28.5 C
ಮಂಗಳೂರು
September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಕಾಪು ತಾಲೂಕಿನಾದ್ಯಂತ ಸೌಹಾರ್ದಯುತ ಈದ್ ಮಿಲಾದ್ ಆಚರಣೆ :ಮಕ್ಕಳ ದಫ್ ಪ್ರದರ್ಶನ, ಪ್ರವಾದಿ ಮೊಹಮ್ಮದ್ ಅವರ ಸಂದೇಶ ಸಾರುವ ಹಾಡು, ವಾಹನ ಜಾಥಾದ ಮೆರಗು ;

ವರದಿ/ ಚಿತ್ರ: ಈ ಮೀಡಿಯಾ

ಕಾಪು: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನು ಕಾಪು ತಾಲೂಕಿನಾದ್ಯಂತ ಧಾರ್ಮಿಕ ಶ್ರದ್ಧಾಭಕ್ತಿ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಆಚರಿಸಲಾಯಿತು.ಈ ಪ್ರಯುಕ್ತ ಕಂಚಿನಡ್ಕ ಜುಮಾ ಮಸೀದಿಯಿಂದ ಆರಂಭಗೊಂಡಿತು. ಮೆರವಣಿಗೆ ಮಕ್ಕಳ ದಫ್ ಪ್ರದರ್ಶನ ಹಾಗೂ ಪ್ರವಾದಿ ಮೊಹಮ್ಮದ್ ಅವರ ಸಂದೇಶ ಸಾರುವ ಹಾಡುಗಳೊಂದಿಗೆ ಮೆರವಣಿಗೆ ಸಾಗಿತು.

ಸೌಟ್ಸ್ ತಂಡದ ಪಥಸಂಚಲನ ಹಾಗೂ ವಾಹನ ಜಾಥಾ ಕೂಡ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.ಹೊರಟ ಮೆರವಣಿಗೆ ಕಂಚಿನಡ್ಕ ಜುಮಾ ಮಸೀದಿಯಿಂದ ಪಡುಬಿದ್ರಿ ಮಸೀದಿವರೆಗೆ ಸಾಗಿತು. ಜುಮಾವಿವಿಧ ಸಮುದಾಯಗಳ ನಡುವೆ ಪ್ರೀತಿ, ಸಹಬಾಳ್ವೆ, ಸ್ನೇಹ ಹಾಗೂ ಸೌಹಾರ್ದತೆಯ ಸಂದೇಶ ಸಾರಿದ ಈ ಆಚರಣೆ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಡುಬಿದ್ರಿ ಜುಮಾ ಮಸೀದಿಯ ಖತೀಬರಾದ ಝನುದ್ದೀನ್ ಸಖಾಫಿ ಸುರೈಜಿ, “ಪ್ರವಾದಿ ಮೊಹಮ್ಮದ್ ಅವರ ಸಂದೇಶದಂತೆ ಸರ್ವ ಜನಾಂಗದವರೂ ಪ್ರೀತಿ, ವಿಶ್ವಾಸ, ಸ್ನೇಹ ಹಾಗೂ ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸಬೇಕು ఎంబ ಆಶಯದೊಂದಿಗೆ ಈದ್ ಮಿಲಾದ್ ಆಚರಿಸುತ್ತಿದ್ದೇವೆ” ಎಂದರು.

ಭಾರತವು ಸರ್ವ ಧರ್ಮೀಯರು ತಮ್ಮ ಧಾರ್ಮಿಕ ಆಚರಣೆಗಳನ್ನು ಸ್ವಾತಂತ್ರ್ಯದಿಂದ ನಡೆಸಿಕೊಂಡು ಸುಂದರ ಜೀವನ ನಡೆಸಲು ಅವಕಾಶ ಕಲ್ಪಿಸಿರುವ ಪವಿತ್ರ ಭೂಮಿಯಾಗಿದೆ. ದೇಶದಸೌಹಾರ್ದತೆ ಮತ್ತು ಸಹಬಾಳ್ವೆಯ ಪರಂಪರೆ ಮತ್ತಷ್ಟು ಬಲಗೊಳ್ಳಬೇಕು ಎಂದು ಅವರು ಆಶಿಸಿದರು.

ಈ ಸಂದರ್ಭದಲ್ಲಿ ಪಡುಬಿದ್ರಿ ಜುಮಾ ಮಸೀದಿ ಅಧ್ಯಕ್ಷ ಮೊಹಿದ್ದೀನ್ ಲಚ್ಚಿಲ್, ಕಂಚಿನಡ್ಕ ಮಸೀದಿ ಖತೀಬ್ ಅಬ್ದುಲ್ ಲತೀಫ್ ಮದನಿ, ನೂರಾನಿ ಮಸೀದಿ ಖತೀಬ್ ಮೌಲಾನ ಖುದ್ದುಸ್, ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮೊಹಮ್ಮದ್ ಶಾಫಿ, ಮೊಹಮ್ಮದ್ ನಿಯಾಝ್, ರಮೀಜ್ ಹುಸೇನ್, ಹಸನ್ ಭಾವ ಕಂಚಿನಡ್ಕ, ಅಬ್ದುಲ್ ಅಸಿಸ್, ಫಿರೋಜ್ ಹಾಗೂ ಎ.ಕೆ. ಸೈಯದ್ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related posts

ಉಡುಪಿ, ಆ. 1: ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ : ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ ಸ್ಥಳದಲ್ಲೇ ಮೃತ್ಯು ;

Voiceoftulunadu

ಮೋಡಗಳು ಕಾಣದಿದ್ದರೆ ಕೇವಲ ಮಳೆಯಷ್ಟೇ ಮರೆಯಾಗುವುದಿಲ್ಲ-ದಿವಾಕರ್ ಶೆಟ್ಟಿ ಅಡ್ಯಾರ್

Voiceoftulunadu

ಕನ್ನಡ ಸೇವಾ ಸಂಘ ಪಾವಾಯಿ ವತಿಯಿಂದ ಪಸ್ಪೋಲಿ ಮುನ್ಸಿಪಲ್ ಕನ್ನಡ ಶಾಲೆಯ ರಜತ ಮಹೋತ್ಸವ ಸಂಭ್ರಮಾಚರಣೆ;

Voiceoftulunadu

Leave a Comment