ಪಡುಬಿದ್ರಿ : ಪಡುಬಿದ್ರಿ ಬಿಲ್ಲವಸಮಾಜ ಸೇವಾ ಸಂಘ, ಕಲ್ಪತರು ಸ್ವ ಸಹಾಯ ಸಂಘಗಳ ಒಕ್ಕೂಟ ಮತ್ತು ನಾರಾಯಣಗುರು ಮಹಿಳಾ ಮಂಡಳಿ ಪಡುಬಿದ್ರಿ ಇವರ ಸಹಭಾಗಿತ್ವದಲ್ಲಿ ಭಾನುವಾರ ఆటింజి ದಿನ ಕಾರ್ಯಕ್ರಮ ಪಡುಬಿದ್ರಿ ಬಿಲ್ಲವ ಸಂಘದ ಸಭಾಂಗಣದಲ್ಲಿ ಜರಗಿತು.
ತುಳು ಜಾನಪದ ಚಿಂತಕ, ಕೃಷಿಕ ಪಿ.ಕೆ. ಸದಾನಂದ ಮತ್ತು ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಚೆನ್ನೆ ಮಣೆ ಆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ತುಳು ಜಾನಪದ ಚಿಂತಕ, ಕೃಷಿಕ ಪಿ.ಕೆ.ಸದಾನಂದ ಮಾತನಾಡಿ, ಕಾಯಕವೇ ಕೈಲಾಸ ಎಂದು ದುಡಿದ ಹಿರಿಯರ ಅನುಭವಗಳೇ ನಮಗೆ ಮಾರ್ಗದರ್ಶನ. ತುಳುನಾಡಿನ ಆಚರಣೆಗಳಲ್ಲಿಯ ವ್ಯತ್ಯಾಸದ ಜೊತೆಗೆ ಪದ ಬಳಕೆಗಳಲ್ಲೂ ವ್ಯತ್ಯಾಸವಾಗುತ್ತಿದೆ.ಮೆರೆಸುವ ಕಾರ್ಯ ತುಳುವರು ಸಂಸ್ಕೃತಿಯನ್ನು ಮರೆಯದೆ ಅದನ್ನು ಮಾಡಬೇಕಿದೆ. ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ನಡೆಯಲ್ಲಿ ಹುಟ್ಟಿನಿಂದ ಸಾವಿನವರೆಗೂ ನಮ್ಮ ಸಂಪ್ರದಾಯದ ನೆಲೆಯಲ್ಲಿಯೇ ಬದುಕುವ ಎಂದರು.
ಪಡುಬಿದ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೈಹಿಕ ಕಸರತ್ತು, ಆಹಾರ ಪದ್ಧತಿಯ ಮೂಲಕ ನಮ್ಮ ಜೀವನವನ್ನು ಸರಿಯಾದ ರೀತಿಯಲ್ಲಿರೂಪಿಸುವ ಅನಿವಾರ್ಯತೆಯಿದೆ. ಬದಲಿಸಬಹುದು. ಜಂಕ್ ಫುಡ್ ನ್ನು ತ್ಯಜಿಸಿ ದೇಸಿ ಆಹಾರವನ್ನು ಸೇವಿಸಲು ಆಟಿ ತಿಂಗಳು ಪ್ರೇರಣೆಯಾಗಬೇಕು ಎಂದರು.
ಸನ್ಮಾನ : ಕೃಷಿ ವೃತ್ತಿಯನ್ನೇ ಹಿರಿಯರಾದ ಬದುಕಾಗಿಸಿದ ಮೀನಾಕ್ಷಿ ಪೂಜಾರ್ತಿ ಮತ್ತು ಕಮಲಾ ಪೂಜಾರ್ತಿ ಹಾಗೂ ಜಾನಪದ ಚಿಂತಕ ಪಿ.ಕೆ ಸದಾನಂದ ಇವರನ್ನುಸನ್ಮಾನಿಸಲಾಯಿತು.ಸುಗಂಧಿ ಶ್ಯಾಮ್ ಆಟಿಯ ಕುರಿತು ಕವನ ವಾಚಿಸಿದರು.ಕಾರ್ಯದರ್ಶಿ ಬಿಲ್ಲವ ಸಂಘದ ಲಕ್ಷ್ಮಣ ಡಿ ಪೂಜಾರಿ, ಕೋಶಾಧಿಕಾರಿ ಅಶೋಕ್ ಪೂಜಾರಿ, ನಾರಾಯಣಗುರು ಮಹಿಳಾ ವಿಭಾಗದ ಅಧ್ಯಕ್ಷರಾದ ಸುಜಾತ ಹರೀಶ್, ಕಾರ್ಯದರ್ಶಿ ನೀತಾ ಗುರುರಾಜ್ ಉಪಸ್ಥಿತರಿದ್ದರು.
ಸುಗಂಧಿ ಶ್ಯಾಮ್ ಪ್ರಾರ್ಥಿಸಿದರು. ಸುಜಾತ ಹರೀಶ್ ಚಿತ್ರಾಕ್ಷಿ ಕೋಟ್ಯಾನ್ ಪರಿಚಯಿಸಿದರು. ಸ್ವಾಗತಿಸಿದರು. ಅತಿಥಿಗಳನ್ನು ರವಿರಾಜ್ ಕೋಟ್ಯಾನ್ ಮತ್ತು ಯಶೋದ ನಿರೂಪಿಸಿದರು. ನೀತಾ ಗುರುರಾಜ್ ವಂದಿಸಿದರು.ಕಾರ್ಯಕ್ರಮದ ಬಳಿಕ ಸುಮಾರು 20 ಕ್ಕೂ ಅಧಿಕ ಬಗೆಯ ಆಟಿ ವಿಶೇಷ ತಿನಿಸುಗಳನ್ನು ಉಣಬಡಿಸಲಾಯಿತು.
