ವರದಿ /ಚಿತ್ರ :ದಿತೇಶ್ ಪೂಜಾರಿ ಮಂಗಳೂರು
ಮಂಗಳೂರು: ರೈಲ್ವೆ ಪ್ರಯಾ ಣಿಕರಿಗೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಅನ್ನು ಇನ್ನಷ್ಟು ಸುಲಭ ಹಾಗೂ ಪಾರದರ್ಶಕಗೊಳಿಸುವ ಉದ್ದೇಶ ದಿಂದ ಭಾರತೀಯ ರೈಲ್ವೆಯ ಪಶ್ಚಿಮ ಮಧ್ಯ ರೈಲ್ವೆ (West Central Rail-way – WCR) ಹೊಸ ಟೋಕನ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.
ಈ ಹೊಸ ವ್ಯವಸ್ಥೆ ಆಗಸ್ಟ್ 1, 2026ರಿಂದ ಜಾರಿಗೆ ಬರಲಿದೆ.ಹೊಸ ವ್ಯವಸ್ಥೆಯಡಿ, ತತ್ಕಾಲ್ ಟಿಕೆಟ್ ಪಡೆ ಯಲು ಮೀಸಲಾತಿ ಕೌಂಟರ್ಗಳಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಇರುವುದಿಲ್ಲ. ಪ್ರಯಾಣಿಕರಿಗೆ ನಿಗದಿತ ಸಮಯದಲ್ಲಿ ಟೋಕನ್ ವಿತರಿಸಿ, ಅದೇ ಟೋಕನ್ ಆಧಾರದಲ್ಲಿ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ನಡೆಸಲಾ ಗುತ್ತದೆ. ಇದರಿಂದ ಜನಸಂದಣಿ ಕಡಿ ಮೆಯಾಗುವುದರ ಜೊತೆಗೆ ಬುಕ್ಕಿಂಗ್ ಪ್ರಕ್ರಿಯೆಯೂ ವೇಗವಾಗಲಿದೆ.
ಟೋಕನ್ ವಿತರಣೆಯ ಸಮಯ ಎಸಿ ತತ್ಕಾಲ್ ಟಿಕೆಟ್: ಬೆಳಿಗ್ಗೆ8.30ರಿಂದ 9.00ರವರೆಗೆ” ನಾನ್-ಎಸಿ ತತ್ಕಾಲ್ ಟಿಕೆಟ್: ಬೆಳಿಗ್ಗೆ 9.00 ರಿಂದ 9.30ರವರೆಗೆ ಪ್ರತಿ ಮೀಸಲಾತಿ ಕೌಂಟರ್ನಲ್ಲಿ ಆರಂಭದಲ್ಲಿ ಎಸಿ ವಿಭಾಗಕ್ಕೆ 10 ಟೋಕನ್ ಹಾಗೂ ನಾನ್-ಎಸಿ ವಿಭಾಗಕ್ಕೆ 15 ಟೋಕನ್ ನೀಡಲಾಗುತ್ತದೆ. ಆದರೆ ಪ್ರಯಾಣಿಕರ ಸಂಖ್ಯೆ ಹಾಗೂ ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಈ ಸಂಖ್ಯೆಯಲ್ಲಿ ಬದಲಾವಣೆ ಮಾಡಬಹುದಾಗಿದೆ.
ಕುಟುಂಬ ಸದಸ್ಯರಿಗೆ ಆದ್ಯತೆ : ಹೊಸ ವ್ಯವಸ್ಥೆಯಲ್ಲಿ ಟೋಕನ್ಗಳನ್ನು ‘ಎ’ ಮತ್ತು ‘ಬಿ’ ಎಂಬ ಎರಡು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ‘ಎ’ ವರ್ಗ: ಕುಟುಂಬ ಸದಸ್ಯರಿಗೆ ಟಿಕೆಟ್ ಬುಕ್ ಮಾಡುವವರಿಗೆ ‘ಬಿ’ ವರ್ಗ: ಇತರರ ಪರವಾಗಿ ಟಿಕೆಟ್ ಬುಕ್ ಮಾಡುವವರಿಗೆ ಮೊದಲು ‘ಎ’ ವರ್ಗದ ಪ್ರಯಾಣಿಕರ ಬುಕ್ಕಿಂಗ್ ಪೂರ್ಣಗೊಳಿಸಿದ ಬಳಿಕವೇ ‘ಏ’ ವರ್ಗದವರಿಗೆ ಅವಕಾಶ ನೀಡಲಾ ಗುತ್ತದೆ. ‘ಎ’ ವರ್ಗದ ಟೋಕನ್ ಪಡೆಯಲು ಬುಕ್ ಮಾಡುವ ವ್ಯಕ್ತಿಯ ಫೋಟೋ ಗುರುತಿನ ಚೀಟಿ ಹಾಗೂಪ್ರಯಾಣಿಕರ ಮಾನ್ಯ ಫೋಟೋ ಐಡಿ ಸಲ್ಲಿಸಬೇಕು.
ದುರುಪಯೋಗಕ್ಕೆ ತಡೆ : ಒಮ್ಮೆ ನೀಡಲಾದ ಟೋಕನ್ ಅನ್ನು ಬೇರೆ ವ್ಯಕ್ತಿಗೆ ವರ್ಗಾಯಿಸಲು ಅವಕಾಶ ಇರುವುದಿಲ್ಲ. ಎಲ್ಲಾ ಟೋಕನ್ ಹೊಂದಿರುವವರ ಬುಕ್ಕಿಂಗ್ ಮುಗಿದ ಬಳಿಕವೂ ತತ್ಕಾಲ್ ಕೋಟಾದಲ್ಲಿ ಸೀಟುಗಳು ಉಳಿ ದಿದ್ದರೆ, ನಂತರ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಆಧಾರದ ಮೇಲೆ ಇತರ ಪ್ರಯಾಣಿಕರಿಗೆ ಟಿಕೆಟ್ ನೀಡ ಲಾಗುತ್ತದೆ.
ಈ ಹೊಸ ವ್ಯವಸ್ಥೆ ಯಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೆಚ್ಚು ಪಾರದರ್ಶಕ, ವೇಗದ ಹಾಗೂ ಪ್ರಯಾಣಿಕ ಸ್ನೇಹಿಯಾಗಲಿದೆ ಎಂದು ಕೋಟಾ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವ ಸ್ಥಾಪಕ (ಸೀನಿಯರ್ ಡಿಸಿಎಂ) ಸೌರಭ್ ಜೈನ್ ತಿಳಿಸಿದ್ದಾರೆ.
