November 3, 2026
Uncategorizedಅಂತಾರಾಷ್ಟ್ರೀಯಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸ

ಗುಜರಾತ್‌ನ ಬರೋಡದಲ್ಲಿ ಸಂಭ್ರಮಿಸಲ್ಪಟ್ಟ ಬ್ರಹ್ಮಶ್ರೀ ನಾರಾಯಣ ಗುರು ೧೭೨ನೇ ಜಯಂತಿ ;

ವರದಿ /ಚಿತ್ರ: ರೋನ್ಸ್ ಬಂಟ್ವಾಳ್

ಮುಂಬಯಿ (ಆರ್‌ಬಿಐ), ಸೆ.೧೦: ಗುಜರಾತ್ ಬಿಲ್ಲವರ ಸಂಘವು ಕಳೆದ ಭಾನುವಾರ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕೃತಿಕ ಸಭಾ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜಯಂತಿಯನ್ನು ಭಜನಾ ಸಂಕೀರ್ತನೆ ಇತ್ಯಾದಿ ಧಾರ್ಮಿಕ, ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಪೂರ್ವಕವಾಗಿ ಸಂಭ್ರಮಿಸಿತು.

ನಾರಾಯಣ ಗುರುಗಳ ಜಯಂತ್ಯೋತ್ಸವ ನಿಮಿತ್ತ ವೇದಮೂರ್ತಿ ಧನಂಜಯ ಶಾಂತಿ ಮುಂಬಯಿ ನೇತ್ರತ್ವದಲ್ಲಿ ಗುರುವಿನ ಮೂರ್ತಿಗೆ ಅಭಿಷೇಕ, ಗಾಯತ್ರೀ ಪರಿವಾರದವರಿಂದ ಗುರುಪೂಜೆ, ಮಾತ -ಪಿತೃ ಗಳ ಪಾದ ಪೂಜೆ, ಮಹಾಮಂಗಳಾರತಿ ನೆರವೇರಿತು.

ಸಂಘದ ಗೌರವಾಧ್ಯಕ್ಷ ದಯಾನಂದ ಬೊಂಟ್ರ (ಬೆಳ್ಮಣ್ಣು) ಬರೋಡಾ ಇವರ ದಕ್ಷ ಮಾರ್ಗದರ್ಶನದೊಂದಿಗೆ ಜಿಬಿಎಸ್ ಅಧ್ಯಕ್ಷ ಹರೀಶ್ ವಿ.ಪೂಜಾರಿ ಮಡ್ಯಾರ್ (ದೇರಳಕಟ್ಟೆ) ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಮಾಜ ಅಹ್ಮದಾಬಾದ್ ಅಧ್ಯಕ್ಷ ಎಚ್ ವಿ. ಬೆನ್ನೂರ್, ಶ್ರೀ ಕ್ಷೇತ್ರ ಗೆಜ್ಜೆಗೀರಿ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಕುಂತಲಾ ಕೋಟ್ಯಾನ್, ಶ್ರೀಕ್ಷೇತ್ರ ಗೆಜ್ಜೆಗಿರಿ ಗೌರವಾಧ್ಯಕ್ಷರುಗಳಾದ ಜಯಂತ್ ನಡುಬೈಲ್ ಮತ್ತು ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಚಿಲಿಂಬಿ, ತುಳು ಸಂಘ ಬರೋಡ ಶ್ರೀಮತಿ ಪ್ರಮೀಳಾ ಶಶಿಧರ್ ಶೆಟ್ಟಿ , ಕರ್ನಾಟಕ ಸಮಾಜ, ಅಹ್ಮದಾಬಾದ್ ಉಪಾಧ್ಯಕ್ಷ ರಾಜೇಂದ್ರ ನಾಯ್ಕ್, ತುಳು ಐಸಿರಿ ವಾಪಿ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪಟ್ಲ ಫೌಂಡೇಶನ್ ಗುಜರಾತ್ ಅಧ್ಯಕ್ಷ ಅಜಿತ್ ಶೆಟ್ಟಿ, ಜಿಬಿಎಸ್ ಮುಖ್ಯ ಸಂಯೋಜಕ ವಾಸು ವಿ.ಸುವರ್ಣ, ಮಾಜಿ ಅಧ್ಯಕ್ಷರುಗಳಾದ ಮನೋಜ್ ಸಿ.ಪೂಜಾರಿ, ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಸೂರತ್), ಮನೋಜ್ ಎಂ ಪೂಜಾರಿ ಅಹ್ಮದಾಬಾದ್, ಜಿಬಿಎಸ್ ವಾಪಿ ಶಾಖೆಯ ಗೌರವಾಧ್ಯಕ್ಷ ಸದಾಶಿವ ಪೂಜಾರಿ, ಸಂಯೋಜಕ ರಮೇಶ್ ಪೂಜಾರಿ, ಜಿಎಸ್‌ಬಿ ಸೂರತ್ ಶಾಖೆಯ ಸಂಯೋಜಕ ಪ್ರಭಾಕರ್ ಎಸ್ ಪೂಜಾರಿ ಮಹಿಳಾಧ್ಯಕ್ಷೆ ಚಂದ್ರಿಕಾ ಅಶೋಕ್ ಕೋಟಿಯನ್, ಕಾರ್ಯದರ್ಶಿ ಸಂತೋಷ್ ಸಾಲಿಯನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಅತಿಥಿಗಳು ಮಕ್ಕಳಿಗೆ ಶಿಕ್ಷಣ ನಿಧಿ, ವಿದ್ಯಾಥಿsವೇತನ ವಿತರಿಸಿ ಶುಭಕೋರಿದರು.

Related posts

ಚಾಲಕನ ಪುತ್ರಿಗೆ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು : ಆಳ್ವಾಸ್ ಪಿಯು ಶಿಕ್ಷಣದ ದತ್ತು ಯೋಜನೆಯಿಂದ ವೈದ್ಯಕೀಯ ಕನಸು ನನಸು ;

Voiceoftulunadu

ಎಸ್ಕೆಪಿಎ ಕಾಪು ವಲಯದ ವಾರ್ಷಿಕ ಮಹಾ ಸಭೆ ಸಂಪನ್ನ : ಕಾರ್ಯಕ್ರಮ ಉದ್ಘಾಟಿಸಿದ ಉಭಯ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ;

Voiceoftulunadu

ಪೊಳಲಿ :ಕ್ಷೇತ್ರದಲ್ಲಿ ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲು ಮನವಿ ;

Voiceoftulunadu

Leave a Comment