September 5, 2026
Uncategorizedಕ್ರೈಮ್ಕ್ರೈಮ್/ಅವಘಡಜಿಲ್ಲಾ ಸುದ್ದಿರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ಸರ್ವೀಸ್ ರಸ್ತೆಯಲ್ಲಿ ವೇಗದೂತ ಬಸ್ಸುಗಳ ಪರಸ್ಪರ ಢಿಕ್ಕಿ, ಸಾರ್ವಜನಿಕರ ಆಕ್ರೋಶ, ಬಸ್ಸು ಠಾಣೆಗೆ: ಸಂದೇಶ್ ಟ್ರಾವೆಲ್ಸ್ ಬಸ್ಸು ಮತ್ತು ಆನಂದ್ ಟ್ರಾವೆಲ್ಸ್ ಚಾಲಕರ ಉದ್ದೇಶಪೂರ್ವಕ ಅಪಘಾತ;

ವರದಿ /ಚಿತ್ರ :ಈ ಮೀಡಿಯಾ

ಕಾಪು : ಬಸ್ಸಿನಲ್ಲಿ ಪ್ರಯಾಣಿಕರು ವೇಗದೂತ ತುಂಬಿದ್ದಾಗಲೇ ಬಸ್ಸುಗಳು ಉದ್ದೇಶಪೂರ್ವಕವಾಗಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದ ಘಟನೆ ಸೋಮವಾರ ಬೆಳಿಗ್ಗೆ ಕಾಪು ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.ಕಾಪು ಸರ್ವಿಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಆನಂದ್ ಟ್ರಾವೆಲ್ಸ್ ಬಸ್ಸು, ನಿಲ್ದಾಣದಲ್ಲಿ ನಿಂತಿದ್ದ ಸಂದೇಶ್ ಟ್ರಾವೆಲ್ಸ್ ಬಸ್ಸಿಗೆ ಉದ್ದೇಶಪೂರ್ವಕವಾಗಿ ಹಿಂದಿನಿಂದ ಆಗಮಿಸಿ ಡಿಕ್ಕಿ ಹೊಡೆದ ಪರಿಣಾಮ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಉಂಟಾಗಿದೆ.

ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಸಂದೇಶ್ ಟ್ರಾವೆಲ್ಸ್ ಬಸ್ಸು ಮತ್ತು ಆನಂದ್ ಟ್ರಾವೆಲ್ಸ್ಬಸ್ಸಿನ ಚಾಲಕ ಮತ್ತು ನಿರ್ವಾಹಕರ ನಡುವೆ ಟೈಮಿಂಗ್ಸ್ ವಿಚಾರದಲ್ಲಿ ಉದ್ಯಾವರದಿಂದಲೇ ಆರೋಪ ಪ್ರತ್ಯಾರೋಪಗಳು ಕಂಡುಬಂದಿದ್ದು, ಸಂದೇಶ್ ಟ್ರಾವೆಲ್ಸ್ ಕಾಪು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಲು ನಿಲ್ಲಿಸಿದ್ದ ಸಂದರ್ಭ ಪರಸ್ಪರ ಜಗಳ ಉಂಟಾಗಿದೆ.

ಸಂದೇಶ್ ಟ್ರಾವೆಲ್ಸ್ ಬಸ್ಸಿನ ಚಾಲಕ ಕಾಪು ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸಿದ್ದ ಸಂದರ್ಭ ಹಿಂದಿನಿಂದ ಬಂದ ಆನಂದ್ ಟ್ರಾವೆಲ್ಸ್ ಬಸ್ ನ ಚಾಲಕ ನೇರವಾಗಿ ಬಸ್ಸಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ಎರಡು ಬಸ್ ಗಳಲ್ಲಿದ್ದ ಪ್ರಯಾಣಿಕರು ಅಲುಗಾಡಿದ್ದು, ಆತಂಕದಿಂದ ಬೊಬ್ಬೆ ಹೊಡೆದಿದ್ದಾರೆ.ಇದರ ಬಳಿಕ ಎರಡು ಬಸ್ ನ ಚಾಲಕರು ಪರಸ್ಪರ ದೋಷಾರೋಪನೆ ಮಾಡಿಕೊಂಡಿದ್ದು ಕಾಪು ಸರ್ವಿಸ್ ರಸ್ತೆಯಲ್ಲಿ ಸುಮಾರು ಹದಿನೈದುಕಾಲ ನಿಮಿಷಗಳ ಸಂಚಾರ ಅಸ್ತವ್ಯಸ್ತಗೊಂಡಿತು.

ಈ ಸಂದರ್ಭ ಸಾರ್ವಜನಿಕರು ಮತ್ತು ರಿಕ್ಷಾ ಚಾಲಕರು ಎಷ್ಟು ಮನವೊಲಿಸಿದರೂ ಸ್ಥಳದಿಂದ ತೆರಳಲು ಹಿಂಜರಿದ ಬಸ್ ಚಾಲಕರುಗಳು ಬಸ್ಸುಗಳನ್ನು ಅಡ್ಡಬಿಟ್ಟು ಇತರ ವಾಹನಗಳ ಸಂಚಾರಕ್ಕೂ ತೊಂದರೆ ಉಂಟು ಮಾಡಿದ್ದಾರೆ. ಇದರಿಂದಾಗಿ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ತೀವ್ರ ಅಸ್ತವ್ಯಸ್ತಗೊಂಡಿತು.ಸ್ಥಳೀಯರು ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬಂದು ಎರಡೂ ಬಸ್ ಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ.ಕಾಪು ಸರ್ವಿಸ್ ರಸ್ತೆಯಲ್ಲಿ ಎಕ್ಸ್ ಪ್ರೆಸ್ ಬಸ್ ಚಾಲಕರ ಕಿತ್ತಾಟ ಹಿಂದಿನಿಂದಲೂ ನಡೆಯುತ್ತಿದ್ದು ಸರ್ವಿಸ್ ರಸ್ತೆಯಲ್ಲಿ ಎಕ್ಸ್ ಪ್ರೆಸ್ ಬಸ್ಥಳ ಸಂಚಾರ ನಿಷೇಧದ ಕೂಗಿಗೆ ಮತ್ತಷ್ಟು ಬಲಬಂದಂತಾಗಿದೆ.

Related posts

ಲಾವಣ್ಯ ಹತ್ಯಾ ಪ್ರಕರಣ: ಹಂತಕ ಚೇತನ್ ಗೆ ನ್ಯಾಯಾಂಗ ಬಂಧನಬಿ.ಸಿ.ರೋಡಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯ ಹತ್ಯೆಗೈದ ಪ್ರಕರಣ;

Voiceoftulunadu

ಪಂಚವರ್ಣ ಆಸಾಡಿ ಒಡ್ಸ್‌ : ಸಾಧಕ ಮಹಿಳಾ ಪುರಸ್ಕಾರಕ್ಕೆ ರೇಡಿಯೋ ಕುಂದಾಪ್ರದ ಜ್ಯೋತಿ ಸಾಲಿಗ್ರಾಮ ಆಯ್ಕೆಅಗಸ್ಟ್ ೯ ರಂದು ಮಣೂರು ರಾಜಲಕ್ಷ್ಮೀ ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮ;

Voiceoftulunadu

ಜೇಸಿಐ ವಲಯ ತರಬೇತುದಾರರಾಗಿ ಮನು ಶೆಟ್ಟಿ ಇನ್ನಾ ಆಯ್ಕೆ. ವಲಯ ಹದಿನೈದರ ಅತಿ ಕಿರಿಯ ವಯಸ್ಸಿನ ತರಬೇತುದಾರೆ ;

Voiceoftulunadu

Leave a Comment