿಸಿರುವ ವಸ್ತುಪ್ರದರ್ಶನಕ್ಕೂ ಭೇಟಿ ನೀಡಲಿದ್ದಾರೆ ಎಂದೂ ಡಾ. ಜಿ ಶಂಕರ್ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಹೇಳಿದ್ದಾರೆ.

Related posts

ಸಾಲಿಗ್ರಾಮ : ಶ್ರೀ ಗುರು ನರಸಿಂಹನ ಸನ್ನಿಧಿಯಲ್ಲಿ ತೃತೀಯ ಶ್ರಾವಣ, ಶನಿವಾರದ ಸಂಭ್ರಮ :25 ಸಾವಿರಕ್ಕೂ ಮಿಕ್ಕಿ ಜನರಿಂದ ಸಾಲಿಗ್ರಾಮ ದೇವರ ದರ್ಶನ ;

Voiceoftulunadu

ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ : ಹೊಸ ಬೆಳೆಯ ಆಶೀರ್ವಾದ, ಹೂಗಳ ಅರ್ಪಣೆ ಹಾಗೂ ಕುಟುಂಬದ ಒಗ್ಗಟ್ಟಿನ ಹಬ್ಬ ;

Voiceoftulunadu

ಟೀಮ್ ಮಾರುತಿ ಮೂಳೂರು: ಐದನೇ ವರ್ಷದ ಪಿಲಿ ಪೆಜ್ಜೆ ಊದು ಸೇವೆ, ವಿದ್ಯಾರ್ಥಿವೇತನ, ಸನ್ಮಾನವಿದ್ಯಾರ್ಥಿ ಆಸರೆ : 2 ಲಕ್ಷ 35 ಸಾವಿರ ರೂ. ವಿದ್ಯಾರ್ಥಿ ವೇತನ ವಿತರಣೆ ;

Voiceoftulunadu

Leave a Comment