28.5 C
ಮಂಗಳೂರು
September 4, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ವಲಯ ಫೋಟೋಗ್ರಾಫರ್ಸ್ ಅಸೋಸಿಯೇಷನ್, ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ಅಂಚೆ ವಿಮಾ ಸೌಲಭ್ಯ ಗುರ್ಮೆ: ಫೌಂಡೇಷನ್ ಕಳತ್ತೂರು ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಕೊಡುಗೆ:

ವರದಿ/ ಚಿತ್ರ:ಈ ಮೀಡಿಯಾ

ಕಾಪು : ಕಾಪು ಶಾಸಕರಾದಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದ ಗುರ್ಮೆ ಫೌಂಡೇಷನ್ ಕಳತ್ತೂರು ವತಿಯಿಂದ ಕಾಪು ಇದರ ವಲಯ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮತ್ತು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ಅಂಚೆ ಆರೋಗ್ಯ ವಿಮಾ ಸೌಲಭ್ಯ ನೋಂದಣಿ ಮತ್ತು ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಶನಿವಾರ ಉದ್ಘಾಟಿಸಿ ಸಾಂಕೇತಿಕವಾಗಿ ಕಾರ್ಡ್ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಜೀವನದಲ್ಲಿ ಭದ್ರತೆ ಮುಖ್ಯ. ಪ್ರತಿ ನಿಮಿಷವೂ ನಾವು ಅಂದುಕೊಂಡಂತಿಲ್ಲ. ಈ ನಿಟ್ಟಿನಲ್ಲಿ ಸಮಾಜದ ಕಣ್ಣುಗಳಂತಿರುವ ಫೋಟೋಗ್ರಾಫರ್ಸ್ ಮತ್ತು ಪತ್ರಕರ್ತರಿಗಾಗಿ ಆರೋಗ್ಯ ವಿಮಾ ಸೌಲಭ್ಯ ನೀಡಲಾಗಿದೆ. ಯಾವುದೇ ಕಾರ್ಯಕ್ರಮದ ಆರಂಭ ಮತ್ತು ಕೊನೆಗೆಇರುವವರು ಛಾಯಾಗ್ರಾಹಕರು. ಉಚಿತ ಅಂಚೆ ಆರೋಗ್ಯ ವಿಮಾ ಸೌಲಭ್ಯವು ಕೇವಲ ಒಂದು ವರ್ಷಕ್ಕೆ ಸೀಮಿತವಾಗದೆ ಸಂಸ್ಕಾರ ತುಂಬಿದ ತಾಯಿಯ ನೆನಪಿಗಾಗಿ ಗುರ್ಮೆ ಫೌಂಡೇಷನ್ ವತಿಯಿಂದ ಪ್ರತಿವರ್ಷ ನೀಡುತ್ತೇವೆ ಎಂದು ವಾಗ್ದಾನ ಇತ್ತರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಮಾತನಾಡಿ, ಒತ್ತಡದ ಬದುಕಿನಲ್ಲಿ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಬೇಕಾದ ಅನಿವಾರ್ಯತೆಯಿದೆ. ಪ್ರತಿಯೊಬ್ಬರೂ ಆರೋಗ್ಯಕ್ಕೆ ಮಹತ್ವ ನೀಡುವ ಜೊತೆಗೆ ಇಂತಹ ಸೌಲಭ್ಯಗಳ ಪಡೆದುಕೊಳ್ಳಬೇಕು ಸದುಪಯೋಗ ಎಂದರು.

ಅಂಚೆ ಇಲಾಖೆಯ ಪ್ರತಿನಿಧಿ ಸುಬ್ರಹ್ಮಣ್ಯ ಉಡುಪಿ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರನ್ನು ಗೌರವಿಸಲಾಯಿತು.

ಎಸ್ಕೆಪಿಎ ಕಾಪು ವಲಯ ಅಧ್ಯಕ್ಷರಾದಸಂತೋಷ್ ನಾಯ್ಡ್ ಕಾಪು ಅಧ್ಯಕ್ಷತೆ ವಹಿಸಿದ್ದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಪುಂಡಲೀಕ ಮರಾಠ, ಎಸ್ಕೆಪಿಎ ಕಾಪು ವಲಯ ಗೌರವಾಧ್ಯಕ್ಷರಾದ ಬಾಲಕೃಷ್ಣ ಆರ್. ಪೂಜಾರಿ ಉಚ್ಚಿಲ, ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ, ವಲಯ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷರುಗಳಾದ ದೀಪಕ್ ಶೆಣೈ, ಸಂತೋಷ್ ಕಟಪಾಡಿ, ಕೋಶಾಧಿಕಾರಿ ಕಿರಣ್ ಕಾಪು, ವಲಯ ಸುರಕ್ಷಾ ಪ್ರತಿನಿಧಿ ವೀರೇಂದ್ರ ಪೂಜಾರಿ ಶಿರ್ವ ಮತ್ತಿತರರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಐತಾಳ್ ಪ್ರಾರ್ಥಿಸಿದರು. ಎಸ್ಕೆಪಿಎ ಕಾಪು ವಲಯ ಅಧ್ಯಕ್ಷರಾದ ಸಂತೋಷ್ ನಾಯ್ಕ ಸ್ವಾಗತಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ನಿರೂಪಿಸಿದರು. ವಿರೇಂದ್ರ ಶಿರ್ವ ವಂದಿಸಿದರು.

Related posts

ಉಡುಪಿ : ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮನೆಗೊಂದು ಗ್ರಂಥಾಲಯ10 ಗ್ರಂಥಾಲಯಗಳ ಅನುಷ್ಠಾನ ಕಾರ್ಯಕ್ರಮ;

Voiceoftulunadu

ಆಟಿ ಕೂಟಗಳಿಗೆ ಮೂಲ್ಕಿ ಯುವವಾಹಿನಿಯೇ ಪ್ರೇರಣೆ: ದಯಾನಂದ ಹೆಜ್ಜಾಡಿ;

Voiceoftulunadu

ಬಿ.ಸಿ.ರೋಡ್‌: ಬ್ರಹ್ಮಶ್ರೀ ನಾರಾಯಣಗುರು ವೃತ್ತ ಲೋಕಾರ್ಪಣೆ, ವಿದ್ಯಾರ್ಥಿವೇತನ ವಿತರಣೆ : ವೃತ್ತ ಲೋಕಾರ್ಪಣೆ ಗೈದ ಸಂಸದ ಕ್ಯಾ, ಬ್ರಿಜೇಶ್ ಚೌಟ;

Voiceoftulunadu

Leave a Comment