28.5 C
ಮಂಗಳೂರು
September 4, 2026
Uncategorizedಆರೋಗ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಮಂಗಳೂರಿನಲ್ಲಿ ತಾರಾ ಆಸ್ಪತ್ರೆಯಿಂದ ಮೊದಲ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ;

ವರದಿ /ಚಿತ್ರ :ದಿತೇಶ್ ಮಂಗಳೂರು

ಮಂಗಳೂರು: ರಮೇಶ್ ಭಾರತಿ ಹೆಲ್ತ್‌ಕೇ‌ರ್ ಪ್ರೈವೇಟ್ ಲಿಮಿಟೆಡ್‌ ಘಟಕವಾದ ತಾರಾ ಆಸ್ಪತ್ರೆ, ಮಂಗ ಳೂರು, ತನ್ನ ಮೊದಲ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದು, ಮಂಗ ಳೂರಿನಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಧಾರಿತ ಮೂತ್ರಪಿಂಡ ಚಿಕಿತ್ಸಾ ಸೇವೆಗಳನ್ನು ಒದಗಿಸುವ ಆಸ್ಪ ತ್ರೆಯ ಪ್ರಯತ್ನದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.ಕೊನೆಯ ಹಂತದ ಮೂತ್ರಪಿಂಡ (End-Stage Kid-ney Disease-ESKD) ತ್ತಿದ್ದ ಹಾಗೂ ನಿಯಮಿತವಾಗಿ ಡಯಾ ಲಿಸಿಸ್ ಚಿಕಿತ್ಸೆಗೆ ಒಳಗಾಗುತ್ತಿದ್ದ ರೋಗಿ ಗೆ ಈ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ರೋಗಿಯ ಪತ್ನಿಯವರು ಮೂತ್ರಪಿಂಡವನ್ನು ದಾನ ಮಾಡಿದರು.ತಾರಾ ಆಸ್ಪತ್ರೆಯಲ್ಲಿ ವಿಶೇಷ ಮೂತ್ರಪಿಂಡ ಕಸಿ ಚಿಕಿತ್ಸಾ ಕಾರ್ಯಕ್ರ ಮವನ್ನು ಸ್ಥಾಪಿಸಲಾಗಿದ್ದು, ನೆಫ್ರಾಲಜಿ ಮತ್ತು ಯುರಾಲಜಿ ವಿಭಾಗಗಳ ತಜ್ಞರು, ಸುಸಜ್ಜಿತ ಡಯಾಲಿಸಿಸ್ ಘಟಕ, ರೀನಲ್ ಐಸಿಯು ಹಾಗೂ ಮೂತ್ರಪಿಂಡ ಕಸಿ ಚಿಕಿತ್ಸೆಯಲ್ಲಿ ಅನು ಭವ ಹೊಂದಿರುವ ನರ್ಸ್‌ಗಳು ಮತ್ತು ಇತರ ಆರೋಗ್ಯ ಸಿಬ್ಬಂದಿಗಳನ್ನೊಳ ಗೊಂಡ ಬಹುಶಿಸ್ತೀಯ ತಂಡ ಇದರ ಭಾಗವಾಗಿದೆ.

ಈ ಯಶಸ್ವಿ ಕಸಿ ಶಸ್ತ್ರಚಿಕಿತ್ಸೆಯನ್ನು ಯುರಾಲಜಿಸ್ಟ್‌ಗಳಾದ ಡಾ. ಪ್ರಜ್ವಲ್TAMATARATAMATARATOMATARA TARATAMAHರವೀಂದ್ರ, ಡಾ. ನರೇಂದ್ರ ಪೈ ಹಾಗೂ ಡಾ. ಸೂರಜ್ ಹೆಗ್ಡೆ, ಮತ್ತು ನೆಫ್ರಾಲ ಜಿಸ್ಟ್ಗಳಾದ ಡಾ. ಪ್ರದೀಪ್ ಶೆಣೈ ಹಾಗೂ ಡಾ. ಪ್ರಜ್ವಲ್ ಕೆ. ಅವರನ್ನೂ ಳಗೊಂಡ ತಜ್ಞರ ತಂಡವು, ಆಸ್ಪತ್ರೆಯ ಸಮರ್ಪಿತ ಟ್ರಾನ್ಸ್‌ಪ್ಲಾಂಟ್ ತಂಡದ ಸಹಕಾರದೊಂದಿಗೆ ನೆರವೇರಿಸಿತು.

ಈ ಮಹತ್ವದ ಸಾಧನೆಯ ಸಂದ ರ್ಭದಲ್ಲಿ ಮಾತನಾಡಿದ ತಾರಾ ಆಸ್ಪ ತ್ರೆಯ ವ್ಯವಸ್ಥಾಪಕ ನಿರ್ದೆಶಕರಾದ ಡಾ. ಜನಾರ್ದನ ಕಾಮತ್, ಸಂಪೂ ರ್ಣ ವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿ ತಂಡವನ್ನು ಅಭಿನಂದಿಸಿದರು.’ಈ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯು ರೋಗಿಗಳಿಗೆ ಸುಧಾ ರಿತ ವೈದ್ಯಕೀಯ ಸೇವೆಗಳನ್ನು ಒದಗಿ ಸುವ ನಮ್ಮ ಬದ್ಧತೆಯನ್ನು ಪ್ರತಿಬಿಂ ಬಿಸುತ್ತದೆ. ಮಂಗಳೂರು ಹಾಗೂ ಸುತ್ತ ಮುತ್ತಲಿನ ಪ್ರದೇಶಗಳ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಒದಗಿ ಸುವ ನಮ್ಮ ನಿರಂತರ ಪ್ರಯತ್ನದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಈ ಸಾಧನೆಗೆ ಕಾರಣರಾದ ಸಂಪೂರ್ಣ ತಂಡದ ಸಮರ್ಪಣೆ ಮತ್ತು ಸಂಘಟಿತ ಪ್ರಯತ್ನಗಳ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಕಾಮತ್ ಹೇಳಿದರು.ಮೂತ್ರಪಿಂಡ ಕಸಿ ಚಿಕಿತ್ಸೆಯ ಸಮನ್ವಯ ಹಾಗೂ ರೋಗಿಗಳಿಗೆ ಆಗ ತ್ಯವಿರುವ ಮಾರ್ಗದರ್ಶನವನ್ನು ಕುಮಾರಿ ಅಕ್ಷತಾ ಶೆಟ್ಟಿ ಅವರು ನಿರ್ವ ಹಿಸಿದ್ದು, ಮೂತ್ರಪಿಂಡ ಕಸಿ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಹಾ ಯಕ್ಕಾಗಿ ಅವರನ್ನು ಸಂಪರ್ಕಿಸ ಬಹುದು.

ಮೂತ್ರಪಿಂಡ ಕಸಿ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿ ಮತ್ತು ಸಹಾ ಯಕ್ಕಾಗಿ ದೂರವಾಣಿ: 9845835 010 ಇ-ಮೇಲ್: transplant@ tarahospital.co.in

Related posts

ವೇಳ್ ಘಡಿ’ ಕೊಂಕಣಿ ಸಿನಿಮಾಕ್ಕೆ ಮುಹೂರ್ತ* ಸಿನಿಮಾ ಮನರಂಜನೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡಲಿ : ಫಾ. ಓಸ್ವಾಲ್ಡ್ ಮೊಂತೇರೋ;

Voiceoftulunadu

ಉಸಿರಿರುವಾಗ ಸಿಗದ ಆಸರೆ: ಸಾವಿನ ನಂತರದ ತೋರಿಕೆಯ ಪ್ರೀತಿಯೇ?

Voiceoftulunadu

ಬಜ್ಪೆ ಕಿನ್ನಿಪದವಿನಲ್ಲಿ ಆಪಾಯದಂಚಿನಲ್ಲಿ ಮನೆಗಳು, ಭೇಟಿ ನೀಡಿ ಪರಿಶೀಲನೆ ನಡೆಸಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸದಸ್ಯರು : ತುರ್ತು ಕ್ರಮಕ್ಕೆ ಆಗ್ರಹ;

Voiceoftulunadu

Leave a Comment