28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಕ್ರೀಡೆಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟರ ಯಾನೆ ನಾಡವರ ಮಾತೃ ಸಂಘದಿಂದ ದಿ. ರವಿಚಂದ್ರ ಶೆಟ್ಟಿಯವರಿಗೆ ನುಡಿನಮನ ಬಂಟ್ಸ್ ಹಾಸ್ಟೇಲ್ ಅಮೃತೋತ್ಸವದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ;

ಮಂಗಳೂರು : ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ಅಶೋಕನಗರ ಬಂಟರ ಸಂಘದ ಅಧ್ಯಕ್ಷರಾಗಿದ್ದ ದಿ. ರವಿಚಂದ್ರ ಶೆಟ್ಟಿಯವರ ಸಂತಾಪ ಸೂಚಕ ಸಭೆಯು ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವದ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿಯವರು ಮಾತನಾಡಿ, ರವಿಚಂದ್ರ ಶೆಟ್ಟಿ ಉರ್ವಾ-ಅಶೋಕನಗರ ಬಂಟರ ಸಂಘದಅಧ್ಯಕ್ಷರಾಗಿ ಮಾಡಿದವರು.

ಸಮಾಜಪರ ಕೆಲಸಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಹಿತ ಬೇರೆ ಬೇರೆ ಸಂಘಟನೆಗಳಲ್ಲಿ ದುಡಿದವರು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ನುಡಿನಮನ ಸಲ್ಲಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಮ್ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಸಿ ಎ ರಾಮ ಮೋಹನ್ ರೈ, ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ದಿವಾಕರ ಸಾಮಾನಿ, ಚೇಳ್ಯಾರ್ ಗುತ್ತು, ಶ್ರೀ ಸಿದ್ದಿವಿನಾಯಕಗಣೇಶೋತ್ಸವ ಸಮಿತಿಯ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಕಾರ್ಯಕಾರಿ ಸಮಿತಿ ಸದಸ್ಯರಾದ ಎಮ್ ಸುಂದರ ಶೆಟ್ಟಿ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಉಮೇಶ್ ರೈ ಪದವು ಮೇಗಿನ ಮನೆ, ಡಾ. ಆಶಾಜ್ಯೋತಿ ರೈ, ಸದಾಶಿವ ಶೆಟ್ಟಿ ಬಿಜೈ, ಅಶ್ವತ್ಥಾಮ ಹೆಗ್ಡೆ, ಜಗದೀಶ್ ಶೆಟ್ಟಿ ಬಿಜೈ, ಸುಲತಾ ಜೆ ಶೆಟ್ಟಿ, ಸುಮಾ ರವೀಂದ್ರ ಶೆಟ್ಟಿ, ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್, ಪ್ರಮೋದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related posts

ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ಸಮಾನ ಮನಸ್ಕ ತಂಡ ಉಡುಪಿ ಸಹಯೋಗದ ಕಾರ್ಯಕ್ರಮ;

Voiceoftulunadu

ಧರ್ಮಸ್ಥಳದಲ್ಲಿ ಇಂದ್ರಿಯ ಆರೋಗ್ಯದ ಬಗ್ಗೆ ಅಂತಾರಾಷ್ಟ್ರೀಯ ಸಮಾವೇಶ : ‘ಪುನರ್ವಸು’ ಆಯುರ್ವೇದ ಪದ್ಧತಿಯ ಬಲವರ್ಧನೆಯೊಂದಿಗೆ ಆರೋಗ್ಯಭಾಗ್ಯ: ಡಾ| ಮನೀಷಾ ಕೋಟೆಕಾರ್;

Voiceoftulunadu

ಮಿಲಾಗ್ರೆಸ್ ಹೌಸ್, ಬಾಂದ್ರಾದಲ್ಲಿ ಮಾಡೆಲ್ ಬ್ಯಾಂಕ್‌ನ ಆಡಳಿತ ಕಚೇರಿ ಹಾಗೂ 26ನೇ ಶಾಖೆ ಉದ್ಘಾಟನೆ : ಸಹಕಾರವೇ ಎಲ್ಲರ ಅಭಿವೃದ್ಧಿಯ ಹಿಂದಿನ ಶಕ್ತಿ: ಆರ್ಚ್‌ಬಿಷಪ್ ಜಾನ್ ;

Voiceoftulunadu

Leave a Comment