November 3, 2026
Uncategorizedಅಂತಾರಾಷ್ಟ್ರೀಯರಾಜಕೀಯರಾಜ್ಯ/ದೇಶವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ನವದೆಹಲಿ ಸ್ವಿಸ್‌ ಅಧ್ಯಕ್ಷರ ಜೊತೆ ಔತಣಕೂಟದಲ್ಲಿ ಪ್ರಧಾನಿ ಮೋದಿ, ಡಾ. ಆನಂದ ಸಂಕೇಶ್ವರ ಭಾಗಿ : ನವದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಗಣ್ಯರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ವಿಆರ್ಎಲ್ ಮುಖ್ಯಸ್ಥ ಉಪಸ್ಥಿತಿ ;

ನವದೆಹಲಿ: ಮೂರು ದಿನಗಳ ಭಾರತ ಭೇಟಿಗಾಗಿ ಸೋಮವಾರ ನವದೆಹಲಿಗೆ ಆಗಮಿಸಿದ ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.ನಂತರ ಪರ್ಮೆಲಿನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ವ್ಯಾಪಾರ, ಹೂಡಿಕೆ, ಎಐ, ರಕ್ಷಣಾ ಉತ್ಪಾದನೆ, ವಿಜ್ಞಾನ ಮತ್ತು ತಂತ್ರಜ್ಞಾನ ರಂಗಗಳಲ್ಲಿ ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಹಾಗೂ ಜಾಗತಿಕ ವಿದ್ಯಮಾನಗಳ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರು. ಭಾರತ-ಸ್ವಿಜರ್ಲೆಂಡ್ ನಡುವೆ 2024ರ ಮಾರ್ಚ್ಚಲ್ಲಿ ಆಗಿರುವ ಸಮಗ್ರ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (ಟಿಎಪಿಎ)ದಿಂದಾಗಿ ಆರ್ಥಿಕ ಸಹಕಾರದಲ್ಲಿ ಆಗುತ್ತಿರುವ ಏರುಗತಿಯನ್ನು ಉಭಯ ನಾಯಕರು ಉಲ್ಲೇಖಿಸಿದರು.

ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಗೌರವಾರ್ಥ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ನವದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಆಯ್ದ ಗಣ್ಯರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಆಹ್ವಾನಿತರಾಗಿ ಭಾಗಿಯಾಗಿದ್ದರು.

ಭಾರತದ 13 ಗಣ್ಯರು ಹಾಗೂ ಸ್ವಿಸ್ ನಿಯೋಗದವರು ಸೇರಿ 40 ಪ್ರಮುಖರು ಔತಣಕೂಟದಲ್ಲಿ ಭಾಗವಹಿಸಿದ್ದರು.ಸ್ವಿಜರ್ಲೆಂಡಿನ ಪ್ರಥಮ ಮಹಿಳೆ, ಸ್ವಿಸ್ ಅಧ್ಯಕ್ಷ ಗೈ ಪರ್ಮೆಲಿನ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಡಾ. ಆನಂದ ಸಂಕೇಶ್ವರ.

Related posts

ಮಲ್ಲಾರು ಯುವಕ ಮಂಡಲದ ಅಧ್ಯಕ್ಷರಾಗಿ ಅನ್ವರ್ ಅಲಿ ಕಾಪು ಆಯ್ಕೆ :ಗೌರವ ಅಧ್ಯಕ್ಷರಾಗಿ ಮುಹಮ್ಮದ್ ಸಾಧಿಕ್ ಸಾಹೇಬ್ ಆಯ್ಕೆ;

Voiceoftulunadu

ರಂಗದ ಮೇಲೊಂದು ಹೆಣ್ಣಿನ ಜೀವ: ಕಂತ್ತೂರಿನ ದಯಾನಂದ ಎಂಬ ಕಲಾ ತಪಸ್ವಿ!

Voiceoftulunadu

ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ನದಿ ಸ್ನಾನಘಟ್ಟ ಲೋಕಾರ್ಪಣೆ: ಸ್ವರ್ಣೆಗೆ ಬಾಗಿನ ಸಮರ್ಪಣೆ ;

Voiceoftulunadu

Leave a Comment