November 5, 2026
Uncategorizedಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬೆಳಪು ನಿರ್ಮಾಣ ಹಂತದ ಸ್ನಾತಕೋತ್ತರ ಕೇಂದ್ರಕ್ಕೆ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವ‌ರ್ ಭೇಟಿ : ಶೇ. 80 ಕಾಮಗಾರಿ ಮುಗಿದಿದ್ದು, 20 ಶೇ. ಕಾಮಗಾರಿ ಬಾಕಿ ಉಳಿದಿದೆ ;

ವರದಿ/ ಚಿತ್ರ :ಈ ಮೀಡಿಯಾ

ಬೆಳಪು : ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ನಾತಕೋತ್ತರ ಕೇಂದ್ರಕ್ಕೆ ಉಪ ಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಭೇಟಿ ನೀಡಿದರು.

ಸ್ನಾತಕೋತ್ತರ ಕೇಂದ್ರದ ಶೇ.80 ಕಾಮಗಾರಿ ಮುಗಿದಿದ್ದು, ಅನುದಾನಕೊರತೆಯಿಂದ 20 ಶೇಖಡಾ ಕಾಮಗಾರಿ ಬಾಕಿ ಇರುವುದರಿಂದ ಬಾಕಿ ಅನುದಾನವನ್ನು ಶೀಘ್ರವಾಗಿ ಮಂಜೂರು ಗೊಳಿಸುವುದರ ಜೊತೆಗೆ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರೀಡಾ ವಿದ್ಯಾಲಯ ಆರಂಭಿಸುವಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಸ್ತಾಪಿಸಿದರು.

ಈ ಸಂದರ್ಭ ವಿಧಾನ ಪರಿಷತ್ಸದಸ್ಯ ಮಂಜುನಾಥ ಭಂಡಾರಿ, ಬೆಳಪು ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಳೆಬೈಲು, ವಿಶ್ವಾಸ್ ವಿ ಅಮೀನ್, ನವೀನ್ ಎನ್ ಶೆಟ್ಟಿ, ಹರೀಶ್ ನಾಯ್ಕ ಮತ್ತು ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Related posts

ಅದಾನಿಯಿಂದ ಪಲಿಮಾರು ಗ್ರಾ. ಪಂ. ವ್ಯಾಪ್ತಿಯಲ್ಲಿ ರೂ. 20ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಭೂಮಿ ಪೂಜೆ : ಭೂಮಿ ಪೂಜೆ ನೆರವೇರಿಸಿದ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋ‌ರ್ ಆಳ್ವ ;

Voiceoftulunadu

ವಿಶ್ವಾದ್ಯಂತ ಭುಗಿಲೆದ್ದ ಪ್ರತಿಭಟನೆಗಳು; ಸರ್ಕಾರಗಳ ವಿರುದ್ಧ ಜನಾಕ್ರೋಶ ;

Voiceoftulunadu

ಯುವವಾಹಿನಿ ಯುವ ಸಮಾಜದ ಧ್ವನಿಯಾಗಲಿ : ಸತೀಶ್ ಅಂಚನ್ ಮೂಲ್ಕಿ

voiceoftulunadu

Leave a Comment