November 3, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿರಾಜ್ಯ/ದೇಶವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾಸಿನಿಮಾ/ಮನರಂಜನೆ

ರಾಷ್ಟ್ರಪ್ರಶಸ್ತಿ ವಿಜೇತ ತುಳುನಾಡಿನ ಕಲಾವಿದರು ತಾಯ್ನಾಡಿಗೆ : ಏರ್‌ಪೋರ್ಟ್‌ನಲ್ಲಿ ಆತ್ಮೀಯ ಸ್ವಾಗತ ;

ವರದಿ: ದಿತೇಶ್ ಮಂಗಳೂರು

ಮಂಗಳೂರು: 72ನೇ ರಾಷ್ಟ್ರೀ ಯ ಸಿನಿಮಾ ಪ್ರಶಸ್ತಿಗೆ ಭಾಜನರಾ ಗಿರುವ ಖ್ಯಾತ ರಂಗಭೂಮಿ ಕಲಾವಿದೆ ರೂಪಶ್ರೀ ವರ್ಕಾಡಿ, ಬಾಲನಟ ಆತೀಶ್ ಎಸ್. ಶೆಟ್ಟಿ, ಸುಮಂತ್ ಭಟ್ ಹಾಗೂ ಸಿನಿಮಾಧಾರಿತ ಉತ್ತಮ ಪುಸ್ತಕ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿರುವ ಕುಂದಾಪುರ ಮೂಲದ ಡಾ.ಪ್ರದೀಪ್ ಕೆಂಚನೂರು ಅವರು ಬುಧವಾರ ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ವಿಮಾನ ನಿಲ್ದಾಣದಲ್ಲಿ ಆತ್ಮೀಯರು, ಹಿತೈಷಿಗಳು ಸ್ವಾಗತ . ಸ್ವಾಗತ ಕೋರಿದರು.’ಮಿಥ್ಯಾ ಕನ್ನಡ ಸಿನಿಮಾ ಮೂರು ರಾಷ್ಟ್ರೀಯ ಪ್ರಶಸ್ತಿ ಬಾಚಿ ಕೊಂಡಿದ್ದು ಅತ್ಯುತ್ತಮ ಚಿತ್ರ ವಿಭಾಗ ದಲ್ಲಿ ಚಿತ್ರದ ಬರಹಗಾರ ಹಾಗೂ ನಿರ್ದೇಶಕ ಸುಮಂತ್ ಭಟ್, ಬಾಲ ನಟ ಆತೀಶ್ ಎಸ್. ಶೆಟ್ಟಿ, ಪೋಷಕ ನಟಿ ರೂಪಶ್ರೀ ವರ್ಕಾಡಿ ಮಂಗಳ ವಾರ ನವದೆಹಲಿಯಲ್ಲಿ ನಡೆದ ಸಮಾ ರಂಭದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಈ ಕುರಿತು ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡ ರೂಪಶ್ರೀ ವರ್ಕಾಡಿ ಅವರು, ‘ರಾಷ್ಟ್ರೀ ಯ ಸಿನಿಮಾ ಪ್ರಶಸ್ತಿ ವಿಭಾಗದಲ್ಲಿ ತುಳುನಾಡಿನ ಕಲಾವಿದರಿಗೆ ಪ್ರಶಸ್ತಿ ಲಭಿಸಿರುವುದು ತುಳು ಭಾಷೆಗೆ ದಕ್ಕಿದ ಬಹುದೊಡ್ಡ ಸ್ಥಾನಮಾನವಾಗಿದೆ.

ಸಿನಿಮಾದಲ್ಲಿ ನಟಿಸುವಾಗ ಇಷ್ಟು ದೊಡ್ಡ ಪ್ರಶಸ್ತಿ ಸಿಗುವ ನಿರೀಕ್ಷೆಖಂಡಿತಾ ಇರಲಿಲ್ಲ. ಆದರೆ ತುಳುನಾ ಡಿನ ಸರ್ವರ ಪ್ರೀತಿ, ಹೆತ್ತವರು ಮತ್ತು ದೈವದೇವರ ಆಶೀರ್ವಾದದಿಂದ ಈ ಮನ್ನಣೆ ಸಿಕ್ಕಿದೆ.ಇದು ಜೀವನದಲ್ಲಿ ಅತ್ಯಂತ ಸಂತಸದ ದಿನ ಮತ್ತು ಎಂದಿಗೂ ಮರೆಯಲಾಗದ್ದು, ಮುಂದೆ ಒಬ್ಬ ನಟಿಯಾಗಿ ಸಾಮಾಜಿಕ ಕಾಳಜಿಯ ಸಿನಿಮಾಗಳಲ್ಲಿ ಹೆಚ್ಚೆಚ್ಚು ನಟಿಸುತ್ತೇನೆ. ಇಂತಹ ಅವಕಾಶ ಕಲ್ಪಿಸಿದ್ದಕ್ಕೆ ನಿರ್ದೇಶಕ, ನಿರ್ಮಾಪಕರು ಸಹಿತ ಎಲ್ಲರಿಗೂ ಧನ್ಯವಾದಗಳು’ ಎಂದರು.

ನಿರ್ದೇಶಕ ಸುಮಂತ್ ಭಟ್ ಮಾತಾಡಿ, ‘ಹಿಂದೆ ನಮ್ಮ ಸಂತೋ ಪಕ್ಕಾಗಿ ಸಿನಿಮಾ ಮಾಡುತ್ತಿದ್ದೆವು. ಆದರೆ ರಾಷ್ಟ್ರಪ್ರಶಸ್ತಿಯಿಂದ ನಮ್ಮ ಜವಾಬ್ದಾರಿಹೆಚ್ಚಿದೆ. ನಮ್ಮ ಸಿನಿಮಾವನ್ನು ಜನರು ನೋಡುತ್ತಾರೆ ಇಷ್ಟಪಡುತ್ತಾರೆ ಎಂದರೆ ಇನ್ನಷ್ಟು ಗಮನಕೊಟ್ಟು ಸಿನಿಮಾ ಮಾಡ ಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದರು.

ಬಾಲನಟ ಆತೀಶ್ ಎಸ್. ಶೆಟ್ಟಿ ಮಾತಾಡಿ, ‘ಪ್ರಶಸ್ತಿಯನ್ನು ನಾನು ನಿರೀ ಕ್ಷಿಸಿರಲಿಲ್ಲ, ಮಿಥ್ಯ ಸಿನಿಮಾದಲ್ಲಿ ಅವ ಕಾಶ ನೀಡಿರುವ ನಿರ್ದೇಶಕ ಹಾಗೂ ಸಹಕಲಾವಿದರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಹೆತ್ತವರು ಮತ್ತು ಕಾಲೇಜಿನ ಆಡಳಿತ ಮಂಡಳಿಯ ಪ್ರೋತ್ಸಾಹ ದೊಡ್ಡಮಟ್ಟದಲ್ಲಿದ್ದು ಅವರಿಗೆ ನಾನು ಸದಾ ಚಿರಋಣಿಯಾ ಗಿದ್ದೇನೆ” ಎಂದರು.

Related posts

ನಂದಿಕೂರು : 73 ಕೆ.ಜಿ ಗೂ ಅಧಿಕ ತೂಕದ ಗಾಂಜಾ ನಾಶಉಡುಪಿ ಜಿಲ್ಲಾ ಎಸ್ಪಿ ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹರಿರಾಂ ಶಂಕರ್ ನೇತೃತ್ವ;

Voiceoftulunadu

ಪಡುಬಿದ್ರಿ ಬಿಲ್ಲವ ಸಂಘದಲ್ಲಿಆಟಿಡೊಂಜಿ ದಿನ ಕಾರ್ಯಕ್ರಮಚೆನ್ನೆ ಮಣೆ ಆಟ ಆಡುವ ಮೂಲಕ ಉದ್ಘಾಟನೆ ನೆರವೇರಿಸಿದ ಪಿ.ಕೆ. ಸದಾನಂದ, ವೈ ಸುಧೀರ್ ಕುಮಾರ್

Voiceoftulunadu

ರೋಹನ್ ಕಾರ್ಪೊರೇಶನ್‌ನ ‘ಫ್ರೀಡಂ ಪ್ಯಾಲೆಟ್ 2026’ರ ಅಂತಿಮ ಸುತ್ತು : ರೋಹನ್ ಸಿಟಿಯಲ್ಲಿ ಯಶಸ್ವಿ;

Voiceoftulunadu

Leave a Comment