November 3, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ: ಇನ್ನಂಜೆ ಎಸ್.ವಿ.ಎಚ್. ಕಾಲೇಜು ಮೈದಾನದಲ್ಲಿ ನಡೆದ ಕ್ರೀಡಾಕೂಟಎಸ್.ವಿ.ಎಚ್ ಪದವಿಪೂರ್ವ ಕಾಲೇಜು ಇನ್ನಂಜೆ ;

ವರದಿ/ ಚಿತ್ರ: ಈ ಮೀಡಿಯಾ

ಶಿರ್ವ: ಶಾಲಾ ಶಿಕ್ಷಣ ಇಲಾಖೆ ಮತ್ತು ಇನ್ನಂಜೆ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಕಾಪು ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಬಾಲಕ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟ ಶುಕ್ರವಾರ ಇನ್ನಂಜೆಯಲ್ಲಿ ನಡೆಯಿತು.ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ತ್ರೋಬಾಲ್ ಪಂದ್ಯಾಟ ಉದ್ಘಾಟಿಸಿದರು.

ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಬಂದಿರುವ ಪ್ರತಿಭಾವಂತರು ಕ್ರೀಡಾ ಮತ್ತುಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವುದು ಇತಿಹಾಸ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕ್ರೀಡಾ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಇನ್ನಂಜೆ ಸಮೂಹ ಎಸ್.ವಿ.ಎಚ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾ‌ರ್, ಉಡುಪಿ ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ জে.ರಾಧಾಕೃಷ್ಣ ಎಸ್. ಐತಾಳ್, ಉದಯ್ ಇನ್ನಂಜೆ, ಇನ್ನಂಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಾಲಿನಿ ಶೆಟ್ಟಿ ಪ್ರಾಂಶುಪಾಲ ರಾಜೇಂದ್ರ ಪ್ರಭು, ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಶೆಟ್ಟಿ ಉಪಸ್ಥಿತರಿದ್ದರು.

ಕಾಪು ತಾಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿತು.

Related posts

ಜಗದ್ಗುರು ಶ್ರೀ ಮಧ್ವಾಚಾರ್ಯ ವೃತ್ತ, ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಮಾರ್ಗ ಉದ್ಘಾಟನೆ : ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ, 39 ನೇ ಚಾತುರ್ಮಾಸ್ಯದಲ್ಲಿ ಮಹತ್ವದ ಕೊಡುಗೆ ;

Voiceoftulunadu

ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಗುಂಡಿನ ದಾಳಿಗೆ ಬಲಿ. ಉದ್ಯಮಿ ಪ್ರಿನ್ಸ್ ಪಾಯಿಂಟ್ ಡೇವಿಡ್ ಡಿಸೋಜಾ ಮೃತಪಟ್ಟವರು;

Voiceoftulunadu

ಮುದರಂಗಡಿ ಎಸ್ ಐ ಆರ್ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ;

Voiceoftulunadu

Leave a Comment