September 4, 2026
Uncategorizedಆರೋಗ್ಯಜಿಲ್ಲಾ ಸುದ್ದಿವಾಣಿಜ್ಯವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

24 ವಾರದಲ್ಲೇ ಜನನ: ಸಾವಿನ ಅಂಚಿನಿಂದ ಬದುಕಿಗೆ ಬಂದ ಪುಟ್ಟ ಕಂದ : ಇಂಡಿಯಾನ ಆಸ್ಪತ್ರೆಯಲ್ಲಿ 5½ ತಿಂಗಳ ಅವಧಿಪೂರ್ವ ಶಿಶುವಿಗೆ ಯಶಸ್ವಿ ಚಿಕಿತ್ಸೆ ;

ವರದಿ/ ಚಿತ್ರ :ದಿತೇಶ್ ಮಂಗಳೂರು

ಮಂಗಳೂರು : ಕೇವಲ 24cl ವಾರಗಳ ಗರ್ಭಾವಸ್ಥೆಯಲ್ಲಿ, ಅಂದರೆ ಸುಮಾರು 54 ತಿಂಗಳಲ್ಲೇ ಜನಿಸಿದ ಅತ್ಯಂತ ಅವಧಿಪೂರ್ವ ಶಿಶುವೊಂದು ddo-3 NICU maria roerror za ಯಶಸ್ವಿಯಾಗಿ ಚೇತರಿಸಿಕೊಂಡಿದೆ.ಬದುಕುಳಿಯುವ ಸಾಧ್ಯತೆ ಅತ್ಯಂತ ಕಡಿಮೆ ಎನ್ನಲಾಗುವ ಹಂತದಲ್ಲಿ ಜನಿಸಿದ್ದ ಈ ಮಗು ಇದೀಗ ಸುಮಾರು ಆರು ತಿಂಗಳ ಪಯಸ್ಸಿನ ಲ್ಲಿದ್ದು, ಯಾವುದೇ ಆಮ್ಲಜನಕದ ನೆರವಿಲ್ಲದೆ ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದೆ.

ಮಗು ಉತ್ತಮವಾಗಿ ಹಾಲು ಸೇವಿಸುತ್ತಿದ್ದು, ತೂಕವೂ ಹೆಚ್ಚಾಗುತ್ತಿದೆ. ಕಣ್ಣು, ಗಳೂ ಸಹಜವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ . 24 ವಾರಗಳಲ್ಲಿ ಜನಿಸುವ ಶಿಶುಗಳನ್ನು ಅತ್ಯಂತ ಅವಧಿಪೂರ್ವ ಶಿಶು ಗಳು ಎಂದು ಪರಿಗಣಿಸಲಾಗುತ್ತದೆ. ಇಂತಹ ಮಕ್ಕಳಲ್ಲಿ ಶ್ವಾಸಕೋಶ , ಮೆದುಳು, ಕರುಳು, ಕಣ್ಣುಗಳು ಹಾಗೂ ರೋಗನಿರೋಧಕ ವ್ಯವಸ್ಥೆಗಳು ಸೇರಿದಂತೆ ಹಲವು ಅಂಗಾಂಗಗಳು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಾಗಿರುವುದಿಲ್ಲ .ಹೀಗಾಗಿ ನಿರಂತರ ನಿಗಾ, ಉಸಿರಾಟದ ಬೆಂಬಲ, ಸೂಕ್ತ ಪೌಷ್ಠಿಕಾಂಶ, ಸೋಂಕು ನಿಯಂತ್ರಣ ಹಾಗೂ ವಿವಿಧ ತಜ್ಞ ವೈದ್ಯರ ಸಮನ್ವಯದ ಚಿಕಿತ್ಸೆ ಅಗತ್ಯವಾಗುತ್ತದೆ.

ಈ ಮಗುವಿನ ಚಿಕಿತ್ಸೆಯಲ್ಲಿ ಇಂಡಿಯಾನ ಆಸ್ಪತ್ರೆಯ ಹಿರಿಯ ಮಕ್ಕಳ ತಜ್ಞ ಹಾಗೂ ಅಧ್ಯಕ್ಷ ಪ್ರೊ ಡಾ. ಅಲಿ ಕುಂಬ್ಳೆ, ಹಿರಿಯ ನಮಾತ ಶಿಶು ತಜ್ಞಡಾ. ಅಭಿಷೇಕ್ ಕೆ. ಫಡೈ, ಮಕ್ಕಳ ಶಸ್ತ್ರಚಿಕಿತ್ಸಕ ಡಾ. ವಿಜಯ್ ಮಹಾಂತೇಶ ಎಸ್ ಸಮಾಳದ್ ದಂತೆ NICU ವೈದ್ಯರು, ನರ್ಸ್ಗಳು ಹಾಗೂ ಆರೋಗ್ಯ ಸಿಬ್ಬಂದಿ ಭಾಗವಹಿ ಮಗುವಿನ ಚೇತರಿಕೆ ಆಸ್ಪತ್ರೆಯ ಸಿದ್ದರು.ವೈದ್ಯಕೀಯ ತಂಡದ ಸಮರ್ಪಣೆ ಹಾಗೂ ಅತ್ಯಾಧುನಿಕ ನಜಾತ ಶಿಶು ಆರೈಕೆ ಸೌಲಭ್ಯಗಳ ಫಲವಾಗಿದೆ ಎಂದು ಡಾ. ಅಲಿ ಕುಂಬ್ಳೆ ಹೇಳಿದರು.

ಸಕಾಲಿಕ ವೈದ್ಯಕೀಯ ಮಧ್ಯಸ್ತ ವೇಶ, ನಿರಂತರ ತಜ್ಞರ ಮೇಲ್ವಿಚಾರಣೆ ಹಾಗೂ ವೈದ್ಯರು – ಶುಶ್ರೂಷಾ ಸಿಬ್ಬಂ ದಿಯ ಸತತ ಪರಿಶ್ರಮದಿಂದ ಈ ಫಲಿ ತಾಂಶ ಸಾಧ್ಯವಾಗಿದೆ ಎಂದರು. 24 ವಾರಗಳಲ್ಲಿ ಜನಿಸುವ ಶಿಶುಗಳ ಪ್ರತಿಯೊಂದು ಅಂಗಾಂಗವೂ ಅತ್ಯಂತ ಅಪಕ್ವವಾಗಿರುವುದರಿಂದ ಚಿಕಿತ್ಸೆಗೆ ವಿಶೇಷ ಕಾಳದ ಅಗತ್ಯ ವಿರುತ್ತದೆ ಎಂದರು.ಸಾಮಾನ್ಯವಾಗಿ 22 ವಾರಗಳಿಂದ 25 ವಾರಗಳ 6 ದಿನಗಳ ನಡುವಿನ ಅವಧಿಯನ್ನು ತಿಶುವಿನ ಬದುಕುಳಿ ಯುವಿಕೆಯ ಗಡಿಯಾಗಿ ಪರಿಗಣಿಸಲಾ ಗುತ್ತದೆ .

ಈ ಹಂತದಲ್ಲಿ ಗರ್ಭದದಲ್ಲಿರುವ ಪ್ರತಿಯೊಂದು ಹೆಚ್ಚುವರಿ ದಿನವೂ ಮಗುವಿನ ಬದುಕುಳಿಯುವಿಕೆ ಹಾಗೂ ಮುಂದಿನ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರು ತ್ತದೆ.

ಆದಾಗ್ಯೂ, ಅತ್ಯುತ್ತಮ ವೈದ್ಯ ಕೇಯ ಆರೈಕೆ ದೊರೆತರೂ ಇಂತಹ ಎಲ್ಲಾ ಶಿಶುಗಳು ಬದುಕುಳಿಯುತ್ತಾರೆ ಎಂಬ ಖಾತರಿ ಇರುವುದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇಂಡಿಯಾನಾ ಆಸ್ಪತ್ರೆಯ IIIA NICU ನಲ್ಲಿ ಅತ್ಯಾಧುನಿಕ ವೆಂಟಿಲೇಷನ್ ವ್ಯವಸ್ಥೆ, HIE ಗೆ ಚಿಕಿತ್ಸಕ ಹೈಪೋಥರ್ಮಿಯಾ, ಹಿಮೋ ಡೈನಾಮಿಕ್ ಮೇಲ್ವಿಚಾರಣೆ , 24 ಗಂಟೆಗಳ ನವಜಾತ ಶಿಶು ತುರ್ತು ಆರೈಕೆ ಹಾಗೂ ಮಕ್ಕಳ ಶಸ್ತ್ರಚಿಕಿತ್ಸಕರು ಮತ್ತು ಹೃದ್ರೋಗ ತಜ್ಞರ ಸೇವೆ ಲಭ್ಯವಿದೆ. ಅತ್ಯಂತ ಅವಧಿಪೂರ್ವ ಶಿಶುವಿನ ಆಸ್ಪತ್ರೆಯಿಂದ ಬಿಡುಗಡೆಯಾಗಿರು ವುದು ಮಹತ್ವದ ಮೈಲಿಗಲ್ಲಾದರೂ, ವೈದ್ಯಕೀಯ ಪ್ರಯಾಣ ಇಲ್ಲಿಗೆ ಮುಗಿ ಯುವುದಿಲ್ಲ.

ಮುಂದಿನ ದಿನಗಳಲ್ಲಿ ಮಗುವಿನ ಬೆಳವಣಿಗೆ, ಪೌಷ್ಠಿಕಾಂಶ, ದೃಷ್ಟಿ, ಶ್ರವಣ, ನರಮಂಡಲದ ಬೆಳ ಹಾಗೂ ಇತರ ಬೆಳವಣಿಗೆಯ ಹಂತಗಳ ಮೇಲೆ ನಿಯಮಿತ ನಿಗಾ ಅಗತ್ಯವಿದೆ ಎಂದು ವೈದ್ಯರು ತಿಳಿಸಿ ದ್ದಾರೆ.

ಸಕಾಲಿಕ ಶಿಫಾರಸು, ತೃತೀಯ ಹಂತದ ಆರೈಕೆ ಕೇಂದ್ರದಲ್ಲಿ ಹೆರಿಗೆ, ಅತ್ಯಾಧುನಿಕ NICU ಸೌಲಭ್ಯ , ವೈದ್ಯಕೀಯ ತಂಡದ ಸಮನ್ವಯ ಮತ್ತು ಪೋಷಕರ ನಿರಂತರ ಬೆಂಬಲದಿಂದ ಅತ್ಯಂತ ಸವಾಲಿನ ಸಂದರ್ಭಗಳಲ್ಲೂ ಭರವಸೆಯ ಫಲಿತಾಂಶ ಸಾಧ್ಯ ಎಂಬುದಕ್ಕೆ ಈ ಪುಟ್ಟ ಶಿಶುವಿನ ಚೇತರಿಕೆ ಸಾಕ್ಷಿಯಾಗಿದೆ.

Related posts

ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಪುಸ್ತಕ ಪ್ರದರ್ಶನ ಉದ್ಘಾಟಿಸಿದ ಪ್ರಾಂಶುಪಾಲ ನಾಗರಾಜ್ ಜಿ. ಎಸ್‌ ;

Voiceoftulunadu

ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರಿಂದ ಬೆಳ್ತಂಗಡಿಯಲ್ಲಿನ ಸುಸಜ್ಜಿತ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟನಾ ಸಮಾರಂಭ:

Voiceoftulunadu

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಣ್ಣೂರು ಮಾಲ್ಯಗುತ್ತು ಬಿ.ಬಿ. ಐತ್ತಪ್ಪ ರೈ ನೇಮಕ;

Voiceoftulunadu

Leave a Comment