28.5 C
ಮಂಗಳೂರು
September 4, 2026
Uncategorizedಜಿಲ್ಲಾ ಸುದ್ದಿರಾಜಕೀಯರಾಜ್ಯ/ದೇಶಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಹೆಜಮಾಡಿ ಟೋಲ್ ನಲ್ಲಿ ಸಾರ್ವಜನಿಕರ ಮೇಲಿನ ಟೋಲ್ ದೌರ್ಜನ್ಯ: ಕಾಂಗ್ರೆಸ್‌ ಪ್ರತಿಭಟನೆ : ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನಡೆದ ಸಭೆ;

ವರದಿ /ಚಿತ್ರ: ಈ ಮೀಡಿಯಾ

ಪಡುಬಿದ್ರಿ: ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ, ಸ್ಥಳೀಯ ನಿವಾಸಿಗಳ ಮೇಲಿನ ಟೋಲ್ ದೌರ್ಜನ್ಯ ಹಾಗೂ ವರ್ಷಗಳಿಂದ ಮುಂದುವರಿದಿರುವ ಸಮಸ್ಯೆಯನ್ನು ಖಂಡಿಸಿ ಶನಿವಾರ ಟೋಲ್‌ ಗೇಟ್‌ ಬಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ, ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪ್ರಬೋಧ್ ಚಂದ್ರ ಹೆಜ್ಮಾಡಿ ಹಾಗೂ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೀಜ್ ಹುಸೇನ್ ಅವರ ನಾಯಕತ್ವದಲ್ಲಿ ಹೆಜಮಾಡಿ ಬೈಪಾಸ್ ಟೋಲ್ ಪ್ಲಾಜಾ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿನಯ ಕುಮಾರ್ ಸೊರಕೆ, ಜನರ ನ್ಯಾಯಸಮ್ಮತ ಬೇಡಿಕೆಗಳನ್ನು ಇನ್ನು ಮುಂದೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ಟೋಲ್ ನಿರ್ವಹಣಾ ಸಂಸ್ಥೆಯ ಮನವಿಯನ್ನು ಗೌರವಿಸಿ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯೊಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡದಿದ್ದರೆ ಕಾಂಗ್ರೆಸ್ ಪಕ್ಷ ಜನರೊಂದಿಗೆ ಸೇರಿ ಉಗ್ರ ಹಾಗೂ ಅನಿರ್ದಿಷ್ಟಾವಧಿಯ ಹೋರಾಟ ನಡೆಸಲಿದೆ. ಅದರ ಸಂಪೂರ್ಣ ಹೊಣೆಗಾರಿಕೆ ಟೋಲ್ ನಿರ್ವಹಣಾ ಸಂಸ್ಥೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಹಿಂದುಳಿದ ವರ್ಗಗಳ ಘಟಕ, ಅಲ್ಪಸಂಖ್ಯಾತ ಘಟಕ, ಎಸ್‌.ಸಿ./ಎಸ್‌.ಟಿ. ಘಟಕ, ವಿವಿಧ ಕಾಂಗ್ರೆಸ್ ಘಟಕಗಳ ಪದಾಧಿಕಾರಿಗಳು, ಆಟೋ ಚಾಲಕರ ಸಂಘ, ಟ್ಯಾಕ್ಸಿ ಸಂಘ, ಟೆಂಪೋ ಚಾಲಕರ ಸಂಘ, ವ್ಯಾಪಾರಸ್ಥರು, ಅಂಗಡಿ ಮಾಲೀಕರು, ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಟೋಲ್ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಬಳಿಕ ಟೋಲ್ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯಲ್ಲಿ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು 15 ದಿನಗಳ ಕಾಲಾವಕಾಶ ನೀಡುವಂತೆ ಟೋಲ್ ಆಡಳಿತ ಮನವಿ ಮಾಡಿತು.

ಪ್ರತಿಭಟನೆಯಲ್ಲಿ ವೈ. ಸುಕುಮಾರ್, ಅಶೋಕ್ ಕುಮಾರ್ ಕೊಡವೂರು, ನವೀನ್ ಚಂದ್ರ ಜೆ. ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೃಷ್ಣ ಶೆಟ್ಟಿ, ಗುಲಾಮ್ ಅಹಮದ್, ನವೀನ್ ಎನ್. ಶೆಟ್ಟಿ, ಅಶ್ವಿನ್ ಕೋಟ್ಯಾನ್, ಸುಧೀರ್ ಕರ್ಕೇರ, ಮಹಮ್ಮದ್ ನಿಯಾಝ್, ಶಾಂತಲತಾ ಶೆಟ್ಟಿ, ಅಬ್ದುಲ್ ಅಜೀಜ್ ಹೆಜ್ಮಾಡಿ, ಸಂತೋಷ್ ಪಡುಬಿದ್ರಿ, ಕೇಶವ್ ಸಾಲ್ಯಾನ್, ತಸ್ನೀನ್ ಅರಹಾ, ಕೀರ್ತಿ ಕುಮಾರ್, ಸುಚರಿತಾ ಅಮೀನ್, ವಿಠಲ್ ಮಾಸ್ಟರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Related posts

ಶ್ರೀಕೇತ್ರ ಪೊಳಲಿಗೆ ಶೃಂಗೇರಿ ಮಠದ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳ ಭೇಟಿ ಶ್ರೀಗಳನ್ನು ಅದ್ದೂರಿಯಾಗಿ ಸ್ವಾಗತಿಸಿದ ಆಡಳಿತ ಮಂಡಳಿ;

Voiceoftulunadu

ಕೆಥೋಲಿಕ್ ಸಭಾ ಉಡುಪಿ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ಸಂಘಟನೆಗಳಿಂದ ಸನ್ಮಾನ ಕೆಥೋಲಿಕ್ ಸಂಘಟನೆಯನ್ನು ಬಲಿಷ್ಠ ಗೊಳಿಸೋಣ : ವಂ. ಅನಿಲ್ ಡಿಸೋಜಾ ;

Voiceoftulunadu

ಪಡುಬಿದ್ರಿ :ಅಖಂಡ ಇಪ್ಪತ್ತನಾಲ್ಕು ಗಂಟೆಗಳ ‘ಏಕಾಹ ಭಜನೆ’ ಗೆ ಚಾಲನೆ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಭಜನಾ ಕಾರ್ಯಕ್ರಮ;

Voiceoftulunadu

Leave a Comment