28.5 C
ಮಂಗಳೂರು
September 4, 2026
Uncategorizedಆರೋಗ್ಯಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜ್ಯ/ದೇಶಸ್ಥಳೀಯ/ಪ್ರಾದೇಶಿಕ ಸುದ್ದಿ

ಗಸ್ತು ಕರ್ತವ್ಯದ ವೇಳೆ ವ್ಯಕ್ತಿಯ ಜೀವ ಉಳಿಸಿದ ಬಂಟ್ವಾಳ ನಗರ ಠಾಣೆಯ ಸಿಬ್ಬಂದಿ:

ವರದಿ /ಚಿತ್ರ: ಸಂತೋಷ್ ಸಜಿಪ

ಬಂಟ್ವಾಳ:ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಗೂಡಿನಬಲಿ ನಿವಾಸಿ ಅಶ್ರಫ್ ಅವರಿಗೆ ತೀವ್ರ ಎದೆನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಇದೇ ಸಂದರ್ಭದಲ್ಲಿ ಅವರ ಮನೆಯಿಂದ ಜೋರಾಗಿ ಬಾಗಿಲು ಬಡಿಯುವ ಹಾಗೂ ಆಳುವ ಶಬ್ದ ಕೇಳಿಬಂದಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ಠಾಣೆಯ ನೈಟ್ ಬೀಟ್ ಸಿಬ್ಬಂದಿಗಳು ಪರಿಸ್ಥಿತಿಯನ್ನು ಪರಿಶೀಲಿಸಿದರು.

ಅಶ್ರಫ್ ಅವರಿಗೆ ಲಘು ಹೃದಯಾಘಾತ ಸಂಭವಿಸಿರುವುದನ್ನು ಗಮನಿಸಿದ ಸಿಬ್ಬಂದಿಗಳು ಸಮಯಪ್ರಜ್ಞೆ ಮೆರೆದು ಕೂಡಲೇ ಸಿಪಿಆರ್ (CPR) ಸೇರಿದಂತೆ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ತುರ್ತುವಾಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

ಕರ್ತವ್ಯ ಪ್ರಜ್ಞೆ ಹಾಗೂ ಮಾನವೀಯತೆಯನ್ನು ಪ್ರದರ್ಶಿಸಿ ವ್ಯಕ್ತಿಯ ಜೀವ ಉಳಿಸಲು ಶ್ರಮಿಸಿದ ಬಂಟ್ವಾಳ ನಗರ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ವಿನೋದ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ಜಯಗಣೇಶ್ (ಬಂಟ್ವಾಳ ಘಟಕ) ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ

Related posts

ಕಟಪಾಡಿಯಲ್ಲಿ ನಡೆದ ಆಟಿದ ಅಟ್ಟಣೆ ಕಾರ್ಯಕ್ರಮ: ತುಳುನಾಡಿನಲ್ಲಿ ಆಟಿ ತಿಂಗಳೆಂದರೆ ನಂಬಿಕೆಯ ತಿಂಗಳಾಗಿದೆ : ದಯಾನಂದ ಕೆ. ಶೆಟ್ಟಿ ದೆಂದೂರು ;

Voiceoftulunadu

ಮಹಾರಾಷ್ಟ್ರ ವಿಧಾನ ಪರಿಷತ್ತ್‌ನ ಉಪ ಸಭಾಪತಿ ಸಚಿನ್ ಭಾವು ಅಹಿರೆ ಅವರನ್ನು ಅಭಿನಂದಿಸಿದ ಎನ್‌ಸಿಪಿ ಧುರೀಣ ಲಕ್ಷ ಣ ಪೂಜಾರಿ ಚಿತ್ರಾಪು ;

Voiceoftulunadu

ಬಂಟ್ಸ್ ಹಾಸ್ಟೆಲ್ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಗಣೇಶೋತ್ಸವ ಸಮಿತಿಯ ಸಂಚಾಲಕರಾಗಿ ಜಯಶೀಲ ಅಡ್ಯಾಂತಾಯ ಅಡ್ಯಾರ್‌ಗುತ್ತು ಆಯ್ಕೆ;

Voiceoftulunadu

Leave a Comment