September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ದೈವಾರಾಧಕರಿಗೆ ನೆರವು ಅಗತ್ಯ: ಶ್ರೀ ರಮಾನಂದ ಗುರೂಜಿ ಉಡುಪಿ;

ವರದಿ /ಚಿತ್ರ : ವಿನೋದ್ ಶೆಟ್ಟಿ ಉಡುಪಿ

ಉಡುಪಿ : ದೈವಾರಾಧಕರಜೀವನವು ಅತ್ಯಂತ ಸವಾಲಿನಿಂದ ಕೂಡಿದ್ದು, ವರ್ಷದಲ್ಲಿ ಕೆಲವೇ ತಿಂಗಳುಗಳು ಮಾತ್ರ ಅವರಿಗೆ ದೈವಸೇವೆಯ ಮೂಲಕ ಉದ್ಯೋಗ ಲಭ್ಯವಾಗುತ್ತದೆ. ಉಳಿದ ದಿನಗಳಲ್ಲಿ ಕೂಲಿ ಸೇರಿದಂತೆ ವಿವಿಧ ವೃತ್ತಿಗಳನ್ನು ಅವಲಂಬಿಸಬೇಕಿದೆ. ಆದ್ದರಿಂದ ಸರಕಾರ ದೈವಾರಾಧಕರಿಗಾಗಿ ವಿಶೇಷ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು ಎಂದು ದೊಡ್ಡಣಗುಡ್ಡೆ `ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಹೇಳಿದರು.

ಅಖಿಲ ಭಾರತ ದೈವಾರಾಧಕರ ಒಕ್ಕೂಟದ ಕೇಂದ್ರೀಯ ಉಡುಪಿ ಜಿಲ್ಲೆ ವತಿಯಿಂದ ನಗರ ಘಟಕವನ್ನು ಬುಡ್ಡಾರು ಕ್ಷೇತ್ರದ ಶ್ರೀ ಮೂಕಾಂಬಿಕಾ ದೇವಿ ಕೊರಗಜ್ಜ ಸನ್ನಿಧಾನದಲ್ಲಿ ಅವರು ಬುಧವಾರ ಉದ್ಘಾಟಿಸಿ ಮಾತನಾಡಿದರು.ದೈವಾರಾಧನೆ ಕುರಿತು ಅಪಸ್ವರ ಹಾಗೂ ತಪ್ಪು ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಸಂಘಟಿತ ಪ್ರಯತ್ನಗಳ ಮೂಲಕ ಅವುಗಳಿಗೆ ಸಮರ್ಪಕ ಉತ್ತರ ನೀಡುವುದು ಮತ್ತು ಸಂಪ್ರದಾಯದ ಘನತೆ ಕಾಪಾಡುವುದು ಅಗತ್ಯವಾಗಿದೆ ಎಂದರು.

ಉದ್ಯಮಿ ಹಾಗೂ ಸಮಾಜಸೇವಕ ರಾಯಲ್ ರತ್ನಾಕರ ಶೆಟ್ಟಿ ಒಕ್ಕೂಟದ ಕೇಂದ್ರೀಯ ಸಂಸ್ಥಾಪಕ ಅಧ್ಯಕ್ಷ ವಿನೋದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ, ಕೇಂದ್ರೀಯ ಕೋಶಾಧಿಕಾರಿ ಸಮಿತ್ ಶೆಟ್ಟಿ, ಉಪಾಧ್ಯಕ್ಷ ನವೀನ್ ಪಾತ್ರಿ, ಜತೆ ಕಾರ್ಯದರ್ಶಿ ಶ್ಯಾಮ್, ಸಂಘಟನ ಕಾರ್ಯದರ್ಶಿ ಕೃಷ್ಣ ಪೂಜಾರಿ ಅಂಜಾರು ಉಪಸ್ಥಿತರಿದ್ದರು.

ಸಮ್ಮಾನ: ಕುಂಜಿಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದ ಪ್ರಧಾನ ಅರ್ಚಕ ಶೇಷು ಅವರನ್ನು ಸಮ್ಮಾನಿಸಲಾಯಿತು. ನಗರ ಘಟಕದ ನೂತನ ಅಧ್ಯಕ್ಷ ಪ್ರಭಾಕರ, ಉಪಾಧ್ಯಕ್ಷ ರಾಮ್, ಕಾರ್ಯದರ್ಶಿ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ

ಕುಂಜಿಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ಸಮಿತಿ ಸದಸ್ಯ ಬೋಜ ಶೇರಿಗಾರ್, ಕೇಂದ್ರೀಯ ಒಕ್ಕೂಟದ ಪ್ರಮುಖಸಂದೇಶ್ ಸದಸ್ಯರಾದ ಭವಿಷ್, ಪೂಜಾರಿ, ಉಮೇಶ್ ಶೆಟ್ಟಿ ಹಾವಂಜೆ ಶ್ರೀ ಮೂಕಾಂಬಿಕಾ ದುರ್ಗಾಪರಮೇಶ್ವರಿ ಕೊರಗಜ್ಜ ಸನ್ನಿಧಾನ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮೂಕಾಂಬಿಕಾ ದುರ್ಗಾಪರಮೇಶ್ವರಿ ದೈವಸ್ಥಾನದ ನೇಮ ಸಮಿತಿ ಕಾರ್ಯದರ್ಶಿ ಸನ್ಮಾಂತರು, ಶೇಸು ಗುರಿಕಾರ,ಒಕ್ಕೂಟದನಗರಘಟಕದಅಧ್ಯಕ್ಷ ಪ್ರಭಾ ಮದಿಪು, ಅಭಿಜಿತ್ ಪಾಂಡೇಶ್ವರ, ಶ್ರೀ ತುಳಸಿಯಮ್ಮ ಶಿರಸಿಯಮ್ಮ, ಮಾರಿಕಾಂಬೆ ಕೊರಗಜ್ಜ ಕ್ಷೇತ್ರ ಕಲಿಬೈಲು ಧರ್ಮದರ್ಶಿಗಳು, ಪಿತ್ರೋಡಿ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ, ಬಜೆ ಬಬ್ಬುಸ್ವಾಮಿ ದೈವಸ್ಥಾನ, ಕೊಳಲಗಿರಿ ಕಾರ್ತಿಬೈಲು ಶ್ರೀ ಬಬ್ಬು ಸ್ವಾಮಿ ದೈವಸ್ಥಾನ, ತೆಂಕಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಊರ ಹತ್ತು ಸಮಸ್ತರು, ಪ್ರಶಾಂತ ಪಾತ್ರಿ ಮೊದಲಾದವರಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಪಿಲಾರಿನಲ್ಲಿ ಪೌಷ್ಟಿಕ ಆಹಾರ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿದ ಕುತ್ಯಾರು ವಿದ್ಯಾದಾಯಿನಿ ಶಾಲೆಯ ಶಿಕ್ಷಕಿ ಶ್ರೀಮತಿ ಶರ್ಮಿಳ

Voiceoftulunadu

ರಾಷ್ಟ್ರೀಯ ಸಿನಿಮಾ ಪುರಸ್ಕಾರ,ಕನ್ನಡಕ್ಕೆ 4, ತುಳುಗೆ 1 ಗೌರವಕನ್ನಡಕ್ಕೆ ಮೊದಲ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ,ಮಿಥ್ಯ ಚಿತ್ರಕ್ಕೆ ರೂಪಶ್ರೀಗೆ ಅತ್ಯುತ್ತಮ ಪೋಷಕ ನಟಿ ಗೌರವ , ಆತಿಶ್ ಶೆಟ್ಟಿ ಅತ್ಯುತ್ತಮ ಬಾಲ ನಟಮಿಥ್ಯ ಅತ್ಯುತ್ತಮ ಚಿತ್ರ ,ಉತ್ತಮ ಪುಸ್ತಕ: ಕೆಂಜಾರು ಪ್ರದೀಪ್ ಶೆಟ್ಟಿ ,ಉತ್ತಮ ತುಳು ಚಿತ್ರ ಇಂಬು ;

Voiceoftulunadu

ಆಟಿ ಕೂಟಗಳಿಗೆ ಮೂಲ್ಕಿ ಯುವವಾಹಿನಿಯೇ ಪ್ರೇರಣೆ: ದಯಾನಂದ ಹೆಜ್ಜಾಡಿ;

Voiceoftulunadu

Leave a Comment