November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಸೆಪ್ಟೆಂಬರ್ 18ರಂದು ‘ಟಾಸ್’ ಸಿನಿಮಾ ರಾಜ್ಯಾದ್ಯಂತ ತೆರೆಗೆ;

ವರದಿ/ ಚಿತ್ರ :ದಿತೇಶ್ ಮಂಗಳೂರು

ಮಂಗಳೂರು: ಅವಿಕಾ ಪ್ರೊಡ ಕ್ಷನ್ ಮತ್ತು ಬಿಆರ್ ಬಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿರುವ ಅರ್ಜುನ್ ದೇವ್ ನಿರ್ದೇಶನ, ನಟನೆಯ “ಟಾಸ್” ತುಳು ಸಿನಿಮಾ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ತೆರೆಕಾಣಲಿದೆಂದು ಚಿತ್ರದ ನಿರ್ದೇಶಕ ಅರ್ಜುನ್ ದೇವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್ ರಚನೆ ಸಂಭಾಷಣೆ, ಅರ್ಜುನ್ ದೇವ್ ನಿರ್ದೇಶನ ಮತ್ತು ಅಭಿನಯದ “ಟಾಸ್” ಸಿನಿಮಾದ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ.

ನಿರ್ಮಾಪಕರು: ಪಿ ಆಂಡ್ ವೈ ವಲ್ಡ್ ಟೂರ್ಸ್ ಎಲ್ ಎಲ್ ಪಿ ಸಾಗರ್ ಪೂಜಾರಿ,

ಕಥೆ-ಚಿತ್ರಕಥೆ-ಸಂಭಾಷಣೆ ಗೀತೆಗಳು: ಡಾ. ದೇವ ದಾಸ್ ಕಾಪಿಕಾಡ್.

ನಿರ್ದೇಶಕರು ಅರ್ಜುನ್ ದೇವ್, ಸಹ ನಿರ್ದೇಶಕರು ಯಶಾಂತ್ ಕಲ್ಲಡ್ಕ, ರಾಕೇಶ್ ಬಿ.ಜೆ. ವಿಕ್ರಮ್ ದೇವಾಡಿಗ.

ಸಹಾಯಕ ನಿರ್ದೇಶಕರು ಸೌರವ್ ರಾಮ್ಸುಜಿತ್ ವಿನೋದ್ ಆಶಿಷ್ ರಾವ್ .

ಛಾಯಾಗ್ರಹಣ ಜೋಯೆಲ್ ಶಮನ್ ಡಿ’ಸೋಜಾ, ಸಹಾಯಕ ಛಾಯಾಗ್ರಾ ಹಕರು ಅಮನ್ ಪ್ರಖ್ಯಾತ್, ಕಲಾ ನಿರ್ದೇಶನ ರಾಜೇಶ್ ಕೊಳಕೆ ರಾಜೇಶ್ ಬಾಂಸ್ಕೋಡ್.

ಸಂಕಲನ ಯಶ್ವಿನ್ ಕೆ. ಶೆಟ್ಟಿಗಾರ್, ಸಂಗೀತ ಮಣಿಕಾಂತ್ ಕದ್ರಿ.

ಕಾರ್ಯಕಾರಿ ನಿರ್ಮಾಪಕರು ಸಂದೀಪ್ ಶೆಟ್ಟಿ, ವಸ್ತ್ರ ವಿನ್ಯಾಸ ಅನುಪ್ ಸಾಗರ್. ವಿತರಕ ರಾಗಿ ಸಚಿನ್ ಎಎಸ್ ಉಪ್ಪಿನಂಗಡಿ ಕೆಲಸ ಮಾಡಿದ್ದಾರೆ ಎಂದರು.

ತಾರಾಗಣದಲ್ಲಿ ಡಾ. ದೇವದಾಸ್ ಕಾಪಿಕಾಡ್, ಅರ್ಜುನ್ ದೇವ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಸುತೇಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಶೋಭರಾಜ್ ಪಾವೂರ್, ಚೈತ್ರಾ ಶೆಟ್ಟಿ, ಕೃತಿ ಶೆಟ್ಟಿ ಅಭಿನಯಿಸಿದ್ದಾರೆ.

ಟಾಸ್ ತುಳು ಹಾಗೂ ಕನ್ನಡ ಭಾಷೆಯಲ್ಲಿ ತಯಾರಾಗಿದೆ. ಎರಡನ್ನೂ ಬೇರೆ ಬೇರೆಯಾಗಿ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾಗಳಿಗೆ ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ಸಾಥ್ ನೀಡಿದ್ದಾರೆ ಎಂದು ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ತಿಳಿಸಿದರು.

ಟಾಸ್ ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ ಕಾರ್ಕಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಸಹಿತ ಬೇರೆ ಬೇರೆ ಕಡೆಗಳಲ್ಲಿ ಬಿಡುಗಡೆಗೊ ಳ್ಳಲಿದೆ. ಬೆಂಗಳೂರು, ಮೈಸೂರು ಮೊದಲಾದ ಕಡೆಗಳಲ್ಲೂ ಬಿಡುಗಡೆಯಾಗಲಿದೆ.

ಇದೊಂದು ಪಕ್ಕಾ ಕಾಮಿಡಿ ಸಿನಿಮಾ, ಸೆಂಟಿಮೆಂಟ್, ಆಕ್ಷನ್, ಡ್ರಿಲ್ಲರ್ ಹೀಗೆ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಪ್ಯಾಕೇಜ್, ಎಲ್ಲಾ ಚಿಂತೆಗಳನ್ನು ಬಿಟ್ಟು ಎಂಜಾಯ್ ಮಾಡಬೇಕೆಂದು ರೆಡಿ ಮಾಡಿರುವ ಸಿನಿಮಾ ಇದು. ಹಣ ಕೊಟ್ಟು ಬರುವ ಪ್ರೇಕ್ಷಕರಿಗೆ ಏನೇನು ಬೇಕೋ ಎಲ್ಲವೂ “ಟಾಸ್” ಸಿನಿಮಾದಲ್ಲಿದೆ ಎಂದು ನಿರ್ದೇಶಕ ಅರ್ಜುನ್ ದೇವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನವೀನ್ ಡಿ ಪಡೀಲ್, ಭೋಜರಾಜ ವಾಮಂ ಜೂರು, ಸುತೇಜ್ ಶೆಟ್ಟಿ ಚೈತ್ರಾ ಶೆಟ್ಟಿ, ಜೋಯಲ್, ಸಂದೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

Related posts

ಪುದುವಿನಲ್ಲಿ ಅ. 4ರಂದು ಶ್ರೀ ನಾರಾಯಣ ಗುರುಗಳ 172 ನೇ ಜನ್ಮ ಜಯಂತಿ ಆಚರಣೆ. ಭಜನೆ,ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ;

Voiceoftulunadu

ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ಘಟಕದ ಮಹಿಳಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ: ಉಚ್ಚಿಲ ಸರಸ್ವತಿ ಮಂದಿರ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಲಿಕೋಪಕರಣ ವಿತರಣೆ ;

Voiceoftulunadu

ಕಟಪಾಡಿ : ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಹಣ ನೀಡದೆ ಪರಾರಿಯಾದ ಕಾರು ಚಾಲಕ ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ಸ್ ಕಾರಿನಲ್ಲಿ ಬಂದ ಮೂವರು ಯುವಕರು;

Voiceoftulunadu

Leave a Comment