September 5, 2026
Uncategorizedಆರೋಗ್ಯಉದ್ಯೋಗ/ಶಿಕ್ಷಣಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶ

ಜೈನಕಾಶಿ ಮೂಡಬಿದಿರೆ ಇದರ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಯೋಗ ಪ್ರಾತ್ಯಕ್ಷಿಕೆಯೋಗಾಸನಗೈದ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ  ;

ವರದಿ /ಚಿತ್ರ:ರೋನ್ಸ್ ಬಂಟ್ವಾಳ


ಮುಂಬಯಿ, ಜೂ.21: ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ಜೈನ ಮಠ ಮೂಡುಬಿದಿರೆ ವತಿಯಿಂದ ವಿಶ್ವ ಯೋಗ ದಿನಾಚರಣೆ ನಡೆಸಲಾಯಿತು. ಆ ನಿಮಿತ್ತ ಇಂದು ಭಾನುವಾರ ಶ್ರೀ  ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಅವರ ನೇತೃತ್ವದಲ್ಲಿ ಜೈನಕಾಶಿ ಮೂಡಬಿದಿರೆ ಇಲ್ಲಿನ  ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ ಯೋಗ ನೆರವೇರಿಸಿದರು.

ದೆಹಲಿ ಬೆಂಗಳೂರು ಮುಂತಾದ ಕಡೆಯಿಂದ ಬಂದ ಯಾತ್ರಾಥಿಗಳು ಶ್ರೀಗಳೊಂದಿಗೆ ಯೋಗ ಅಭ್ಯಾಸ ನಡೆಸಿದರು. ಈ ಸಂಧರ್ಭ ಸ್ವಾಮೀಜಿ ವಿವಿಧ ಆಸನಗಳ ಮಾಹಿತಿ ನೀಡಿದರು. ಪದ್ಮಾಸನಾ, ಪರ್ವತಾಸನ, ಅನುಲೋಮ ವಿಲೋಮ ತಿಳಿಸಿ, ಉಚ್ಚ ಅಭ್ಯಾಸ  ಆಸನಗಳಾದ ಮಯೂರ ಆಸನ, ಗೋ ರಕ್ಷಾ ಆಸನ, ಗರುಡಾಸನ, ಬ್ರಹ್ಮ ಚರ್ಯ ಆಸನ,  ರಾಜ ಶೀರ್ಷಾಸನಾ, ಸರ್ವಾಂಗಸನ ಭಂಗಿಗಳ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.

ಯೋಗ ಮೂಲಕ ದೇಹ ಮನಸ್ಸುಗಳ ಹೊಂದಾಣಿಕೆ ಹಾಗೂ ಇವುಗಳಿಂದ ಶಾಂತಿ, ಆರೋಗ್ಯ ಲಭ್ಯವಾಗುದು. ಲೋಕ ಕಲ್ಯಾಣ ಭಾವನೆ ಅಡಗಿರುವ ಯೋಗ ಪ್ರತಿನಿತ್ಯ ಹತ್ತು ನಿಮಿಷಗಳಾದರೂ ಯೋಗ, ವ್ಯಾಯಾಮ ಅಭ್ಯಾಸ ಮಾಡಿ ಎಂದು ಡಾ| ಭಟ್ಟಾರಕ ಚಾರುಕೀರ್ತಿಶ್ರೀಗಳು ಸಲಹಿದರು.

ಕಳೆದ ಎರಡು ದಿನಗಳಿಂದ ಯೋಗ ಶಿಬಿರ ನಡೆಸಿದ್ದು ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜ್‌ನ ವಿದ್ಯಾಥಿಗಳು ಬೆಳಿಗ್ಗೆ ಒಂದು ಗಂಟೆ ಯೋಗ ಶಿಬಿರದಲ್ಲಿ ಮತ್ತಿತರರು ಭಾಗವಹಿಸಿದ್ದು, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದವು ಯೋಗ ಅಭ್ಯಾಸ ನಡೆಸಿದರು.

Related posts

ಮೋಡಗಳು ಕಾಣದಿದ್ದರೆ ಕೇವಲ ಮಳೆಯಷ್ಟೇ ಮರೆಯಾಗುವುದಿಲ್ಲ-ದಿವಾಕರ್ ಶೆಟ್ಟಿ ಅಡ್ಯಾರ್

Voiceoftulunadu

ಕೇಂದ್ರದಿಂದ ರಾಜ್ಯಗಳಿಗೆ 1.09 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಹಂಚಿಕೆ : ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

Voiceoftulunadu

ಜಿಲ್ಲಾಧಿಕಾರಿ ಆದೇಶ ಮೀರಿ ಓಡಾಡುತ್ತಿರುವ ಇ.ವಿ ಆಟೋ ರಿಕ್ಷಾಗಳು;

Voiceoftulunadu

Leave a Comment