28.5 C
ಮಂಗಳೂರು
September 4, 2026
Uncategorizedಕ್ರೈಮ್ಬ್ರೇಕಿಂಗ್ ನ್ಯೂಸ್ರಾಜಕೀಯರಾಜ್ಯ/ದೇಶ

ಬಿಟ್‌ಕಾಯಿನ್ ಹಗರಣದಲ್ಲಿ ನಲಪಾಡ್ ಪಾಲುದಾರ; ಸ್ನೇಹಿತರ ಮೂಲಕ ಮುಂಬೈನಲ್ಲಿ ನಗದೀಕರಣ – SIT ಚಾರ್ಜ್‌ಶೀಟ್

ವರದಿ/ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ

ಬೆಂಗಳೂರು: 6 ವರ್ಷಗಳ ಹಳೆಯ ಬಿಟ್ ಕಾಯಿನ್ ಹಗರಣದಲ್ಲಿ (Karnataka Bitcoin Scam) ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ, ಯೂತ್ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್‌ಗೆ (Mohammed Nalapad) ಸಂಕಷ್ಟ ಎದುರಾಗಿದೆ.

ವಿಶೇಷ ತನಿಖಾ ದಳ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ಹಗರಣದಲ್ಲಿ ನಲಪಾಡ್ ಕೂಡ ಪಾಲುದಾರ, ಆತನಿಗೂ ಹಣ ಸಂದಾಯವಾಗಿದೆ ಅಂತ ಉಲ್ಲೇಖಿಸಿದೆ. ಮತ್ತೊಂದ್ಕಡೆ, ತನಿಖೆ ಮಾಡ್ತಿರುವ ಇ.ಡಿ ಕೂಡ ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ 3ನೇ ನೊಟೀಸ್ ಕೂಡ ಕೊಟ್ಟಿದೆ.

ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲೇನಿದೆ?

* ಶ್ರೀಕೃಷ್ಣ@ ಶ್ರೀಕಿ, ರಾಬಿನ್ ಖಂಡೇವಾಲ, ನಲಪಾಡ್ ಸೇರಿ ಇತರರ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

* ಬಿಟ್‌ಕಾಯಿನ್ ಹಗರಣದ ಮಾಸ್ಟರ್ ಮೈಂಡ್ ಶ್ರೀಕಿ ಜೊತೆ ನಲಪಾಡ್‌ಗೆ ನಂಟು

ಬಿಟ್‌ಕಾಯಿನ್ ನಗದೀಕರಣಕ್ಕಾಗಿ ನಲಪಾಡ್ ಸಂಪರ್ಕಿಸಿದ್ದ ಹ್ಯಾಕರ್ ಶ್ರೀಕಿ

* ಮುಂಬೈ ಮೂಲದ ಸ್ನೇಹಿತ, ಖಂಡೇವಾಲ ಮೂಲಕ ಹವಾಲಾ ರೂಪದಲ್ಲಿ ನಗದೀಕರಣ ಮಾಡಿರುವ ನಲಪಾಡ್

* ನಗದೀಕರಣ ಪ್ರಕ್ರಿಯೆಯಲ್ಲಿ ನಲಪಾಡ್‌ಗೂ ಕಮಿಷನ್ ರೂಪದಲ್ಲಿ ಹಣ ಸಂದಾಯ

* ವಿಚಾರಣೆಗೆ ಹಾಜರಾಗುವಂತೆ 3ನೇ ಬಾರಿಗೆ ಇಡಿ ನೋಟಿಸ್

* ಈಗಾಗಲೇ ಶ್ರೀಕಿ, ರಾಬಿನ್ ಖಂಡೇವಾಲ, ಸುನೀಶ್ ಹೆಗ್ಡೆ ವಿಚಾರಣೆ ಮಾಡಿರುವ ಇ.ಡಿ

* 16 ಗಂಟೆಗಳ ಕಾಲ ಮೂವರನ್ನೂ ವಿಚಾರಣೆ ನಡೆಸಿರುವ ಇ.ಡಿ

Related posts

ಕಿನಾರ ಗ್ಲೋಬಲ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ : ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿ ಸಂಚಾಲಿತ ಶಾಲೆ;

Voiceoftulunadu

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಅಂತರರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವೋತ್ತಮ ಶೆಟ್ಟಿ ಆಯ್ಕೆ: ಶತಮಾನೋತ್ಸವದ ಹೊಸ್ತಿಲಲ್ಲಿ ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವ ಮಹಾಸಂಕಲ್ಪ;

Voiceoftulunadu

ವಾಯುಭಾರ ಕುಸಿತ; ರಾಜ್ಯದಲ್ಲಿ ಭಾರೀ ಮಳೆಯ ಸಾಧ್ಯತೆ:

Voiceoftulunadu

Leave a Comment