September 4, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕರಾಜ್ಯ/ದೇಶಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಉಡುಪಿ; ಕೃಷ್ಣನ ನಾಡಲ್ಲಿ ಅಷ್ಟಮಿ ಸಿದ್ದತೆ, ವಿಟ್ಲಪಿಂಡಿ ಸಂಭ್ರಮ ಅಬ್ಬರಿಸಲಿದ್ದಾರೆ ಹುಲಿ ವೇಷಧಾರಿಗಳು, ಮೊಸರು ಕುಡಿಕೆ ;

ವರದಿ/ ಚಿತ್ರ :ಈ ಮೀಡಿಯಾ

ಉಡುಪಿ:ಪೊಡವಿಗೊಡೆಯನ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆ.5ರಂದು ಶ್ರೀಕೃಷ್ಣ ಲೀಲೋತ್ಸವ (విట్ల ಅದ್ದೂರಿಯಾಗಿ ನಡೆಯಲಿದೆ.ಮೊಸರು ಕುಡಿಕೆ, ಹುಲಿವೇಷಧಾರಿಗಳ ಅಬ್ಬರ, ಜನಪದ ಕಲಾ ತಂಡಗಳು ಉಡುಪಿಯಲ್ಲಿ ಮೇಲೈಸಲಿದ್ದು, ಸೊಬಗನ್ನು ಭಕ್ತಾದಿಗಳು ಆಗಮಿಸಲಿದ್ದಾರೆ.

ಈ ಕಣ್ಣುಂಬಿಕೊಳ್ಳಲು ಉಡುಪಿಗೆಉಡುಪಿಯಲ್ಲಿ ಅಷ್ಟಮಿ ಆಚರಣೆ ಭಿನ್ನ. ಮೊಸರು ಕುಡಿಕೆ ಉತ್ಸವಕ್ಕಾಗಿ ರಥಬೀದಿಯಲ್ಲಿ ತ್ರಿಕೋನಾ ಕೃತಿಯ ಗುರ್ಜಿಗಳನ್ನು ಅಳವಡಿಸಲಾಗುತ್ತದೆ. ನಾನಾ ಕಡೆಗಳಲ್ಲಿ ಹುಲಿವೇಷಧಾರಿಗಳ ಅಬ್ಬರವೂ ನಗರದ ಜೋರಾಗಿರಲಿದೆ..ಇಲ್ಲಿಯ ವಿಶೇಷ ಮೊಸರು ಕುಡಿಕೆಉತ್ಸವ:ಕೃಷ್ಣ ಮಠದ ಸುತ್ತಲೂ ಪ್ರತಿ ಗುರ್ಜಿಗಳಲ್ಲೂ ತಲಾ ಮೂರು ಕುಡಿಕೆ ಇರಿಸಲಾಗುತ್ತಿದ್ದು, ಕುಡಿಕೆಗಳಲ್ಲಿ ಮೊಸರು, ಅರಳಿನ ಹುಡಿ, ಅರಿಶಿನ-ಕುಂಕುಮ ಸಹಿತ ಬಣ್ಣಗಳ ನೀರನ್ನು ತುಂಬಿಸಿ ಎತ್ತರದಲ್ಲಿ ಕಟ್ಟಲಾಗುತ್ತದೆ.

ವಿಟ್ಲ ಹಿಂಡಿ ರಥೋತ್ಸವದ ವೇಳೆ ಶ್ರೀಕೃಷ್ಣ ಮಠದಲ್ಲಿ ಗೋವುಗಳ ಆರೈಕೆ ಮಾಡುವಗೋಪಾಲಕರು ಗೊಲ್ಲರ ವೇಷ ಧರಿಸಿ ಮೊಸರು ಕುಡಿಕೆ ಒಡೆಯುತ್ತಾರೆ.ದೊಡ್ಡ ಕುಡಿಕೆಯಲ್ಲಿ ಅರಳಿನ ಹುಡಿ ಮತ್ತು ತೆಂಗಿನ ಕಾಯಿ ಇಡಲಾಗುತ್ತದೆ. ದೊಡ್ಡ ಮಡಕೆಗಳನ್ನು ಒಳಗೊಂಡ ಒಟ್ಟು 47 ಮಣ್ಣಿನ ಕುಡಿಕೆಗಳನ್ನು ಕಲಾತ್ಮಕವಾಗಿ ಚಿತ್ರಿಸಲಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಥಬೀದಿ ಸುತ್ತ ಗುರ್ಜಿ ಅಳವಡಿಸುವ ಕಾರ್ಯ ನಡೆಯುತ್ತಿದೆ.ವಿಟ್ಲ ಪಿಂಡಿ ಉತ್ಸವದಲ್ಲಿ ಮೊಸರು ಕುಡಿಕೆ ಒಡೆ ಒಡೆಯುವುದು ಪ್ರಮುಖ ಆಕರ್ಷಣೆ.

ರಥಬೀದಿಯಲ್ಲಿ ಈ ಸಂಭ್ರಮಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಮರದ ತ್ರಿಕೋನಾಕೃತಿಯ 13 ಗುರ್ಜಿಗಳನ್ನು ನಿರ್ಮಿಸಲಾಗಿದೆ. ರಥಬೀದಿ, ತೆಂಕಪೇಟೆ ಮತ್ತು ಕನಕ ಗೋಪುರದ ಮುಂಭಾಗ ಎರಡು ದಿಕ್ಕಿನಲ್ಲಿ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ. ಅಷ್ಟ ಮಠಕ್ಕೆ ಸಂಬಂಧಿಸಿದ, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ 2 ಸೇರಿ ಗುರ್ಜಿಗಳು, 2 ಮಂಟಪ ಗುರ್ಜಿಗಳು ಒಟ್ಟು 13 ಗುರ್ಜಿಗಳನ್ನು ಹಾಕಲಾಗಿದೆ.ಈ ಬಾರಿಯ ವಿಶೇಷ ಮಲ್ಲಯುದ್ಧ:ಶ್ರೀಕೃಷ್ಣ ಜನ್ಮಾಷ್ಟಮಿಯ ಮರುದಿನ ಸೆ.5 ರಂದು ವಿಟ್ಲ ಹಿಂಡಿ- ಶ್ರೀಕೃಷ್ಣ ಲೀಲೋತ್ಸವ ನಡೆಯಲಿದ್ದು, ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಯಯ ಮೂರ್ತಿಯ ರಥೋತ್ಸವ ಜರುಗಲಿದೆ.

ಮೆರವಣಿಗೆಯ ಶಿರೂರು ಮಠದ ವಿಶೇಷವಾಗಿ ಕಲಾತಂಡಗಳ ಪರ್ಯಾಯ ಮುಂಭಾಗದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಆಹ್ವಾನಿತ ಮಲ್ಲಯುದ್ದ ಪ್ರವೀಣರಿಂದ ಮಲ್ಲಯುದ್ಧ ಪ್ರದರ್ಶನ ನಡೆಯಲಿದೆ.ಹುಲಿ ವೇಷಕ್ಕೆ ನೋಟಿನ ಮಾಲೆ:ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ದಿನದಂದು ರಾಜಾಂಗಣದಲ್ಲಿ ಹುಲಿವೇಷ ಕುಣಿತ ಸ್ಪರ್ಧೆ ನಡೆಯಲಿದೆ. ಮಠದ ವತಿಯಿಂದ ಪ್ರತಿ ಹುಲಿವೇಷಧಾರಿಗಳಿಗೆ ತಲಾ 500 ರೂ. ಮಾಲೆ ಹಾಗೂ ಸಂಭಾವನೆ ನೀಡಲಾಗುತ್ತಿದೆ.

ಇದಕ್ಕಾಗಿ 100 . 50 . 20 ., 10 ರೂ.ಗಳ ಈಗಾಗಲೇ 20ಕ್ಕೂ ಅಧಿಕ ಹುಲಿವೇಷ ತಂಡಗಳು ಒಂದು ಸಾವಿರ ಮಾಲೆ ತಯಾರಿಸಲಾಗುತ್ತದೆ.ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಕಳೆದೊಂದು ತಿಂಗಳಿನಿಂದ ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಂಸ್ಕೃತಿಕ ಕಲರವ ಸೃಷ್ಟಿಸಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಭಕ್ತರು, ಮಠದ ಸಿಬ್ಬಂದಿಗೆ ವಿವಿಧ ಸ್ಪರ್ಧೆಗಳು ನಡೆದಿವೆ. ಹುಲಿವೇಷ ಸ್ಪರ್ಧೆಗೆ ಲಕ್ಷಾಂತರ ರೂ. ಮೌಲ್ಯದ ಬಹುಮಾನ ನಿಗದಿ ಮಾಡಿದ್ದಾರೆ.ಮೊಸರು ಕುಡಿಕೆ, ಜನಪದ ಜತೆಗೆ

Related posts

ಪುಣೆಯಲ್ಲಿ ‘ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ(ರಿ.) ಇದರ 10 ನೇ ವಾರ್ಷಿಕೋತ್ಸವ : ಯಕ್ಷ ದಶ ಸಂಭ್ರಮ -2026, ಇದರ ಪ್ರಯುಕ್ತ “ರಾಣಿ ಶಶಿಪ್ರಭೆ” ಮತ್ತು “ಶ್ರೀದೇವಿ ಕದಂಬ ಕೌಶಿಕೆ” ಯಕ್ಷಗಾನ ಪ್ರದರ್ಶನ;

Voiceoftulunadu

ಸಮಾಜದ ಬೆಳವಣಿಗೆಗೆ ಪತ್ರಕರ್ತರ ಪಾತ್ರವಿದೆ : ಹರಿಕೃಷ್ಣ ಪುನರೂರು;

Voiceoftulunadu

ಮಂಗಳೂರಿನ ಪಾಲ್ದನೆ ಚರ್ಚ್ ನಲ್ಲಿ ವಾರ್ಷಿಕ (ಒಳಾಂಗಣ ಕ್ರೀಡಾ) ಇಂಡೋರ್ ಗೇಮ್ ದಿನಾಚರಣೆ;

Voiceoftulunadu

Leave a Comment