November 3, 2026
Uncategorizedಆರೋಗ್ಯಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

‘ಜನ ಸೇವೆಯೇ ಈಶ ಸೇವೆ’ ಪ್ರತಿಪಾದಿಸಿದ ‘ಸೇವಾ ಸಂಕಲ್ಪ ಅಭಿಯಾನ’ : ಕುತ್ಯಾರು ನವೀನ್ ಶೆಟ್ಟಿ ಬಿಜೆಪಿಯಿಂದ “ಅಪ್ಪ ಅಮ್ಮ ಅನಾಥಾಲಯ”ದಲ್ಲಿ ಅನ್ನದಾನ, ಸಹ ಭೋಜನ ಕಾರ್ಯಕ್ರಮ ;

ವರದಿ /ಚಿತ್ರ :ಈ ಮೀಡಿಯಾ

ಉಡುಪಿ: ‘ಜನ ಸೇವೆಯೇ ಈಶ ಸೇವೆ’ ಎಂದು ನಂಬಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಹಾಗೂ ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಲಯದಲ್ಲಿ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಹಮ್ಮಿಕೊಂಡಿರುವ ಅನ್ನದಾನ ಮತ್ತು ಸಹ ಭೋಜನ ಕಾರ್ಯಕ್ರಮ ಜರಗಿತು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ಜನೋಪಯೋಗಿ ಭಾವನಾತ್ಮಕ ಕಾರ್ಯಕ್ರಮಗಳು ಇನ್ನಷ್ಟು ಕಡೆ ಮಾಡಬೇಕಿದೆ ಎಂದರು. ಅನಾಥಾಲಯದಲ್ಲಿದ್ದ ಹಿರಿಯ ನಾಗರಿಕರೊಂದಿಗೆ ಮಾತನಾಡಿ, ಅವರ ಆಶೀರ್ವಾದವನ್ನು ಪಡೆದು,ಅವರೊಂದಿಗೆ ನಡೆಸಲಾಯಿತು.

ಸಹಭೋಜನಈ ಸಂದರ್ಭದಲ್ಲಿ ಬಿಜೆಪಿ ಎಸ್. ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಳೂರು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಎಸ್.ಸಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಕೈಪುಂಜಾಲು, ಎಸ್. ಸಿ. ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹಿರಿಯಣ್ಣ ಅಮ್ಮುಂಜೆ, ಅನಿತಾ ಸಾಲ್ಯಾನ್, ಎಸ್.ಸಿ. ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಗೋಪಾಲ ಕಳಂಜಿ, ಎಸ್.ಸಿ. ಮೋರ್ಚಾ ಜಿಲ್ಲಾ ಕಾರ್ಯದರ್ಶಿಗಳಾದ ಸದಾನಂದ ಚಾಂತಾರು, ಸುರೇಶ ಮೂಡುಬಗೆ, ಸುಂದರ ಬಿ.ಕಾರ್ಕಳ, ಬಿಜೆಪಿ ಉಡುಪಿ ಗ್ರಾಮಾಂತರ ಪ್ರಧಾನಕಾರ್ಯದರ್ಶಿ ದೇವಾನಂದ ನಾಯಕ್, ಮಹಿಳಾ ಮೋರ್ಚಾ ಉಡುಪಿ ಗ್ರಾಮಾಂತರ ಅಧ್ಯಕ್ಷೆ ರಮ್ಯಾ ರಾವ್, ಎಸ್.ಸಿ. ಮೋರ್ಚಾ ಬೈಂದೂರು ಅಧ್ಯಕ್ಷ ಅಶೋಕ್ ಎನ್.ಡಿ., ಉಪಾಧ್ಯಕ್ಷ ಪ್ರವೀಣ್ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಅಕ್ಷಯ್, ಎಸ್.ಸಿ. ಮೋರ್ಚಾ ಕುಂದಾಪುರ ಅಧ್ಯಕ್ಷ ಮಂಜುನಾಥ್ ಬಳ್ಳೂರು, ಎಸ್.ಸಿ. ಮೋರ್ಚಾ ಉಡುಪಿ ಗ್ರಾಮಾಂತರ ಉಪಾಧ್ಯಕ್ಷ ಪುಷ್ಪರಾಜ್ ಉಳ್ಳಾಲ, ಜಿಲ್ಲಾ 2.2. ಮೋರ್ಚಾ ಕಾರ್ಯಕಾರಿಣಿ ಸದಸ್ಯರುಗಳಾದ ಯಶೋಧ ಹಿರಿಯಡ್ಕ, ನಾಗರತ್ನ ಕುಂದಾಪುರ ಹಾಗೂ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಶಿರ್ವ ಆರೋಗ್ಯ ಮಾತ ದೇವಾಲಯದಲ್ಲಿ ಸಂಭ್ರಮದ ಮೋಂತಿಫೆಸ್ಟ್ ಆಚರಣೆ : ಹೊಸ ಬೆಳೆಯ ಆಶೀರ್ವಾದ, ಹೂಗಳ ಅರ್ಪಣೆ ಹಾಗೂ ಕುಟುಂಬದ ಒಗ್ಗಟ್ಟಿನ ಹಬ್ಬ ;

Voiceoftulunadu

ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ 10 ಲಕ್ಷ ವಂಚನೆ : ಮುಂಬಯಿಲ್ಲಿ ಮಹಿಳೆಯ ಬಂಧನ;

Voiceoftulunadu

ಎನ್ ಎಸ್ ಎಸ್ : ಉಡುಪಿ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಕಾಪು ಬೀಚ್ ಸ್ವಚ್ಛತಾ ಅಭಿಯಾನ : ಅಭಿಯಾನಕ್ಕೆ ಸಹಕಾರ ನೀಡಿದ ಕಾಪು ಬೀಚ್ ಫ್ರೆಂಡ್ಸ್ ;

Voiceoftulunadu

Leave a Comment