September 4, 2026
Uncategorizedಕ್ರೈಮ್ಜಿಲ್ಲಾ ಸುದ್ದಿಬ್ರೇಕಿಂಗ್ ನ್ಯೂಸ್ರಾಜಕೀಯಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ: ಕಡತಗಳ ಪರಿಶೀಲನೆ ;

ವರದಿ/ ಚಿತ್ರ: ದಿತೇಶ್ ಮಂಗಳೂರು

ಸುಳ್ಯ: ಕರ್ನಾಟಕ ರಾಜ್ಯ ಲೋ ಕಾಯುಕ್ತ ಪೋಲಿಸ್ ಅಧಿಕಾರಿಗಳು ಸುಳ್ಯ ತಾಲೂಕು ಕಛೇರಿಗೆ ದಾಳಿ ಮಾಡಿ ಕಚೇರಿಯ ವಿವಿಧ ವಿಭಾಗಗಳ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.ಬುಧವಾರ ಬೆಳ್ಳಂಬೆಳಗ್ಗೆ ಉಡುಪಿ ಲೋಕಾಯುಕ್ತ ಡಿವೈಎಸ್‌ಪಿ ಹಾಲ್ ಮೂರ್ತಿ ರಾವ್ ನೇತೃತ್ವದಲ್ಲಿ ಕಚೇರಿಗೆ ಆಗಮಿಸಿದ ಅಧಿಕಾರಿಗಳು ಕಚೇರಿ ಯಲ್ಲಿ ಕಡತಗಳ ಪರಿಶೀಲನೆ ನಡೆಸಿ ದರು.

ಸಂಜೆಯ ವರೆಗೆ ಕಡತಗಳ ಪರಿ ಶೀಲನೆ ಮುಂದುವರಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ಕಡತಗಳನ್ನು ಪರಿಶೀ ಲಿಸಿದ ಲೋಕಾಯುಕ್ತ ಅಧಿಕಾರಿಗಳು ತಹಸೀಲ್ದಾ‌ರ್, ಉಪತಹಸೀಲದಾರ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸಾರ್ವಜನಿಕರಿಂದ ಸ್ವೀಕರಿದ ಅರ್ಜಿಗಳು, ಉಳಿದ ಅರ್ಜಿಗಳು, ವಿಲೇವಾರಿ ಮಾಡಿದ ಅರ್ಜಿಗಳ ಕುರಿತು ಮಾಹಿತಿ ಪಡೆದರು. ಕೆಲವು ಶಾಖೆಗಳಲ್ಲಿ ಹಲವು ಸಮಯದಿಂದ ಕಡತಗಳು ಬಾಕಿ ಇರುವುದು ಕಂಡುಬಂದಿದ್ದು, ಇಷ್ಟು ಸಮಯದಿಂದ ಯಾಕೆ ಪೆಂಡಿಂಗ್ ಇಟ್ಟಿದ್ದೀರಿ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಶ್ನಿಸಿದರು.`ತಹಸೀಲ್ದಾರ್ ಕಚೇರಿಯಲ್ಲಿ ಕಡತಗಳನ್ನು ಪರಿಶೀಲಿಸಿ ಸಿಬ್ಬಂದಿ ಯಿಂದ ಮಾಹಿತಿ ಪಡೆದು, ಪರಿಶೀಲಿಸಿ ದಾಖಲಿಸಿದರು.

ಕಚೇರಿಗೆ ಬಂದ ಸಾರ್ವಜನಿಕರಿಂದ ಅಹವಾಲು ಸ್ವೀಕ ರಿಸಿದರು. ಕಚೇರಿಯ ವ್ಯವಸ್ಥೆ ಬಗ್ಗೆಯೂ ಪರಿಶೀಲನೆ ನಡೆಸಿ ದಾಖಲೆ ಸಿದರು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ತಾಲೂಕು ಕಚೇರಿಗಳಲ್ಲಿ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಪೋಲಿಸ್ ಅಧಿಕಾರಿಗಳಿಂದ ಸುಳ್ಯ ತಾಲೂಕು ಕಛೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ಪ್ರಾರಂಭಿ ಸಿದ ಅಧಿಕಾರಿಗಳು ಮೊಬೈಲ್ ಗಳಲ್ಲಿನ ಗೂಗಲ್ ಪೇ ಮತ್ತು ಫೋನ್ ಪೇ ಹಾಗೂ ತಹಸೀಲ್ದಾರ್ ಕಛೇರಿಯಲ್ಲಿ ಸಿಬ್ಬಂದಿಗಳನ್ನು ಕುಳ್ಳಿರಿಸಿ ತಪಾಸಣೆ ನಡೆಸಿದರು.

ತಾಲೂಕು ಕಛೇರಿಯಲ್ಲಿಕುಳಿತುಕೊಂಡಿದ್ದ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರನ್ನು ಲೋಕಾಯುಕ್ತ ಪೋಲಿಸ್ ಅಧಿಕಾರಿಗಳು ಪ್ರಶ್ನಿಸಿ ಬರೆದುಕೊಂಡು ಕಡತಗಳನ್ನು ಪರಿಶೀಲನೆ ಹಾಗೂ ಸಾರ್ವಜನಿ ಕರ ಬ್ಯಾಗ್ ಹಾಗೂ ಟ್ರೋಕರ್ ಗಳ ಹಾವಳಿ ಕುರಿತಾಗಿಯು ಪ್ರಶ್ನಿಸಿದರು.ಈ ತಂಡದಲ್ಲಿ ಸಿಬ್ಬಂದಿ ನಾಗೇಶ್ ಉಡುಪ, ನಾಗರಾಜ್, ಪುಷ್ಪವತಿ, ಸುದೀಪ್, ರವಿ ಜೊತೆಗೆ ಲೋಕಾಯುಕ್ತ ಪೋಲೀಸ್ ಅಧಿಕಾರಿಗಳ ಸ್ಥಳೀಯ ಸರಪಂಚರು ಉಪಸ್ಥಿ ತರಿದ್ದರು.

Related posts

ಅಸಂಖ್ಯಾತ ಜೀವಗಳನ್ನು ಸ್ಪರ್ಶಿಸಿದ ಪುಣ್ಯಾತ್ಮ ಕಾಂತಾಡಿಗುತ್ತು ಉಗ್ಗ ಶೆಟ್ಟಿ ಚಿರಶಾಂತಿಯಲಿ;

Voiceoftulunadu

ಕರ್ನಾಟಕ ಪ್ರವಾಸಿ ತಾಣಗಳಿಗೆ ಆಕಾಶ ಮಾರ್ಗದ ಸಂಪರ್ಕ :13 ಕೇಂದ್ರಗಳಲ್ಲಿ ಬೃಹತ್ ‘ಕೇಬಲ್ ಕಾರ್’ ವ್ಯವಸ್ಥೆಗೆ ಸರ್ಕಾರ ಗ್ರೀನ್ ಸಿಗ್ನಲ್! ;

Voiceoftulunadu

ಮೂಡುಬೆಳ್ಳೆ : ಕೆನರಾ ಬ್ಯಾಂಕ್ CSR ಯೋಜನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಉದ್ಘಾಟನೆ ಮೂಡುಬೆಳ್ಳೆಯ ಲಯನ್ಸ್ ಸೇವಾ ಭವನದಲ್ಲಿ ಅಳವಡಿಸಲಾದ ಸೌರ ವಿದ್ಯುತ್ ವ್ಯವಸ್ಥೆ;

Voiceoftulunadu

Leave a Comment