September 4, 2026
Uncategorizedಕಲೆ/ಸಾಹಿತ್ಯಕೃಷಿ/ಭೌಗೋಳಿಕಕ್ರೀಡೆಜಿಲ್ಲಾ ಸುದ್ದಿಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಮಜಿ : ಕೆಸರ್‌ಡೊಂಜಿ ದಿನ ಕಾರ್ಯಕ್ರಮ ;

ವರದಿ /ಚಿತ್ರ :ದಿತೇಶ್ ಮಂಗಳೂರು

ಬಂಟ್ವಾಳ: ಕೃಷಿ ಪ್ರಧಾನಜಿಲ್ಲೆಯಲ್ಲಿ ತುಳುನಾಡಿನ ಕ್ರೀಡೆ ಮತ್ತು ಆಟಿ ತಿಂಗಳ ಆಹಾರ ಪದ್ಧತಿ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ತಾಲೂಕಿನ ತುಂಬೆ ಗ್ರಾಮದ ಯುವಶಕ್ತಿ ಫ್ರೆಂಡ್ಸ್ ಮಜಿ ಅಶ್ರಯದಲ್ಲಿ “ಕೆಸರ್‌ಡೊಂಜಿ ದಿನ ಕಾರ್ಯಕ್ರಮವು ಜರುಗಿತು.

ತುಂಬೆ ಮಜಿಯಲ್ಲಿ ಅದ್ದೂರಿಯಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಹಿರಿಯ ರಾದ ಮೋನಪ್ಪ ಮಜಿ, ತುಂಬೆ ಗ್ರಾ ಪಂ ನಿಕಟಪೂರ್ವ ಅಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ, ಮಾಜಿ ಅಧ್ಯಕ್ಷ ಪ್ರವೀಣ್ ತುಂಬೆ, ಕಲಾ ಪೋಷಕ ಸದಾಶಿವ ಡಿ ತುಂಬೆ, ದೇವದಾಸ ಪರ್ಲಕ್ಕೆ ಉಪಸ್ಥಿತರಿದ್ದರು.

ಸ್ಥಳೀಯರಿಗಾಗಿ ನಡೆದೆ ‘ಕೆಸರ್ ಡೊಂಜಿ ದಿನ’ ಕಾರ್ಯಕ್ರಮದಲ್ಲಿ ಪುರುಷರು ಮತ್ತು ಮಹಿಳೆಯರುಸೇರಿದಂತೆ ಮಕ್ಕಳಿಗೆ ಹಗ್ಗ ಜಗ್ಗಾಟ ಸಹಿತ ಪ್ರತ್ಯೇಕ ವಿವಿಧ ಆಟೋಟ ಸ್ಪರ್ಧೆ ಸ್ಪರ್ರ್ ನಡೆಯಿತು. ಸ್ಥಳೀಯರು ಸಂಭ್ರಮದಲ್ಲಿ ಕೆಸರು ಗದ್ದೆಯಲ್ಲಿ ಮಿಂದೆದ್ದರು.ಈ ಸಂದರ್ಭದಲ್ಲಿ ಸ್ಥಳೀಯ ವಿದ್ಯಾರ್ಥಿ ಪ್ರತಿಭೆಗಳನ್ನು ಹಾಗೂ ಸಾಧಕ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲಾಯಿತು ಹಾಗೂ ನೂತನ ವಾಗಿ “ಯುವ ಶಕ್ತಿ ಮಾತೃ ಮಂಡಳಿ” ಸಂಘಟನೆಗೆ ಚಾಲನೆ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ, ಹಿರಿಯರಾದ ಸೋಮಪ್ಪಪೂಜಾರಿ, ಕಿರಣ್ ಎಂ ಜಿ ಸ್ಟೋರ್, ಯುವಶಕ್ತಿ ಸಂಘಟನೆಯ ಅಧ್ಯಕ್ಷ ರಂಜಿತ್ ಕುಲಾಲ್, ಗೌರವಾಧ್ಯಕ್ಷ ಮಹಾಬಲ ಮಜಿ, ಮಾತೃ ಮಂ ಡಳಿಯ ಅಧ್ಯಕ್ಷೆ ಶಾಲಿನಿ ಭಾಸ್ಕರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರದವರಿಗೆ ಬಹುಮಾನ ವಿತರಿಸಲಾಯಿತು.ಆಷಾಡ ಮಾಸದ ವಿಶೇಷ ಖಾದ್ಯಗಳ ಸಹಭೋಜನ ನಡೆಯಿತು. ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ವಿದ್ಯಾ ಪ್ರಕಾಶ್‌ ಅಮ್ಮಣ್ಣಾಯರವರ ‘ಭಕ್ತಿ ಭಾವ ಲಹರಿ” ಗೀತಾ ಸಂಕಲನ ಬಿಡುಗಡೆ : ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಪು ತಾಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠ;

Voiceoftulunadu

ಉಡುಪಿ ತಾಂಗದಗಡಿಯಲ್ಲಿ ನೂತನವಾಗಿ ಅಲುಗ್ಲೇಜ್(Aluglaze) ಉಪಿವಿಸಿ ವಿಂಡೋಸ್ ಹಾಗೂ ಡೋರ್ಸ್ ಶೋರೂಂನ ನೂತನ ಶಾಖೆ ಉದ್ಘಾಟನೆ ಸಮಾರಂಭ;

Voiceoftulunadu

ಅಹಮದಾಬಾದ್-ಮಂಗಳೂರು ಜಂಕ್ಷನ್-ಅಹಮದಾಬಾದ್ ರೈಲುಯಾನ‘ವೀಕ್ಲಿ ಟ್ರೈನ್ ಆನ್ ಡಿಮ್ಯಾಂಡ್’ ವಿಶೇಷ ರೈಲು ಸಂಚಾರ ಅವಧಿ ವಿಸ್ತಾರ;

Voiceoftulunadu

Leave a Comment