September 4, 2026
Uncategorizedಆರೋಗ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮವಿಜ್ಞಾನ/ತಂತ್ರಜ್ಞಾನಸಾಮಾಜಿಕ/ಇತಿಹಾಸ

ಗರ್ಭಿಣಿಯನ್ನು ಕೈಬಿಟ್ಟ ಖಾಸಗಿ ಆಸ್ಪತ್ರೆ ಲೇಡಿಗೋಷನ್‌ನಲ್ಲಿ ಪುನರ್‌ಜೀವ!

ವರದಿ /ಚಿತ್ರ :ದಿತೇಶ್ ಮಂಗಳೂರು

ಮಂಗಳೂರು: ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ ಖಾಸಗಿ ಆಸ್ಪತ್ರೆಯಿಂದ ಕೈಬಿಡಲಾದ ಗರ್ಭಿಣಿ ಯೊಬ್ಬರನ್ನು ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆಯ ವೈದ್ಯರ ತಂಡ ಪುನರ್ಜೀವ ನೀಡಿದ ಪ್ರಕರಣವೊಂದು ನಡೆದಿದೆ.

ಪ್ರಕರಣದ ಹಿನ್ನೆಲೆ : ಮೂರು ದಿನ ಗಳ ಹಿಂದೆ ತೀವ್ರ ಹೊಟ್ಟೆ ನೋವಿ ನಿಂದ ಬಳಲುತ್ತಿದ್ದ ಬೆಳ್ತಂಗಡಿ ತಾಲೂ ಕಿನ ಗ್ರಾಮೀಣ ಪ್ರದೇಶದ ಏಳು ತಿಂಗಳ ಗರ್ಭಿಣಿಯೊಬ್ಬರು ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಗರ್ಭಿಣಿ ಎದುರಿ ಸುತ್ತಿದ್ದ ಅಸಹಜ ಮತ್ತು ಆಕಾಲಿಕ ವೇದನೆಯ ಗಂಭೀರತೆಯನ್ನರಿತ ಖಾಸಗಿ ಆಸ್ಪತ್ರೆಯವರು ಅಸಹಾ ಯಕತೆ ವ್ಯಕ್ತಪಡಿಸಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕಳುಹಿಸಿ ದ್ದರು.ಲೇಡಿಗೋಷನ್ ಆಸ್ಪತ್ರೆಯ ವೈದ್ಯರು ವಿವಿಧ ಪರೀಕ್ಷೆಗಳ ನ್ನೊಪಡಿಸಿದಾಗ ಉದರದಲ್ಲಿ ರಕ್ತಸ್ರಾವ ವಾಗಿರುವುದು ಕಂಡುಬಂದಿದೆ.

ಈ ನಡುವೆಯೇ ಗರ್ಭಿಣಿಯ ಹಿಮೋ ಗ್ಲೋಬಿನ್ ಅಂತ ಆರು ಗ್ರಾಂಗೆ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ರಕ್ತದಲ್ಲಿ ಆಮ್ಲಜ ನಕದ ಮಟ್ಟವೂ ತೀವ್ರವಾಗಿ ಕುಸಿಯಲಾರಂಭಿಸಿತ್ತು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಮಹಿಳೆಯನ್ನು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ದು ಎಂ.ಆರ್.ಐ ಸ್ಕ್ಯಾನ್ ಮಾಡಿಸಿದಾಗ ಮಾಡಿಸಿದಾಗಿತುರ್ತು ಶಸ್ತ್ರಚಿಕಿತ್ಸೆಯ ಅವಶ್ಯಕತೆಯ ರುವುದು ಕಂಡುಬಂತು.

ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಐಸಿಯು ಸೌಲಭ್ಯದ ಅಗತ್ಯವಿತ್ತಾದರೂ ವೆಸ್ಲಾಕ್ ಆಸ್ಪತ್ರೆ ಯಲ್ಲಿ ಐಸಿಯು ಬೆಡ್ ಇರಲಿಲ್ಲ.ಆದರೂ ಚಿಕಿತ್ಸೆ ಮುಂದುವರಿಸಿದ ಲೇಡಿಗೋಷನ್ ಆಸ್ಪತ್ರೆಯ ವೈದ್ಯರ ತಂಡ, ತೀವ್ರ ತಪಾಸಣೆ ನಡೆಸಿದಾಗ ಈ ಹಿಂದೆ ಸಿಸೇರಿಯನ್ ಹೆರಿಗೆ ಸಂದರ್ಭದಲ್ಲಿನ ಹಳೆಯ ಗಾಯದ ಭಾಗ ಒಡೆದು ರಕ್ತಸ್ರಾವ ಆಗುತ್ತಿರುವುದು ಪತ್ತೆ ಯಾಗಿದೆ. ಇವರೊಂದಿಗೆ ಉದರದಲ್ಲಿ ಬೆಳೆಯುತ್ತಿರುವ ಗರ್ಭದ ಮಾಸು, ಪ್ಲಾಸೆಂಟಾ ಪರ್ಕಿಟಾ ಅನ್ನುವ ಗಂಡಾಂತರಕಾರಿ ಸಮಸ್ಯೆಯೂ ಎದು ರಾಗಿದೆ.

ಪ್ಲಾಸೆಂಟಾದ ಈ ಸ್ಥಿತಿಯಲ್ಲಿ ಶಿಶು ಹೊರಗೆ ಬರುವ ದಾರಿಗೆ ಅಡ್ಡ ಲಾಗಿರುವುದು ಮಾತ್ರವಲ್ಲದೆ ಅದಕ್ಕೆಸಂಬಂಧಿಸಿದ ರಕ್ತನಾಳಗಳು ಗರ್ಭಾ ಶಯವನ್ನು ಮೀರಿ ಹೊರಬಂದು ಮೂತ್ರಕೋಶವನ್ನು ಆಕ್ರಮಿಸಿತ್ತು. ಇದು ತೀರಾ ಕ್ಲಿಷ್ಟಕರವಾದ ಆರೋಗ್ಯ ಸ್ಥಿತಿಯಾಗಿದ್ದು, ವೈದ್ಯಕೀಯ ಜಗತ್ತಿಗೆ ಸವಾಲಾಗಿ ಪರಿಣಮಿಸಿತ್ತು.ಇಂತಹ ಸಂದಿಗ್ಧ ಸನ್ನಿವೇಶವನ್ನು ಎದುರಿಸಲು ವೈದ್ಯಕೀಯ ಅಧೀಕ್ಷಕ ಅವರ ನಿರ್ದೇಶನದಲ್ಲಿ ಕಳೆದ ಒಂದೂ ವರೆ ವರ್ಷದಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಪಾಲಿಸುತ್ತಿರುವ ಮಲ್ಟಿ ಡಿಸಿಪ್ಲಿನರಿ ಅಪ್ರೋಚ್’ ಮಾದರಿ ಸಹಾಯಕ್ಕೆ ಬಂತು.

ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ. ಆರ್.ಮೇಲುಸ್ತುವಾರಿಯಲ್ಲಿ ವೈದ್ಯಾದಿ ಕಾರಿ ಡಾ.ಜಗದೀಶ್ ಹಾಗೂ ಹಿರಿಯ ಪ್ರಸೂತಿ ತಜ್ಞ ಡಾ.ದಯಾನಂದ್ ಸಹ ಕಾರದಲ್ಲಿ ಕೆಎಂಸಿ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ.ಭಾರತಿ ಹಾಗೂ ಡಾ. ವಿನೀತಾ ಶೆಟ್ಟಿ, ಮೂತ್ರರೋಗ ತಜ್ಞ ಶಸ್ತ್ರಚಿಕಿತ್ಸಕರಾದ ಡಾ.ಸದಾನಂದ ಪೂಜಾರಿ ಮತ್ತು ಡಾ. ಪ್ರಮೋದ್, ತಜ್ಞರಾದ ಡಾ.ರಂಜನ್ ಹಾಗೂ ಡಾಲಕ್ಷಿತಾ, ಜಿತ್ತೂಪತ ತಂಡದ ಸದ ಸ್ವವಾದ ಜಲಜಾ, ಆಶ್ವಿನಿ, ವಿನೀತಾ, ರೇವು, ಸಿಂಧೂ ನಾಲ್ಕು ಶಸ್ತ್ರಚಿಕಿತ್ಸೆ ನಡೆಸಿ ಗರ್ಭಿಣಿಗೆ ಮರುಜೀವ ನೀಡಿ ದ್ದಾರೆಂದು ಲೇಡಿಗೋ ಷನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಎಂ.ಆರ್ತಿ ಳಿಸಿದ್ದಾರೆ.

Related posts

ಉಡುಪಿ; ಕೃಷ್ಣನ ನಾಡಲ್ಲಿ ಅಷ್ಟಮಿ ಸಿದ್ದತೆ, ವಿಟ್ಲಪಿಂಡಿ ಸಂಭ್ರಮ ಅಬ್ಬರಿಸಲಿದ್ದಾರೆ ಹುಲಿ ವೇಷಧಾರಿಗಳು, ಮೊಸರು ಕುಡಿಕೆ ;

Voiceoftulunadu

ಆಗಸ್ಟ್ 10ರಂದು ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಹಬ್ಬದ ಆಚರಣೆ;

Voiceoftulunadu

ಮೋದಿ ಸರ್ಕಾರದಿಂದ ಕಠಿಣ ಕಾನೂನು – ಪ್ರಶ್ನೆಪತ್ರಿಕೆ ಲೀಕಾಸುರರಿಗೆ 10 ವರ್ಷ ಜೈಲು, 10 ಕೋಟಿವರೆಗೆ ದಂಡ;

Voiceoftulunadu

Leave a Comment