November 3, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮಾಜಿ ಸಚಿವ ರಮಾನಾಥ ರೈ ಚಲಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ. ಚಾಲಕನಿಗೆ ಗಂಭೀರ ಗಾಯ, ರಮಾನಾಥ ರೈ ಸೇರಿ ಇತರರಿಗೆ ಗಾಯ ;

ಕೃಪೆ: ಕುಂದೇಶ್ವರ ಬುಲೆಟಿನ್

ಕಾರ್ಕಳ : ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಕಾರ್ಕಳ ತಾಲೂಕಿನ ಸಾಣೂರು ಜಂಕ್ಷನ್ ಬಳಿ ಸೆಪ್ಟೆಂಬರ್ 20ರ ಮಧ್ಯಾಹ್ನ ಭೀಕರ ಮುಖಾಮುಖಿ ರಸ್ತೆ ಅಪಘಾತ ಸಂಭವಿಸಿದೆ.

ಘಟನೆಯ ವಿವರ : ಮಾಜಿ ಸಚಿವ ರಮಾನಾಥ ರೈ ಅವರು ಕಾರ್ಯಕ್ರಮ ನಿಮಿತ್ತ ಕಾರ್ಕಳಕ್ಕೆ ಆಗಮಿಸುತ್ತಿದ್ದ ವೇಳೆ, ಕಾರ್ಕಳದಿಂದ ಮೂಡುಬಿದಿರೆ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದ ‘ವಿಶಾಲ್’ ಹೆಸರಿನ ಖಾಸಗಿ ಬಸ್ ನಡುವೆ ಸಾಣೂರು ಬಳಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

ಗಾಯಾಳುಗಳ ವಿವರ : ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ರಮಾನಾಥ ರೈ ಹಾಗೂ ಇತರರು: ಕಾರಿನಲ್ಲಿದ್ದ ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ನಾಲ್ವರು ಪ್ರಯಾಣಿಕರು ಹಾಗೂ ಬಸ್‌ನಲ್ಲಿದ್ದ 6 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಎಲ್ಲರನ್ನೂ ತಕ್ಷಣವೇ ಕಾರ್ಕಳದ ರೋಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಖಂಡರ ಭೇಟಿ:ವಿಷಯ ತಿಳಿಯುತ್ತಿದ್ದಂತೆಯೇ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಕಾಂಗ್ರೆಸ್ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಸುಧಾಕರ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ಮುಖಂಡರು ಆಸ್ಪತ್ರೆಗೆ ಧಾವಿಸಿ ರಮಾನಾಥ ರೈ ಅವರ ಆರೋಗ್ಯ ವಿಚಾರಿಸಿದ್ದಾರೆ.

ಮುಖ್ಯಮಂತ್ರಿ ಡಿಕೆಶಿ ಕುಮಾರ್ ಹೆಲಿಕ್ಯಾಪ್ಟರ್ ನಲ್ಲಿ ನಿನ್ನೆ ತಾನೆ ಕುಳಿತು ಆನಂದಿಸಿದ್ದರು.

Related posts

ಜಾಗತಿಕ ಡಿಜಿಟಲ್ ಲೋಕದ ಸಾಧಕ ಅತುಲ್ ಹೆಗ್ಡೆ ಸ್ವರ್ಗಸ್ಥ;

Voiceoftulunadu

ದೆಹಲಿಯಲ್ಲಿ ಆಟಿ ಅಮಾವಾಸ್ಯೆ ಆಚರಣೆ: ತುಳುವರಿಂದ ಕಷಾಯ, ಮೆಂತ್ಯ ಗಂಜಿ ವಿತರಣೆ ಪ್ರಕಾಶ್ ಶೆಟ್ಟಿ ಉಳೆಪಾಡಿ ಹಾಗೂ ಉಸ್ಮಾನ್ ಅಬ್ದುಲ್ ಷರೀಫ್‌ ನೇತೃತ್ವ ;

Voiceoftulunadu

ಮಲಬಾ‌ರ್ ವಿಶ್ವಸಾಹಿತ್ಯ ಪುರಸ್ಕಾರ 2026ಕ್ಕೆ’ ರಾಜ್ಯದ ಮೂವರು ಹಿರಿಯ ಸಾಹಿತಿಗಳ ಆಯ್ಕೆ: ಸಾಹಿತಿ ಮೇಟಿ ಮುದಿಯಪ್ಪ ನೆನಪಿನ ವಿಶ್ವಸಾಹಿತ್ಯ ಪುರಸ್ಕಾರ ;

Voiceoftulunadu

Leave a Comment