November 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸ

ವಿಜಯ ಕಾಲೇಜು ಮುಲ್ಕಿ ಜಾಗತಿಕ ಹಳೆ ವಿದ್ಯಾಥಿಗಳ ಸಂಘ ಮುಂಬಯಿ : ಐದನೇ ವಾರ್ಷಿಕ ಮಹಾಸಭೆ ;

ವರದಿ/ ಚಿತ್ರ : ರೋನ್ಸ್ ಬಂಟ್ವಾಳ್

ಮುಂಬಯಿ : ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಟಿತ ವಿಜಯ ಕಾಲೇಜು ಮುಲ್ಕಿ ಜಾಗತಿಕ ಹಳೆ ವಿದ್ಯಾಥಿs ಸಂಘ, ಮುಂಬಯಿ ಇದರ ೫ ನೇ ವಾರ್ಷಿಕ ಸದಸ್ಯರ ಮಹಾಸಭೆ ಗೋರೆಗಾಂವ್ ಪೂರ್ವಾದ ನೆಸ್ಕೋ ದಲ್ಲಿರುವ ಬೈರೂತ್ ಹೋಟೆನನಲ್ಲಿ ಕಳೆಸ ಸೋಮವಾರ(ಸೆ.೨೮) ಅಡ್ವೊಕೇಟ್ ಶೇಖರ್ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ಸಿಎ| ರೋಹಿತಾಕ್ಷ ದೇವಾಡಿಗ ಅವರು ವಾರ್ಷಿಕ ವರದಿಯನ್ನ ಮಂಡಿಸಿದರು. ಖಜಾಂಜಿ ಸರಿತಾ ರಾವ್ ಅವರು ವಾರ್ಷಿಕ ಲೆಕ್ಕಪತ್ರ ಗಳನ್ನು ಮಂಡಿಸಿದರು. ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ ಅವರು ಸಂಘದ ಮುಂದಿನ ವಿವಿಧ ಉದ್ದೇಶಗಳನ್ನು ಸಭಿಕರ ಮುಂದೆ ಇಟ್ಟರು.ಅಡ್ವೊಕೇಟ್ ಶೇಖರ್ ಭಂಡಾರಿ ಅವರು ಮಾತನಾಡಿ ಸಂಘ ಪ್ರತಿವರ್ಷವೂ ತನ್ನ ಕಾಲೇಜಿಗೆ ಬಡವಿದ್ಯಾಥಿsಗಳ ವಿದ್ಯಾರ್ಜನೆಯ ನೆರವಿಗಾಗಿ ೫ ಲಕ್ಷ ರೂಪಾಯಿಯನ್ನು ಕೊಡುತ್ತಾ ಬರುತ್ತಿದೆ.

ಮುಂದಿನ ವರ್ಷಗಳಲ್ಲಿ, ಕಾಲೇಜಿನಲ್ಲಿ ಕುಂದುತ್ತಿರುವ ವಿದ್ಯಾಥಿs ಸಂಖ್ಯೆಯನ್ನ ಹೆಚ್ಚಿಸುವ ವಿವಿಧ ರೂಪುರೇಖೆಗಳನ್ನು ಕಾಲೇಜಿನ ಆಡಳಿತ ಮಂಡಳಿ, ಊರಿನಲ್ಲಿರುವ ಹಳೆವಿದ್ಯಾಥಿs ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸುವ ಉದ್ದೇಶವನ್ನು ಮಾಡಬೇಕು ಎಂದರು.ಸಭೆಯಲ್ಲಿ ಕಾಲೇಜಿನ ಹೆಚ್ಚಿನ ಬಡವಿದ್ಯಾಥಿsಗಳಿಗೆ ಸಹಾಯ ಮಾಡುವ ಉದ್ದೇಶದಿಂದ, ಕಲಿಸುವ ಉಪನ್ಯಾಸಕರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಸಂಘದ ಧನ ಸಂಗ್ರಹದ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷ ವಾಸುದೇವ ಸಾಲಿಯಾನ್ ಅವರು ಧನ ಸಂಗ್ರಹ ಸಮಿತಿಯ ಅಧ್ಯಕ್ಷರಾಗಿ ಹಾಗೂ ಶೆಟ್ಟಿ ಅವರನ್ಮು ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು.ಗೌರವ ಅಧ್ಯಕ್ಷ ವಾಸುದೇವ ಸಾಲಿಯಾನ್ ಅವರು ಮಾತನಾಡುತ್ತಾ ಸಂಘವು ಕಾಲೇಜಿನ ವಿದ್ಯಾಥಿs ಸಂಖ್ಯೆ ಕಡಿಮೆಯಾಗುವುದು ಚಿಂತಾಜನಕ ವಿಷಯ.ಅದಕ್ಕಾಗಿ ಸಂಘವು ನಮ್ಮ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡ ವಿದ್ಯಾರ್ಥಿಗಳನ್ನು ಸೇರಿಸಲು ಮೆರಿಟ್ ಅಂಕಗಳ ಲಕ್ಷ್ಮಣರೇಖೆಯನ್ನು ತೆಗೆದುಹಾಕಿದೆ.

ಮುಂದಿನ ವರ್ಷಗಳಲ್ಲಿ ಕಾಲೇಜಿಗೆ ಹೆಚ್ಚಿನ ಸಹಾಯಧನ ಕೊಡುವ ಉಪಾಯವನ್ನ ಮಾಡುತ್ತಿದೆ ಎಂದರು.ಸಂಘದ ಸ್ಥಾಪಕಾಧ್ಯಕ್ಷ ಶಿರ್ವ ನಿತ್ಯಾನಂದ ಹೆಗ್ಡೆ ಮಾತನಾಡಿ ನಾವೂ ಕಲಿತ ಕಾಲೇಜನ್ನು ಹಳೆವಿದ್ಯಾಥಿsಗಳು ಮರೆಯಬಾರದು ಮತ್ತು ಕಾಲೇಜಿನಲ್ಲಿ ಕಲಿತ ಎಲ್ಲಾ ಹಳೆವಿದ್ಯಾಥಿsಗಳು ತನಗೆ ಸಾಧ್ಯವಿದ್ದಷ್ಟು ಸಂಘಕ್ಕೆ ಅನುದಾನ ಮಾಡಬೇಕು, ನಮ್ಮಕಾಲೇಜಿನ ಹೆಸರನ್ನು ಉಳಿಸಬೇಕು ಎಂದರು.

ಲಾರೆನ್ಸ್ ಡಿಸೋಜಾ ಮಾತನಾಡಿ ನಾವು ಮುಂದಿನ ತಿಂಗಳಲ್ಲಿ ಮಾಡುವ ಸಲಹಾ ಸಮಿತಿ ಸಭೆಯಲ್ಲಿ ಎಲ್ಲಾ ಸಮಿತಿ ಸದಸ್ಯರು ಹಾಜರಿ ಇರಬೇಕು ಹಾಗು ಸಹಾಯ ಹಸ್ತವನ್ನ ನೀಡಬೇಕು ಎಂದರು.

ಪೂರ್ವ ಅಧ್ಯಕ್ಷ ಸಿಎ| ಸೋಮನಾಥ್ ಕುಂದರ್, ಆನಂದ್ ಶೆಟ್ಟಿ, ಕೆ ಎನ್ ಸುವರ್ಣ, ಸಿಎ| ಕಿಶೋರ್ ಸುವರ್ಣ, ಗುಣೇಶ್ ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ತಮ್ಮ ತಮ್ಮ ಅನಿಸಿಕೆಗಳನ್ನು ಸಭೆಯ ಮುಂದೆ ಇಟ್ಟರು.ಸಭೆಯಲ್ಲಿ ಶಿರ್ವ ನಿತ್ಯಾನಂದ ಹೆಗ್ಡೆ, ಪೇಟೆಮನೆ ಪ್ರಕಾಶ್ ಶೆಟ್ಟಿ ಮತ್ತು ಸುನಿಲ್ ಶೆಟ್ಟಿ ಅವರನ್ನು ಆಡಳಿತ ಸಮಿತಿಗೆ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸದಸ್ಯರಾದ ಜೀತೇಂದ್ರ ಶೆಟ್ಟಿ, ಶಂಕರ್ ಸುವರ್ಣ, ಉಷಾ ಶೇಖರ್, ಸ್ವರ್ಣ ಜ್ಯೋತಿ ಸೇರಿದಂತೆ ಹಳೆವಿದ್ಯಾಥಿsಗಳು ಉಪಸ್ಥಿತರಿದ್ದರು. ಉಪ ಅಧ್ಯಕ್ಷ ಭಾಸ್ಕರ್ ಶೆಟ್ಟಿ ವಂದಿಸಿದರು.

Related posts

ಮುಲ್ಕಿ: ಖ್ಯಾತ ವಕೀಲ ಭಾಸ್ಕರ ಹೆಗ್ಡೆ ನಿಧನ : ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ನಿಧನರಾದ ಭಾಸ್ಕರ ಹೆಗ್ಡೆ ;

Voiceoftulunadu

ವಾಹನದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕೊಕೈನ್ ಸಾಗಾಟ ಪತ್ತೆ : ಬೆಂಗಳೂರು ಕೆಂಗೇರಿ ಮೂಲದ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್‌ ಪೊಲೀಸ್‌ ವಶ ;

Voiceoftulunadu

ಉಡುಪಿ; ಕೃಷ್ಣನ ನಾಡಲ್ಲಿ ಅಷ್ಟಮಿ ಸಿದ್ದತೆ, ವಿಟ್ಲಪಿಂಡಿ ಸಂಭ್ರಮ ಅಬ್ಬರಿಸಲಿದ್ದಾರೆ ಹುಲಿ ವೇಷಧಾರಿಗಳು, ಮೊಸರು ಕುಡಿಕೆ ;

Voiceoftulunadu

Leave a Comment