ವರದಿ/ ಚಿತ್ರ : ರೋನ್ಸ್ ಬಂಟ್ವಾಳ್

ಮುಂಬಯಿ, ಅ.೦೪: ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ಇದರ ೪ನೇ ವಾರ್ಷಿಕ ಮಹಾಸಭೆಯು ಕಳೆದ ರವಿವಾರ (ಸೆ. ೨೭)ರಂದು ರವಿವಾರ ಪೋರ್ಟ್ನಲ್ಲಿರುವ ಪಿ. ಎಂ ರಸ್ತೆಯಲ್ಲಿರುವ ಎಲ್.ಐ. ಸಿ ಕ್ಯಾಂಟೀನ್ನಲ್ಲಿ ಫೌಂಡೇಶನ್ನ ಅಧ್ಯಕ್ಷ ಸುರೇಂದ್ರ ಎ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಮೈಂದನ್ ಅವರು ಸದಸ್ಯರನ್ನು ಸ್ವಾಗತಿಸಿ, ವರದಿ ವಾಚಿಸಿದರು. ಜತೆ ಕಾರ್ಯದರ್ಶಿ ಅಶೋಕ ಸುವರ್ಣ ಅವರು ೩ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿಯನ್ನು ಓದಿದರು. ಕರುಣಾಕರ ಕಾಪು ಸೂಚಸಿದರು. ಆರ್. ಎಚ್ ಶೆಟ್ಟಿಗಾರ್ ಅನುಮೋದಿಸಿದರು.

ಕೋಶಾಧಿಕಾರಿ ಟಿ. ವಿ ಪೂಜಾರಿ ಅವರು ಆಯವ್ಯಯ ಲೆಕ್ಕ ಪಟ್ಟಿಗಳನ್ನು ಮಂಡಿಸಿದರು. ದಿನೇಶ್ ಹೆಮ್ಮಾಡಿ ಅವರು ಸೂಚಸಿದರು. ಬಾಬು ಡಿ.ಶೆಟ್ಟಿ ಅನುಮೋದಿಸಿ ಮಂಜೂರಿ ಮಾಡಲಾಯಿತು. ಮುಂದಿನ ವರ್ಷಕ್ಕೆ ಕೃಷ್ಣ ನಾಯಕ್ ಕಂಪೆನಿಯನ್ನು ಲೆಕ್ಕ ಪರಿಶೋಧಕರಾಗಿ ಆಯ್ಕೆ ಮಾಡಲಾಯಿತು.

ಮಹಾಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಆಡಳಿತ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸುರೇಂದ್ರ ಎ.ಪೂಜಾರಿ ಅವರನ್ನು ಪುನರಾಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಯಶವಂತ್ ಎನ್. ಪೂಜಾರಿ, ಸಂತೋಷ್ ಕುಮಾರ್ ಎಸ್. ಶೆಟ್ಟಿ, ಹರೀಶ್ ಜಿ.ಮೈಂದನ್ ಮತ್ತು ಟಿ. ವಿ. ಪೂಜಾರಿ ಪ್ರಧಾನ ಕಾರ್ಯದರ್ಶಿಯಾಗಿ ಜಯರಾಮ್ ಎಂ. ಪೂಜಾರಿ ವಸಾಯಿ, ಕೋಶಾಧಿಕಾರಿಯಾಗಿ ಮಂದಾರ್ ಎನ್. ಹೆಗ್ಡೆ ಜತೆ ಕಾರ್ಯದರ್ಶಿಗಳಾಗಿ ಅಶೋಕ ಎಸ್. ಸುವರ್ಣ ಮತ್ತು ಹರೀಶ್ ಎಸ್. ಪೂಜಾರಿ ಸಹ ಕೋಶಾಧಿಕಾರಿಯಾಗಿ ಹೇಮಂತ್ ಪಿ. ಪೂಜಾರಿ ಸಮಿತಿ ಸದಸ್ಯರಾಗಿ ಉಮೇಶ್ ಎಸ್.ಶೆಟ್ಟಿ, ಸದಾನಂದ ಎಸ್. ಶೆಟ್ಟಿ, ಮಂಜುನಾಥ್ ಕೆ. ಪೂಜಾರಿ, ಭಾಸ್ಕರ್ ಕೆ. ಜತ್ತನ್, ದಿನೇಶ್ ಮೊಗವೀರ, ಶ್ರೀಕಾಂತ್ ಬಿ. ಪೂಜಾರಿ, ಕರುಣಾಕರ ಕೆ. ಕಾಪು, ಸತೀಶ್ ಬೆಳ್ಚಡ, ಸಚ್ಚಿದಾನಂದ ಜಿ. ನಾಯ್ಕ್, ಶಿವಾನಂದ ಬಂಗೇರ, ಬಾಬು ಡಿ. ಶೆಟ್ಟಿ ಆರ್ ಎಚ್. ಶೆಟ್ಟಿಗಾರ್ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಸಂಘದ ಸದಸ್ಯರು ಒಗ್ಗಟ್ಟು, ಪರೋಪಕಾರ ಹಾಗೂ ಸಮಾಜ ಸೇವೆಯ ಸಂಘದ ಧೋರಣೆಗೆ ಬದ್ದರಾಗಿದ್ದು, ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಕರೆ ನೀಡಿದರು.


ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಜಯರಾಮ್ ಕೆ . ಪೂಜಾರಿ ರಸಾಯನಿ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಅವರು ಉಪಸ್ಥಿತರಿದ್ದು ಕರ್ನಾಟಕ ಸಂಘದ ಸಮುಚ್ಚಯ ನಿರ್ಮಾಣದ ಪ್ರಗತಿ ಮಾಹಿತಿ ನೀಡಿ, ಕನ್ನಡಿಗರಿಗೆ ಅಗತ್ಯ ವಾಗಿ ಬೇಕಾಗಿರುವ ಈ ಸಂಘದ ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸಿ ಸಹಕರಿಸಬೇಕೆಂದು ಮನವಿ ಪತ್ರ ವನ್ನು ಅಧ್ಯಕ್ಷರಿಗೆ ನೀಡಿ ವಿನಂತಿ ಮಾಡಿದರು. ಅಶೋಕ ಸುವರ್ಣ ವಂದಿಸಿದರು.



1. President Mr Surendra A Poojary
2. Vice President Mr Santosh Kumar Shetty
3. Vice President Mr Yashwant Poojary
4. Vice President Mr Harish Maindan
5. Vice President Mr T V Poojary
6. Hon. Secretary Mr Jayaram Poojary
7. Treasurer Mr Mandara Hegde .
