ವರದಿ/ ಚಿತ್ರ :ದಿತೇಶ್ ಮಂಗಳೂರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ‘ಒಂದು ಗಂಟೆ, ಒಂದು ದಿನ, ಒಟ್ಟಾಗಿ’ ಎಂಬ ಆಶಯದೊಂದಿಗೆ ‘ಸ್ವಚ್ಛತಾ ಹೀ ಸೇವಾ-2026’ ಅಂಗವಾಗಿ ಶ್ರಮ ದಾನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು.
ಉಪಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ನೋಡಲ್ ಅಧಿಕಾರಿಯಾದ ಶ್ರೀಮತಿ ಜಯಲಕ್ಷ್ಮೀ ರಾಯಕೋಡ್ ಅವರ ನೇತೃತ್ವ ದಲ್ಲಿ ನಡೆದ ಶ್ರಮದಾನ ಕಾರ್ಯಕ್ರಮ ದಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸ್ವಚ್ಛತಾ ಪ್ರತಿಜ್ಞೆಯನ್ನು ಬೋಧಿಸಿ, ಸ್ವಚ್ಛತೆ ಕಾಪಾಡುವ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸು ವಂತೆ ಕರೆ ನೀಡಲಾಯಿತು.
