November 3, 2026
Uncategorizedಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ 50ಮಂದಿಯ ಅಧ್ಯಯನ ತಂಡ ಭೇಟಿ : ಬೆಂಗಳೂರು, ಹಾಸನ ಹಾಗೂ ವಿಜಯನಗರ ಜಿಲ್ಲೆಗಳ ಸಹಕಾರ ಸಂಘಗಳ ಅಧಿಕಾರಿಗಳ ಭೇಟಿ ;

ವರದಿ /ಚಿತ್ರ: ಈ ಮೀಡಿಯಾ

ಪಡುಬಿದ್ರಿ: ಬೆಂಗಳೂರು, ಹಾಸನಸಹಕಾರ ಹಾಗೂ ವಿಜಯನಗರ ಜಿಲ್ಲೆಗಳ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಬೆಂಗಳೂರು ಕೇಂದ್ರ ಸಹಕಾರಿ ಬ್ಯಾಂಕ್ನ ಸಿಬ್ಬಂದಿ ಒಳಗೊಂಡ 50 ಮಂದಿಯ ಅಧ್ಯಯನ ತಂಡವು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ಭೇಟಿ ನೀಡಿತು.

ಮಂಗಳೂರು ನಬಾರ್ಡ್ ತರಬೇತಿ ಸಂಸ್ಥೆಯ ಉಪ ಮಹಾಪ್ರಬಂಧಕ ಯೋಗೀಶ್ ಅವರ ನೇತೃತ್ವದಲ್ಲಿ ಆಗಮಿಸಿದ ತಂಡವು ಸೊಸೈಟಿಯ ಕಾರ್ಯವೈಖರಿ, ಸದಸ್ಯರಿಗೆ ನೀಡುತ್ತಿರುವ ವಿವಿಧ ಸೇವೆ-ಸೌಲಭ್ಯಗಳು ಹಾಗೂ ಸಂಸ್ಥೆಯ ಅಭಿವೃದ್ಧಿಯ ಕುರಿತು ಮಾಹಿತಿ ಪಡೆದುಕೊಂಡಿತು.ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಅವರು ಸಂಸ್ಥೆಯು ನಡೆದು ಬಂದಿರುವ ಹಾದಿ, ಸದಸ್ಯರಿಗೆ ಒದಗಿಸುತ್ತಿರುವ ವಿವಿಧ ಸೇವೆಗಳು ಮತ್ತು ಸೌಲಭ್ಯಗಳ ಕುರಿತು ವಿವರಿಸಿದರು.

ಯಾವುದೇ ಸಹಕಾರ ಸಂಸ್ಥೆಯ ಅಭಿವೃದ್ಧಿಯಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ನಡುವಿನ ಹೊಂದಾಣಿಕೆ ಅತ್ಯಂತ ಮುಖ್ಯವಾಗಿದ್ದು, ರಹಿತವಾಗಿ ಸೇವೆ ರಾಜಕೀಯ ನಿರ್ವಹಿಸಿದಲ್ಲಿ ಸಹಕಾರ ಸಂಸ್ಥೆಗಳು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ನಬಾರ್ಡ್ ತರಬೇತಿ ಸಂಸ್ಥೆಯ ಉಪ ಮಹಾಪ್ರಬಂಧಕ ಯೋಗೀಶ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡುಬಿದ್ರಿಸಹಕಾರಿ ವ್ಯವಸಾಯಿಕ ಸೊಸೈಟಿ ಉತ್ತಮವಾಗಿ ಕಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಹಲವು ಅಡಚಣೆಗಳನ್ನು ಎದುರಿಸಿದ್ದರೂ, ಅವುಗಳನ್ನು ಮೀರಿ ಸಂಸ್ಥೆ ಅಭಿವೃದ್ಧಿ ಸಾಧಿಸಿರುವುದು ಗಮನಾರ್ಹ ಎಂದರು.

ಕಾರ್ಯಕ್ರಮದಲ್ಲಿ ಸೊಸೈಟಿ ಅಧ್ಯಕ್ಷ ವೈ. ಸುಧೀರ್ ಕುಮಾರ್, ನಿರ್ದೇಶಕರಾದ ಕೃಷ್ಣ ಬಂಗೇರ, ಹಸನ್ ಬಾವಾ, ವಲಯ ಮೇಲ್ವಿಚಾರಕ ಬಾಲ ಗೋಪಾಲ್ ಬಲ್ಲಾಳ್ ಕೆ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್., ಸಹಾಯಕ ಕಾರ್ಯನಿರ್ವಹಣಾಧಿಕಾರಿ ದೀಪಕ್ ಸಾಲ್ಯಾನ್, ನಬಾರ್ಡ್ ಗ್ರೇಡ್-ಬಿ ಅಧಿಕಾರಿ ಹಾಗೂ ಸೊಸೈಟಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಮನೆಯಲ್ಲಿನ ಮಂದಿರದಿಂದಲೇ ಸಂಸ್ಕಾರಯುತ ಬದುಕು ಸಾಧ್ಯವಾಗುವುದು : ಗೋರೆಗಾಂವ್‌ನ ವಾರ್ಷಿಕ ಗಣಪತಿ ಉತ್ಸವದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ;

Voiceoftulunadu

ಮೂಲ್ಕಿ ರೈಲ್ವೆ ನಿಲ್ದಾಣದಲ್ಲಿ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರಿಂದ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆ : ಕೊಂಕಣ ರೈಲ್ವೆ ನಷ್ಟದಲ್ಲಿದೆ ವಿಲೀನಗೊಳಿಸುವುದೇ ಸೂಕ್ತ ಪರಿಹಾರ : ಬ್ರಿಜೇಶ್ ಚೌಟ;

Voiceoftulunadu

ಕೊಡ್ಮಾಣ್ :38ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ;

Voiceoftulunadu

Leave a Comment