November 5, 2026
Uncategorizedಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಂಟ್ವಾಳ :ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ ಪ್ರತಿನಿಧಿಗಳ ಬೇಡಿಕೆ ಕೇಂದ್ರ ಸಚಿವರಿಗೆ ಸಲ್ಲಿಕೆ : ಲೋಕೇಶ್ ಶೆಟ್ಟಿ;

ವರದಿ / ಚಿತ್ರ: ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ :ಕಳೆದ 70 ವರ್ಷಗಳ ಅವಧಿಯಲ್ಲಿ ದೇಶದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿರುವ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ಹಲವಾರು ಬದಲಾವಣೆಗಳಿಗೆ ನಾಂದಿಯಾಗಿದೆ. ಈ ಸಂಸ್ಥೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿರುವ ವಿಮಾ ಪ್ರತಿನಿಧಿಗಳ ಹಲವು ಬೇಡಿಕೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಲಾಗಿದೆ ಎಂದು ಅಖಿಲ ಭಾರತ ಜೀವ ವಿಮಾ ನಿಗಮ ಪ್ರತಿನಿಧಿಗಳ ದಕ್ಷಿಣ ಮಧ್ಯ ವಲಯ ಉಪಾಧ್ಯಕ್ಷ ಎ.ಎಸ್.ಲೋಕೇಶ್ ಶೆಟ್ಟಿ ಧರ್ಮಸ್ಥಳ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡಿನಲ್ಲಿ ಅಖಿಲ ಭಾರತ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘಟನೆ ವತಿಯಿಂದ ಮಂಗಳವಾರ ನಡೆದ ಬಂಟ್ವಾಳ ಘಟಕದ ವಾರ್ಷಿಕ ಮಹಾಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಸಂಘದ ಅಧ್ಯಕ್ಷ ಚಿತ್ತರಂಜನ್ ಎನ್. ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬಲಿಷ್ಟ ಸಂಘಟನೆಯಿಂದ ಮಾತ್ರ ಪ್ರತಿನಿಧಿಗಳು ವಿವಿಧ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿದೆ’ ಎಂದರು. ಸಂಘಟನೆಯ ಉಡುಪಿ ವಿಭಾಗ ಅಧ್ಯಕ್ಷ ಎಂ. ಎಸ್. ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಂಟ್ವಾಳ ಎಲ್ಲ್ಲೈಸಿ ಹಿರಿಯ ಶಾಖಾಧಿಕಾರಿ ಗುರುದತ್ತ್ ನಾಯಕ್ ಮತ್ತು ಉಪ ಶಾಖಾಧಿಕಾರಿ ಮುತ್ತಯ್ಯ ಮಾರಾಠಿ ವಿಮಾ ಕ್ಷೇತ್ರದ ಬೆಳವಣಿಗೆ ಮತ್ತು ಪಾಲಿಸಿದಾರರ ಸೇವೆ ಬಗ್ಗೆ ಮಾಹಿತಿ ನೀಡಿದರು.ಇದೇ ವೇಳೆ ಸಾಧಕ ಪ್ರತಿನಿಧಿಗಳು ಮತ್ತು ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.ಉಡುಪಿ ವಿಭಾಗ ಪ್ರಧಾನ ಕಾರ್ಯದರ್ಶಿ ದಯಾನಂದ ಶೆಟ್ಟಿ ಕೆ.ಪಿ., ರಾಜ್ಯ ಮಹಿಳಾ ವಿಭಾಗ ಉಪ ಸಂಚಾಲಕಿ ಭವಾನಿ, ಬಂಟ್ವಾಳ ಮಹಿಳಾ ಸಮಿತಿ ಅಧ್ಯಕ್ಷೆ ವಿಜಯ ಕುಮಾರಿ ಇಂದ್ರ ಮತ್ತಿತರರು ಇದ್ದರು.

ಸಂಘದ ಮಾಜಿ ಅಧ್ಯಕ್ಷ ರೋಹಿದಾಸ್ ಕುಂದರ್ ಸ್ವಾಗತಿಸಿ, ರಾಜಶ್ರೀ ಪರಾಡ್ಕರ್ ಪ್ರಾರ್ಥಿಸಿ. ಹಿರಿಯ ಪ್ರತಿನಿಧಿ ವಸಂತ ಪ್ರಭು ವಂದಿಸಿದರು.ಕಾರ್ಯದರ್ಶಿ ರಘುರಾಮ ಪೈ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ಚಂದ್ರಶೇಖರ ಲೆಕ್ಕಪತ್ರ ಮಂಡಿಸಿದರು

Related posts

ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿಯ5ನೇ ವರ್ಷದ ಸಂಭ್ರಮಾಚರಣೆ .

voiceoftulunadu

ಟೀಮ್ ಮಾರುತಿ ಮೂಳೂರು: ಐದನೇ ವರ್ಷದ ಪಿಲಿ ಪೆಜ್ಜೆ ಊದು ಸೇವೆ, ವಿದ್ಯಾರ್ಥಿವೇತನ, ಸನ್ಮಾನವಿದ್ಯಾರ್ಥಿ ಆಸರೆ : 2 ಲಕ್ಷ 35 ಸಾವಿರ ರೂ. ವಿದ್ಯಾರ್ಥಿ ವೇತನ ವಿತರಣೆ ;

Voiceoftulunadu

ಉಡುಪಿ: ಸಿಯಾರಾಮ್ಸ್ ಸಂಸ್ಥೆಯ ಯುವ ಫ್ಯಾಷನ್ ಬ್ರಾಂಡ್ ‘ಝೀಕೋಡ್’ ಮಳಿಗೆ ಪ್ರಾರಂಭ : ದೀಪಾವಳಿ ಹಬ್ಬದ ಪ್ರಯುಕ್ತ ಮಳಿಗೆಯಲ್ಲಿ ವಿಶೇಷ ರಿಯಾಯಿತಿ, ಆಕರ್ಷಕ ಕೊಡುಗೆ ;

Voiceoftulunadu

Leave a Comment