ಭಾರತದ ಕಾನೂನು ನೆರವು ಕೇಂದ್ರ ಹಳೆಯಂಗಡಿ, ಹಾಗೂ ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ಇವರ ಸಹೋಗದಲ್ಲಿ ದಿನಾಂಕ: 15-9-2026 ರಂದು ಹಳೆಯಂಗಡಿ ಯೋಗ ಮಂದಿರದಲ್ಲಿ “ಇಂಜಿನೀರ್ಸ್ ದಿನಾಚರಣೆಯನ್ನು” ವಿಶ್ರಾಂತ ಸಭಾ ಪಾಲಕರು ರೆವೆ. ಎಡ್ವರ್ಡ್ ಕರ್ಕಡ ಇವರು ಉದ್ಘಾಟಿಸಿ “ಇಂಜಿನಿಯರ್ ಎಂದರೆ ಭಾರತರತ್ನ ಸರ್ ಮೋಕ್ಷಗುಂಡ ವಿಶ್ವೇಶ್ವರಯ್ಯಅವರಚಿತ್ರ, ಶಿಸ್ತಿನ ಜೀವನ, ಸಮಯ ಪಾಲನೆ, ಕರ್ತವ್ಯ ನಿಷ್ಠೆ, ಕಾರ್ಯದಕ್ಷತೆಯಲ್ಲಿ ಇಂದಿನ ಇಂಜಿನಿಯರ್ ಗಳಿಗೆ ಮಾದರಿ.
ಅವರಜನ್ಮದಿನವನ್ನು ಇಂಜಿನಿಯರ್ಗಳ ದಿನ ಎಂದುಆಚರಿಸಲಾಗುತ್ತಿದೆ. ಎಂದು ಉದ್ಘಾಟನಾ ಭಾಷಣದಲ್ಲಿ ತಿಳಿಸಿರುತ್ತಾರೆ.ಅಧ್ಯಕ್ಷತೆಯನ್ನು ಶ್ರೀ ಡೇನಿಯಲ್ದೇವರಾಜ್ ಭಾರತದ ಕಾನೂನು ನೆರವು ಕೇಂದ್ರದ ಅಧ್ಯಕ್ಷರು ವಹಿಸಿ “1861ರ ಸಪ್ಟಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯಲ್ಲಿ ಜನಿಸಿದರು. ವಿಶ್ವೇಶ್ವರಯ್ಯ ಮೈಸೂರಿನ ದಿವಾನರಾಗಿದ್ದಾಗ ಬ್ರಿಟಿಷ್ ಸರ್ಕಾರಅವರಿಗೆ ‘ಸರ್’ ಪದವಿ ನೀಡಿ ಗೌರವಿಸಿತ್ತು.
ತಮ್ಮ ಉನ್ನತ ಸಾರ್ವಜನಿಕ ಸಾಧನೆಗಾಗಿ 1915ರಲ್ಲಿ ಬ್ರಿಟನ್ ಸರ್ಕಾರದದೊರೆಜಾರ್ಜುವಿ ಅವರಿಂದ ನೈಟ್ಹುಡ್ ಪದವಿಯನ್ನು ಪಡೆದು‘ಸರ್’ ಎಂದು ಅಭಿನಾಮಗೊಂಡರು” ಎಂದು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿರುತ್ತಾರೆ.
ಅತಿಥಿಗಳಾಗಿ : ಯುನಿಟಿ ದೇವಾಲಯ ಮುಲ್ಕಿಯ ರೆವೆ. ವಿಲಿಯಂ ಕುಂದರ್, ಶಿಕ್ಷಕರಾದ ಶ್ರೀಮತಿ ಐನಿಕಾ ಕರ್ಕಡ, ಇಂಜಿನೀರ್ಸ್ ಪ್ರಮೋದ್, ಭಾರತದ ಸವೋಚ್ಚ ನ್ಯಾಯಾಲಯದ ವಕೀಲರಾದ ಸುಭಾಸ್ ಚಂದ್ರಸಾಗರ್ ಉಪಸ್ಥಿತರಿದ್ದರು. ಕರ್ನಾಟಕ ಉಚ್ಚನ್ಯಾಯಾಲಯದ ವಕೀಲರಾದ ಪ್ರಸನ್ನ ಕುಮಾರ್ “ಇಂಜಿನೀಯರ್ ವಿಭಾಗ ಕಾನೂನು ಹಾಗೂ ಮಾದಕ ದ್ರವ್ಯ ವ್ಯಸನ ನಿರ್ಮೂಲನಾ ಕಾನೂನು“ ಬಗ್ಗೆ ಮಾಹಿತಿ ನೀಡಿರುತ್ತಾರೆ.
ಶ್ರೀ ಗಣೇಶ್ ಇಂಜಿನೀಯರ್ ರವರಿಗೆ ಶಾಲು ಹೊದಿಸಿ ಫಲ ಪುಷ್ಪ ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ಎಸ್ ಆ ಒ ಐಂ w ಕಾಲೇಜಿನ ಡಿಕ್ಸ್ನ್ ಸುಜಯ್ ಕಾರ್ಯಕ್ರಮ ನಿರೂಪಿಸಿದರು. ಮೂಡಬಿದ್ರಿ ಕೋರ್ಟಿನ ಶ್ರೀ ಮಹಮ್ಮದ್ ಅಕ್ಬರ್ ಧನ್ಯವಾದ ಸಮರ್ಪಿಸಿದರು.
