28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ: ಸೇವಾಪತ್ರ ಅನಾವರಣಗೊಳಿಸಿದ ಅದಮಾರು ಈಶಪ್ರಿಯತೀರ್ಥ ಶ್ರೀಪಾದರು;

ವರದಿ /ಚಿತ್ರ :ಈ ಮೀಡಿಯಾ

ಕುಂಜಾರುಗಿರಿ: ಕುಂಜಾರುಗಿರಿ ಶ್ರೀದುರ್ಗೆಯ ಸನ್ನಿಧಾನದಲ್ಲಿ ಶ್ರೀ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಾನುವಾರ ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರದ ಸೇವಾಪತ್ರದ ಅನಾವರಣ ಗೊಳಿಸಿದರು.

ಜೀರ್ಣೋದ್ಧಾರ ಪ್ರಕ್ರಿಯೆ ನಿಮಿತ್ತ ಪ್ರತೀ ಭಾನುವಾರದಂದು ನಡೆಯಲಿರುವ ಸುತ್ತಮುತ್ತಲಿನ ಪರಿಸರ ಶುಚಿತ್ವ ಕಾರ್ಯಕ್ರಮಕ್ಕೆ ಶ್ರೀಪಾದರು ಚಾಲನೆನೀಡಿ, ಮನೋ ನಿಯಮಕರಾದ ರುದ್ರ ದೇವರ ಸೇವೆ ಮಾಡುವುದರೊಂದಿಗೆ ಪರಿಸರ ಶುಚಿತ್ವದೊಂದಿಗೆ ಪರಿಸರ ರಕ್ಷಣೆ ಮಾಡಬೇಕು. ನಾವು ಇರುವ ಪರಿಸರ ಶುದ್ಧಿಯಾಗಿದ್ದರೆ ಮಾತ್ರ ನಮ್ಮ ಮನಸ್ಸು ಶುದ್ಧಿಯಿಂದ ಇರುತ್ತದೆ. ಇದರಿಂದ ದೇವಾ ಸೇವೆ ದೇಶ ಸೇವೆ ಮಾಡಿದಂತಾಗುತ್ತದೆ ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಅದಮಾರು ಮಠದ ಪ್ರಧಾನ ವ್ಯವಸ್ಥಾಪಕರಾದ ಗೋವಿಂದರಾಜ್, ಮಠದ ಅಧಿಕಾರಿಗಳಾದ ನಾಗರಾಜ್ ರಾವ್ಮತ್ತು ನಾಗರಾಜ ತಂತ್ರಿ, ಅರ್ಚಕರಾದ ಗೋಪಾಲಕೃಷ್ಣ ಭಟ್, ಇಂಜಿನಿಯರ್ ಲಕ್ಷ್ಮೀನಾರಾಯಣ ಉಪಾಧ್ಯಾಯ, ಕುರ್ಕಾಲು ಪಟ್ಟಾಚಾವಡಿ ದಿನೇಶ್ ಶೆಟ್ಟಿ, ಪರಶುರಾಮ ಭಜನಾ ಮಂಡಳಿಯ ಅಧ್ಯಕ್ಷ ಕುಳೇದು ಪ್ರಶಾಂತ ಶೆಟ್ಟಿ, ಪಾಜೈ ಫ್ರೆಂಡ್ಸ್ ಅಧ್ಯಕ್ಷ ಸಂತೋಷ್ ಆಚಾರ್ಯ, ಸುಮಾ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಮುಖಂಡ ರಾಕೇಶ್ ಆಚಾರ್ಯ, ಮಾಜಿ ಪಂಚಾಯತ್ ಸದಸ್ಯರಾದ ಸುದರ್ಶನ್ ರಾವ್, ವಿಶ್ವನಾಥ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related posts

ಕಾಪು ಕಡಲೊರೆತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ::ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ಯುಟಿ ಖಾದ‌ರ್ ;

Voiceoftulunadu

ಚೆಢಾನಗರ್‌ನ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ಸುಬ್ರಹ್ಮಣ್ಯ ಸೇವಾ ಸಂಘದ ವಾರ್ಷಿಕ ಸಭೆ ಸಮುದಾಯದ ಹಿತಕ್ಕಾಗಿ ನಿರಂತರ ಸೇವೆ ಅವಶ್ಯ : ಕೆ.ಸುಬ್ಬಣ್ಣ ರಾವ್ ;

Voiceoftulunadu

ಉಡುಪಿ: ಬೊಬ್ಬರ್ಯ, ಕಾಂತೇರಿ, ಜುಮಾದಿ, ಕಲ್ಕುಡ ಹಾಗೂ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನದಲ್ಲಿ ವೈಭವದ ವಾರ್ಷಿಕ ನೇಮೋತ್ಸವ

Voiceoftulunadu

Leave a Comment