September 4, 2026
Uncategorizedಜಿಲ್ಲಾ ಸುದ್ದಿಫ್ಯಾಷನ್/ಬ್ಯೂಟಿ ಝೋನ್ರಾಜ್ಯ/ದೇಶವಾಣಿಜ್ಯ/ಉದ್ಯಮಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ ಮಲಬಾರ್ ಗೋಲ್ಡ್‌ನಿಂದ ರಕ್ತದಾನ ಶಿಬಿರ– ರಕ್ತದಾನಿಗಳಿಗೆ ಸನ್ಮಾನಕಾರ್ಯಕ್ರಮ ಉದ್ಘಾಟಿಸಿದ ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್;

ವರದಿ /ಚಿತ್ರ: ಈ ಮೀಡಿಯಾ

ಉಡುಪಿ : ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಇದರ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉಡುಪಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ, ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ಅವರು ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ೪೦೦೦೦ ಯುನಿಟ್ ರಕ್ತದ ಕೊರತೆ ಇದೆ. ಕೆಲವೊಂದು ಕಾಯಿಲೆಗಳಿಗೆ ಪ್ರತಿ ತಿಂಗಳಿಗೆ ರಕ್ತ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳುವುದರ ಜೊತೆಗೆ ಅದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೂಡ ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿ ನ್ಯಾಯವಾದಿ ಹಬೀಬ್ ಅಲಿ ಖಾದರ್ ಮಾತನಾಡಿ, ರಕ್ತದಾನ ಎಂಬುದು ಶ್ರೇಷ್ಠ ಮಾನವೀಯ ಸೇವೆಯಾಗಿದೆ. ರಕ್ತವನ್ನು ಯಾವುದೇ ಫ್ಯಾಕ್ಟರಿಯಿಂದ ತಯಾರಿಸಲು ಸಾಧ್ಯವಿಲ್ಲ. ಆದುದರಿಂದ ಮನುಷ್ಯರೇ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಬೇಕು. ಇದರಿಂದ ರಕ್ತದ ಕೊರತೆಯನ್ನು ನಿಗೀಸಬಹುದು ಎಂದು ಹೇಳಿದರು.

ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ನಿಕೇತಾ ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿ, ರಕ್ತದಾನ ಮಾಡುವುದರಿಂದ ಒಬ್ಬರ ಜೀವ ಅಲ್ಲ, ಒಟ್ಟು ಮೂವರ ಜೀವವನ್ನು ಉಳಿಸಬಹುದಾಗಿದೆ. 18 ವರ್ಷ ಮೇಲ್ಪಟ್ಟವರು 60ವರ್ಷ ಪ್ರಾಯದವರೆಗೂ ರಕ್ತದಾನ ಮಾಡಬಹುದು. ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವವರು 65 ವರ್ಷಗಳವರೆಗೂ ರಕ್ತ ದಾನ ಮಾಡಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಕ್ತದಾನಿಗಳಾದ ರಾಕೇಶ್ ಬಂಗೇರ ಪಲಿಮಾರು, ರೋಯ್ಸ್ ಉದ್ಯಾವರ, ಬದ್ರುದ್ದೀನ್ ಎಚ್.ಹೆಜಮಾಡಿ, ರಫೀಕ್ ಕಲ್ಯಾಣಪುರ ಹಾಗೂ ಉದಯ ಕರ್ಕೇರ ಪಿತ್ರೋಡಿ ಅವರನ್ನು ಸನ್ಮಾನಿಸ ಲಾಯಿತು. ಅಧ್ಯಕ್ಷತೆಯನ್ನು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖಾ ಮುಖ್ಯಸ್ಥ ವಿಜಯ ಕುಮಾರ್ ವಹಿಸಿದ್ದರು.

ಸಾಮಾಜಿಕ ಕಾರ್ಯಕರ್ತೆ ವಿನುತಾ ಕಿರಣ್, ಮಂಗಳೂರು ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ವ್ಯವಸ್ಥಾಪಕರಾದ ಪುರಂದರ ತಿಂಗಳಾಯ, ಮುಸ್ತಪಾ ಎ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಉಪಸ್ಥಿತರಿದ್ದರು. ಸಿಬ್ಬಂದಿ ದಿವ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಘ್ನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಸಿಬ್ಬಂದಿ ಸಹಿತ ಹಲವು ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.

Related posts

ಇಂಗ್ಲೆಂಡ್‌ನಿಂದ ಫ್ರಾನ್ಸ್‌ಗೆ 13 ಗಂಟೆ 5 ನಿಮಿಷಗಳಲ್ಲಿ ಈಜು :ಇಂಗ್ಲಿಷ್ ಕ್ಯಾನಲ್ ರಿಲೇ ಈಜಿದ ಮಂಗಳೂರಿನ ಮೊದಲ ವೈದ್ಯ ಡಾ. ಗುರುಪ್ರಸಾದ್ ಭಟ್ ;

Voiceoftulunadu

ಶ್ರೀರಸ್ತು ಸೌಹಾರ್ದ ಸೊಸೈಟಿ ವತಿಯಿಂದ ಮಕ್ಕಳಿಗೆ ಸಹಕಾರ ಧ್ವಜ ಚಿತ್ರ ಬಿಡಿಸುವ ಸ್ಪರ್ಧೆ :ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಆರ್.ವಿ. ಕುಂದರ್ ;

Voiceoftulunadu

ಕಾಪು ತಾಲೂಕಿನಾಧ್ಯಂತ ಸಂಭ್ರಮದ ನಾಗರ ಪಂಚಮಿನಾಗನ ಶಿಲಾ ಮೂರ್ತಿಗೆ ಹಾಲು, ಸೀಯಾಳದ ಅಭಿಷೇಕ ಮಾಡಿದ ಜನತೆ ;

Voiceoftulunadu

Leave a Comment