September 4, 2026
Uncategorizedಕ್ರೈಮ್/ಅವಘಡಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಲಾವಣ್ಯ ಹತ್ಯಾ ಪ್ರಕರಣ: ಹಂತಕ ಚೇತನ್ ಗೆ ನ್ಯಾಯಾಂಗ ಬಂಧನಬಿ.ಸಿ.ರೋಡಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯ ಹತ್ಯೆಗೈದ ಪ್ರಕರಣ;

ಬಂಟ್ವಾಳ: ಬಿ.ಸಿ.ರೋಡಿನ ಕೆಎಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನ ಯುವತಿ ಲಾವಣ್ಯ ಗೌಡಳನ್ನು ಬರ್ಬರವಾಗಿ ಹತ್ಯೆಗೈದ ಹಂತಕ ಚೇತನ್ ನನ್ನು ಗುರುವಾರ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಈತನಿಗೆ ಆ.12 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

11 ದಿನಗಳ ಬಳಿಕ ಹಂತಕ ಚೇತನ್ ನನ್ನು ಸೋಮವಾರ ಅಧಿಕೃತವಾಗಿ ಬಂಧಿಸಿರುವ ಬಂಟ್ವಾಳ ನಗರ ಪೊಲೀಸರು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಜು.31 ರ ವರೆಗೆ ನಾಲ್ಕುದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು.ಮಂಗಳವಾರ ಸಂಜೆ ಕೃತ್ಯ ನಡೆದ ಸ್ಥಳ ಬಿ.ಸಿ.ರೋಡಿನ ಕೆಎಸ್ ಆರ್ಟಿಸಿ ಬಸ್ ನಿಲ್ದಾಣ, ಬುಧವಾರದಂದು ಕೃತ್ಯಕ್ಕೆ ಬಳಿಸಿದ ಮಾರಕಾಸ್ತ್ರ ಖರೀದಿಸಿದ ಉಪ್ಪಿನಂಗಡಿಯಲ್ಲಿನ ಅಂಗಡಿಯೊಂದಕ್ಕೆ ಸಹಿತ ವಿವಿದೆಡೆ ಕರದೊಯ್ದು ಸ್ಥಳ ಮಹಜರು ಪ್ರಕ್ರಿಯೆಯನ್ನು ಪೊಲೀಸರ ತನಿಖಾ ತಂಡ ಪೂರೈಸಿದೆ.

ಪೊಲೀಸ್ ಕಸ್ಟಡಿ ಶುಕ್ರವಾರದ ವರೆಗಿದ್ದರೂ, ಸ್ಥಳಮಹಜರು ಸೇರಿದಂತೆ ಎಲ್ಲಾ ಪ್ರಕ್ರಿಯೆಯನ್ನು ಗುರುವಾರ ಮಧ್ಯಾಹ್ನದ ಒಳಗಾಗಿ ಪೂರೈಸಿರುವ ಪೊಲೀಸರ ತನಿಖಾ ತಂಡ, ಸಂಜೆಯ ವೇಳೆಗೆ ಮತ್ತೆ ನ್ಯಾಯಾಲಯದ ಮುಂದೆ ಲಾವಣ್ಯ ಹಂತಕ ಚೇತನ್ ನನ್ನು ಹಾಜರುಪಡಿಸಲಾಗಿದೆ. ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಜುಲೈ 16 ರಂದು ಸಂಜೆ 5.45 ರ ಹೊತ್ತಿಗೆ ಮನೆಗೆ ತೆರಳಲೆಂದು ໖.. ರೋಡ್ ಕೆಎಸ್ es ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದಕಕ್ಕೆಪದವಿನ ಅಮಾಯಕ ಯುವತಿ ಲಾವಣ್ಯಳನ್ನು ಹೊಂಚು ಹಾಕಿ ಕುಳಿತಿದ್ದ ಗೇರುಕಟ್ಟೆಯ ಚೇತನ್ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ರಾಜಾರೋಷವಾಗಿ ಪರಾರಿಯಾಗಿದ್ದ. ಹತ್ಯೆಗೈದು ಕಾರಿನಲ್ಲಿಮರುದಿನ ಮಂಗಳೂರು ಹೊರವಲಯದ ಪಚ್ಚನಾಡಿಯಲ್ಲಿ ಪೊಲೀಸರ ಬಂಧನಕ್ಕೊಳಗಾಗಿದ್ದ.

ಲಾವಣ್ಯ ತನ್ನ ಪ್ರೀತಿಯನ್ನು ನಿರಾಕರಿಸಿದ ಹಿನ್ನಲೆಯಲ್ಲಿ ಆಕೆಯ ಕೊಲೆಗೆ ಸಂಚು ರೂಪಿಸಿ ಬಿ.ಸಿ. ರೋಡಿನ ಕೆಎಸ್ ಆರ್ ಟಿಸಿ ಬಸ್ನಿಲ್ದಾಣದಲ್ಲಿ ಹಾಡುಹಗಲೇ ಅಲ್ಲಿದ್ದ ಸಾರ್ವಜನಿಕರ బిసి ಸಮ್ಮುಖದಲ್ಲಿ ಮಾರಕಾಸ್ತ್ರ ತನ್ನ ಸೇಡು ತೀರಿಸಿಕೊಡು ಈಗ ಜೈಲುಪಾಲಾಗಿದ್ದಾನೆ.

Related posts

ತುಂಬೆ: ಸೆ 6ರಂದು ಭಾಗ್ಯೋದಯ ಮಿತ್ರ ಕಲಾ ವೃಂದದ ನವೀಕೃತ ಕಟ್ಟಡ ಉದ್ಘಾಟನೆ : ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆ ;

Voiceoftulunadu

ಕೊಡ್ಮಾಣ್:ಸೆ.05ರಂದು ಶ್ರೀ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ ಉತ್ಸವ.

Voiceoftulunadu

ಪಡುಬಿದ್ರಿ: ಜೈಹಿಂದ್ ಟ್ಯೂಬ್ ಕಂಪೆನಿ ಹೊರ ಸೂಸುವ ಹೊಗೆಯಿಂದ ತೊಂದರೆ, ಸಾರ್ವಜನಿಕರ ಆಕ್ರೋಶಹೆಜಮಾಡಿ ಹಾಗೂ ನಡ್ಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಂದ ಅಧಿಕಾರಿಗಳಿಗೆ ದೂರು;

Voiceoftulunadu

Leave a Comment