November 3, 2026
Uncategorizedಅಂತಾರಾಷ್ಟ್ರೀಯಕಲೆ/ಸಾಹಿತ್ಯಧಾರ್ಮಿಕ/ಸಾಂಸ್ಕೃತಿಕಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆ

ಯುಎಇಯಲ್ಲಿ ಸಂಭ್ರಮದಿಂದ ಜರುಗಿದ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ 12ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ;

ವರದಿ /ಚಿತ್ರ: ಸಂತೋಷ್ ಶೆಟ್ಟಿ ಪೊಳಲಿ

ಅಜ್ಮಾನ್ /ಯು.ಎ.ಇ : ಯುಎಇಯಲ್ಲಿ ಕನ್ನಡದ ಸಂಸ್ಕೃತಿ, ಸಂಪ್ರದಾಯ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ವತಿಯಿಂದ ಆಯೋಜಿಸಲಾದ 12ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಅಜ್ಮಾನ್‌ನ ಇಂಡಿಯನ್ ಅಸೋಸಿಯೇಷನ್ ಸಭಾಂಗಣದಲ್ಲಿ ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಅದ್ದೂರಿಯಾಗಿ ನೆರವೇರಿತು.

ಬೆಳಗ್ಗಿನಿಂದಲೇ ಗಣಹೋಮ ಮತ್ತು ಶ್ರೀಗಣೇಶನ ಪ್ರತಿಷ್ಠಾಪನೆ, ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಮೂರ್ತಿಗಳಾದ ಶ್ರೀ ಸಾಂತೂರು ಲಕ್ಷ್ಮೀಕಾಂತ್ ಭಟ್ ಹಾಗೂ ಶ್ರೀ ರಾಜೇಶ್ ಪ್ರಸಾದ್ ಅಡಿಗ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಣೇಶನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್, ಸಮಾಜಸೇವಕ ಶ್ರೀ ರವಿ ಕಟಪಾಡಿ, ಕರ್ನಾಟಕ ಸಂಘ ಅಬುಧಾಬಿಯ ಅಧ್ಯಕ್ಷ ಶ್ರೀ ಸರ್ವೋತ್ತಮ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ಅಧ್ಯಕ್ಷ ಶ್ರೀ ಮಹೇಶ್ ಚಂದ್ರಗಿರಿ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರ ನೇತೃತ್ವದಲ್ಲಿ ನಡೆದ ಗಣೇಶೋತ್ಸವದಲ್ಲಿ ಯುಎಇಯ ವಿವಿಧ ಭಾಗಗಳಿಂದ ಆಗಮಿಸಿದ ಕನ್ನಡಿಗರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮಗಣೇಶೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ಅಧ್ಯಕ್ಷ ಶ್ರೀ ಮಹೇಶ್ ಚಂದ್ರಗಿರಿ, ಮಾರ್ಗದೀಪ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಸಂಚಾಲಕರಾದ ಶ್ರೀ ಸುಗಂಧರಾಜ್ ಬೇಕಲ್ ಮತ್ತು ಅಜೀತ್ ಕೊರಕೊಡು ಉಪಾಧ್ಯಕ್ಷ ಶ್ರೀ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಶ್ರೀ ಸುನೀಲ್ ರಾವ್ ಹಾಗೂ ಕೋಶಾಧಿಕಾರಿ ಶ್ರೀ ರಾಜೇಶ್ ರಾವ್ ಮತ್ತು ಮಹಿಳಾ ಸಮಿತಿಯ ಸಂಚಾಲಕರಾದ ಶ್ರೀಮತಿ ಸ್ಮೀತಾ ಗಣೇಶ್ ಸೇರಿದಂತೆ ಸಮಿತಿಯ ಪ್ರಮುಖ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣ್ಯರ ಉಪಸ್ಥಿತಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಸ್ಮರಿಸಲಾಯಿತು.ಭಜನಾ ಕಾರ್ಯಕ್ರಮಗಳ ಮೂಲಕ ಭಕ್ತಿಯ ಸಿಂಚನಗಣೇಶೋತ್ಸವದ ಅಂಗವಾಗಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಓಂ ಶ್ರೀ ಭಜನಾ ವೃಂದ ಶಾರ್ಜಾ, ಶ್ರೀ ರಾಜರಾಜೇಶ್ವರಿ ಭಜನಾ ವೃಂದ ದುಬೈ, ನಾದ ಸಂಕೀರ್ತನ ಭಜನಾ ತಂಡ ಹಾಗೂ ಮಾರ್ಗದೀಪ ಶ್ರೀ ಗಣೇಶೋತ್ಸವ ಸಮಿತಿ ಭಕ್ತಿ ಗೀತೆಗಳು ಮತ್ತು ಭಜನೆಗಳನ್ನು ಪ್ರಸ್ತುತಪಡಿಸಿ ಸಭಾಂಗಣದಲ್ಲಿ ಭಕ್ತಿಮಯ ವಾತಾವರಣ ಮೂಡಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವದಿನವಿಡೀ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದವು.ರಂಗಸಾರಥಿ ಪ್ರತಿಷ್ಠಾನ ಯುಎಇ ವತಿಯಿಂದ ನಿರ್ದೇಶಕ ರಂಗಸಾರಥಿ ವಿಶ್ವನಾಥ ಶೆಟ್ಟಿ ಅವರ ನಿರ್ದೇಶನದಲ್ಲಿ ಹಾಗೂ ಶ್ರೀಮತಿ ರೂಪಾ ಕಿರಣ್ ಅವರ ನೃತ್ಯ ಸಂಯೋಜನೆಯಲ್ಲಿ “ಮುಂಡೇರ್ದಪ್ಪೆ ಉಳ್ಳಾಲ್ತಿ” ನೃತ್ಯ ರೂಪಕ ಪ್ರದರ್ಶನಗೊಂಡಿತು.ಸ್ಮೈಲ್ ಕ್ರಿಯೇಷನ್ ದುಬೈ ವತಿಯಿಂದ ಜಸ್ಮಿತಾ ವಿವೇಕ್ ಅವರ ನೃತ್ಯ ಸಂಯೋಜನೆ ಮತ್ತು ನಿರ್ದೇಶನದಲ್ಲಿ “ಗಣಪತಿ ಮಹಿಮೆ” ಹಾಗೂ “ಮಂದಾರ್ತಿ ಮಾತೆ” ನೃತ್ಯ ರೂಪಕಗಳು ಪ್ರೇಕ್ಷಕರ ಮನಸೆಳೆದವು.

ಸಂಸ್ಕೃತಿ ನೃತ್ಯ ಶಾಲೆ ವತಿಯಿಂದ ಶ್ರೀಮತಿ ಶಶಿರೇಖಾ ಅವರ ನಿರ್ದೇಶನ ಮತ್ತು ನೃತ್ಯ ಸಂಯೋಜನೆಯಲ್ಲಿ “ನೃತ್ಯ ವೈಭವ” ಕಾರ್ಯಕ್ರಮ ಪ್ರದರ್ಶನಗೊಂಡಿತು. ಇದರೊಂದಿಗೆ ವಾಗ್ದೇವಿ ಮ್ಯೂಸಿಕಲ್ ಸ್ಕೂಲ್ ಸೇರಿದಂತೆ ವಿವಿಧ ತಂಡಗಳ ಕಲಾವಿದರು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಎರಡು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆಗಣೇಶೋತ್ಸವದ ಅಂಗವಾಗಿ ಭಕ್ತರಿಗಾಗಿ ವಿಶೇಷ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಯುಎಇಯ ವಿವಿಧ ಭಾಗಗಳಿಂದ ಆಗಮಿಸಿದ್ದ ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನಡೆದ ಅನ್ನಸಂತರ್ಪಣೆಯು ಗಣೇಶೋತ್ಸವದ ಸೇವಾ ಮನೋಭಾವಕ್ಕೆ ಮತ್ತಷ್ಟು ಮೆರುಗು ನೀಡಿತು.

ಸಮಾಜಸೇವಕ ರವಿ ಕಟಪಾಡಿಯವರಿಗೆ ವಿ*ಯುಎಇಯಲ್ಲಿ ಸಂಭ್ರಮದಿಂದ ಜರುಗಿದ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ 12ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ*ಅಜ್ಮಾನ್, ಯುಎಇ, ಸೆಪ್ಟೆಂಬರ್ 20:ಯುಎಇಯಲ್ಲಿ ಕನ್ನಡದ ಸಂಸ್ಕೃತಿ, ಸಂಪ್ರದಾಯ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ವತಿಯಿಂದ ಆಯೋಜಿಸಲಾದ 12ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಅಜ್ಮಾನ್‌ನ ಇಂಡಿಯನ್ ಅಸೋಸಿಯೇಷನ್ ಸಭಾಂಗಣದಲ್ಲಿ ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಅದ್ದೂರಿಯಾಗಿ ನೆರವೇರಿತು.

ಬೆಳಗ್ಗಿನಿಂದಲೇ ಗಣಹೋಮ ಮತ್ತು ಶ್ರೀಗಣೇಶನ ಪ್ರತಿಷ್ಠಾಪನೆ, ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಮೂರ್ತಿಗಳಾದ ಶ್ರೀ ಸಾಂತೂರು ಲಕ್ಷ್ಮೀಕಾಂತ್ ಭಟ್ ಹಾಗೂ ಶ್ರೀ ರಾಜೇಶ್ ಪ್ರಸಾದ್ ಅಡಿಗ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಣೇಶನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್, ಸಮಾಜಸೇವಕ ಶ್ರೀ ರವಿ ಕಟಪಾಡಿ, ಕರ್ನಾಟಕ ಸಂಘ ಅಬುಧಾಬಿಯ ಅಧ್ಯಕ್ಷ ಶ್ರೀ ಸರ್ವೋತ್ತಮ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ಅಧ್ಯಕ್ಷ ಶ್ರೀ ಮಹೇಶ್ ಚಂದ್ರಗಿರಿ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರ ನೇತೃತ್ವದಲ್ಲಿ ನಡೆದ ಗಣೇಶೋತ್ಸವದಲ್ಲಿ ಯುಎಇಯ ವಿವಿಧ ಭಾಗಗಳಿಂದ ಆಗಮಿಸಿದ ಕನ್ನಡಿಗರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮಗಣೇಶೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ಅಧ್ಯಕ್ಷ ಶ್ರೀ ಮಹೇಶ್ ಚಂದ್ರಗಿರಿ, ಮಾರ್ಗದೀಪ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಸಂಚಾಲಕರಾದ ಶ್ರೀ ಸುಗಂಧರಾಜ್ ಬೇಕಲ್ ಮತ್ತು ಅಜೀತ್ ಕೊರಕೊಡು ಉಪಾಧ್ಯಕ್ಷ ಶ್ರೀ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಶ್ರೀ ಸುನೀಲ್ ರಾವ್ ಹಾಗೂ ಕೋಶಾಧಿಕಾರಿ ಶ್ರೀ ರಾಜೇಶ್ ರಾವ್ ಮತ್ತು ಮಹಿಳಾ ಸಮಿತಿಯ ಸಂಚಾಲಕರಾದ ಶ್ರೀಮತಿ ಸ್ಮೀತಾ ಗಣೇಶ್ ಸೇರಿದಂತೆ ಸಮಿತಿಯ ಪ್ರಮುಖ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣ್ಯರ ಉಪಸ್ಥಿತಿಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಸ್ಮರಿಸಲಾಯಿತು.ಭಜನಾ ಕಾರ್ಯಕ್ರಮಗಳ ಮೂಲಕ ಭಕ್ತಿಯ ಸಿಂಚನಗಣೇಶೋತ್ಸವದ ಅಂಗವಾಗಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಓಂ ಶ್ರೀ ಭಜನಾ ವೃಂದ ಶಾರ್ಜಾ, ಶ್ರೀ ರಾಜರಾಜೇಶ್ವರಿ ಭಜನಾ ವೃಂದ ದುಬೈ, ನಾದ ಸಂಕೀರ್ತನ ಭಜನಾ ತಂಡ ಹಾಗೂ ಮಾರ್ಗದೀಪ ಶ್ರೀ ಗಣೇಶೋತ್ಸವ ಸಮಿತಿ ಭಕ್ತಿ ಗೀತೆಗಳು ಮತ್ತು ಭಜನೆಗಳನ್ನು ಪ್ರಸ್ತುತಪಡಿಸಿ ಸಭಾಂಗಣದಲ್ಲಿ ಭಕ್ತಿಮಯ ವಾತಾವರಣ ಮೂಡಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವದಿನವಿಡೀ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದವು.ರಂಗಸಾರಥಿ ಪ್ರತಿಷ್ಠಾನ ಯುಎಇ ವತಿಯಿಂದ ನಿರ್ದೇಶಕ ರಂಗಸಾರಥಿ ವಿಶ್ವನಾಥ ಶೆಟ್ಟಿ ಅವರ ನಿರ್ದೇಶನದಲ್ಲಿ ಹಾಗೂ ಶ್ರೀಮತಿ ರೂಪಾ ಕಿರಣ್ ಅವರ ನೃತ್ಯ ಸಂಯೋಜನೆಯಲ್ಲಿ “ಮುಂಡೇರ್ದಪ್ಪೆ ಉಳ್ಳಾಲ್ತಿ” ನೃತ್ಯ ರೂಪಕ ಪ್ರದರ್ಶನಗೊಂಡಿತು.

ಸ್ಮೈಲ್ ಕ್ರಿಯೇಷನ್ ದುಬೈ ವತಿಯಿಂದ ಜಸ್ಮಿತಾ ವಿವೇಕ್ ಅವರ ನೃತ್ಯ ಸಂಯೋಜನೆ ಮತ್ತು ನಿರ್ದೇಶನದಲ್ಲಿ “ಗಣಪತಿ ಮಹಿಮೆ” ಹಾಗೂ “ಮಂದಾರ್ತಿ ಮಾತೆ” ನೃತ್ಯ ರೂಪಕಗಳು ಪ್ರೇಕ್ಷಕರ ಮನಸೆಳೆದವು.ಸಂಸ್ಕೃತಿ ನೃತ್ಯ ಶಾಲೆ ವತಿಯಿಂದ ಶ್ರೀಮತಿ ಶಶಿರೇಖಾ ಅವರ ನಿರ್ದೇಶನ ಮತ್ತು ನೃತ್ಯ ಸಂಯೋಜನೆಯಲ್ಲಿ “ನೃತ್ಯ ವೈಭವ” ಕಾರ್ಯಕ್ರಮ ಪ್ರದರ್ಶನಗೊಂಡಿತು.

ಇದರೊಂದಿಗೆ ವಾಗ್ದೇವಿ ಮ್ಯೂಸಿಕಲ್ ಸ್ಕೂಲ್ ಸೇರಿದಂತೆ ವಿವಿಧ ತಂಡಗಳ ಕಲಾವಿದರು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.ಎರಡು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆಗಣೇಶೋತ್ಸವದ ಅಂಗವಾಗಿ ಭಕ್ತರಿಗಾಗಿ ವಿಶೇಷ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಯುಎಇಯ ವಿವಿಧ ಭಾಗಗಳಿಂದ ಆಗಮಿಸಿದ್ದ ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನಡೆದ ಅನ್ನಸಂತರ್ಪಣೆಯು ಗಣೇಶೋತ್ಸವದ ಸೇವಾ ಮನೋಭಾವಕ್ಕೆ ಮತ್ತಷ್ಟು ಮೆರುಗು ನೀಡಿತು.ಸಮಾಜಸೇವಕ ರವಿ ಕಟಪಾಡಿಯವರಿಗೆ ವಿಶೇಷ ಸನ್ಮಾನತಮ್ಮ ವಿಶಿಷ್ಟ ವೇಷಧಾರಣೆಗಳ ಮೂಲಕ ಹಣ ಸಂಗ್ರಹಿಸಿ, ಅನಾರೋಗ್ಯಪೀಡಿತ ಹಾಗೂ ಸಂಕಷ್ಟದಲ್ಲಿರುವ ಮಕ್ಕಳ ಚಿಕಿತ್ಸೆಗೆ ನೆರವಾಗುವ ಮೂಲಕ ಮಾನವೀಯ ಸೇವೆಯಲ್ಲಿ ಗುರುತಿಸಿಕೊಂಡಿರುವ ಖ್ಯಾತ ಸಮಾಜ ಸೇವಕ ಶ್ರೀ ರವಿ ಕಟಪಾಡಿ ಅವರನ್ನು ಕಾರ್ಯಕ್ರಮದ ಪ್ರಮುಖ ಸನ್ಮಾನಿತರಾಗಿ ಸೇವಾ ದೀಪ ಬಿರುದು ನೀಡಿ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಅವರ ನಿಸ್ವಾರ್ಥ ಸಮಾಜಸೇವೆ ಹಾಗೂ ಮಾನವೀಯ ಕಳಕಳಿಯನ್ನು ಶ್ಲಾಘಿಸಿದ ಗಣ್ಯರು, ರವಿ ಕಟಪಾಡಿಯವರ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಾಧಕರಿಗೆ ಸನ್ಮಾನ – ಗೌರವಮಾರ್ಗದೀಪ ಸಾಂಸ್ಕೃತಿಕ ಸಮಿತಿಯು ಪ್ರತಿವರ್ಷದಂತೆ ಈ ಬಾರಿಯೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸಿತು.ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಬಿ. ಕೆ. ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಹಾಗೆಯೇ ಶ್ರೀ ಸಂತೋಷ್ ಶೆಟ್ಟಿ ಪೊಳಲಿ ರವರ ಸಾಮಾಜಿಕ ಸೇವೆ ಮತ್ತು ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು.ಇದರೊಂದಿಗೆ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಸಂಪ್ರದಾಯದಂತೆ ಪ್ರತಿವರ್ಷ ನೀಡಲಾಗುವ ದಂಪತಿ ಸನ್ಮಾನವನ್ನು ಈ ಬಾರಿ ಶ್ರೀ ರತ್ನಾಕರ ಶೇರಿಗಾರ್ ಮತ್ತು ಶ್ರೀಮತಿ ಪುಪ್ಪ ರತ್ನಾಕರ್ ಶೇರಿಗಾರ್ ದಂಪತಿಗೆ ನೀಡಿ ಗೌರವಿಸಲಾಯಿತು.

ಮರಳುನಾಡಿನಲ್ಲಿ ಕನ್ನಡ ಸಂಸ್ಕೃತಿ ಮತ್ತು ಭಕ್ತಿಯ ಸಂಗಮಉದ್ಯೋಗ ಮತ್ತು ಉದ್ಯಮದ ನಿಮಿತ್ತ ತಾಯ್ನಾಡಿನಿಂದ ಸಾವಿರಾರು ಮೈಲಿ ದೂರದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ನಾಡಿನ ಹಬ್ಬ-ಹರಿದಿನಗಳು, ಸಂಸ್ಕೃತಿ, ಸಂಪ್ರದಾಯ ಮತ್ತು ದೈವಭಕ್ತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಆಶಯದೊಂದಿಗೆ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಕಳೆದ 12 ವರ್ಷಗಳಿಂದ ಸಾರ್ವಜನಿಕ ಶ್ರೀಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದೆ.ಈ ಬಾರಿಯ ಗಣೇಶೋತ್ಸವವು ಧಾರ್ಮಿಕ ಆಚರಣೆ, ಭಜನೆ, ಸಂಗೀತ, ನೃತ್ಯ, ಸಮಾಜಸೇವೆ, ಅನ್ನಸಂತರ್ಪಣೆ ಹಾಗೂ ಕನ್ನಡಿಗರ ಒಗ್ಗಟ್ಟಿನ ಸುಂದರ ಸಂಗಮವಾಗಿ ಮೂಡಿಬಂದಿತು.

ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇಯ ಪದಾಧಿಕಾರಿಗಳು, ಸದಸ್ಯರು, ಸ್ವಯಂಸೇವಕರು, ಪ್ರಾಯೋಜಕರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ವಿಜೃಂಭಣೆಯ ಶೋಭಾಯಾತ್ರೆಯೊಂದಿಗೆ ಶ್ರೀಗಣೇಶ ವಿಸರ್ಜನೆದಿನವಿಡೀ ನಡೆದ ಧಾರ್ಮಿಕ, ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಸಂಜೆ ಶ್ರೀಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಭಕ್ತರ ಜಯಘೋಷ, ಭಜನೆ ಹಾಗೂ ಸಂಭ್ರಮದ ನಡುವೆ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು.ಭಕ್ತಿ, ಸಂಭ್ರಮ, ಸೇವೆ, ಸಾಂಸ್ಕೃತಿಕ ವೈಭವ ಮತ್ತು ಕನ್ನಡಿಗರ ಒಗ್ಗಟ್ಟಿಗೆ ಸಾಕ್ಷಿಯಾದ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇಯ 12ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸ್ಮರಣೀಯವಾಗಿ ಸಂಪನ್ನಗೊಂಡಿತುಶೇಷ ಸನ್ಮಾನತಮ್ಮ ವಿಶಿಷ್ಟ ವೇಷಧಾರಣೆಗಳ ಮೂಲಕ ಹಣ ಸಂಗ್ರಹಿಸಿ, ಅನಾರೋಗ್ಯಪೀಡಿತ ಹಾಗೂ ಸಂಕಷ್ಟದಲ್ಲಿರುವ ಮಕ್ಕಳ ಚಿಕಿತ್ಸೆಗೆ ನೆರವಾಗುವ ಮೂಲಕ ಮಾನವೀಯ ಸೇವೆಯಲ್ಲಿ ಗುರುತಿಸಿಕೊಂಡಿರುವ ಖ್ಯಾತ ಸಮಾಜಸೇವಕ ಶ್ರೀ ರವಿ ಕಟಪಾಡಿ ಅವರನ್ನು ಕಾರ್ಯಕ್ರಮದ ಪ್ರಮುಖ ಸನ್ಮಾನಿತರಾಗಿ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಅವರ ನಿಸ್ವಾರ್ಥ ಸಮಾಜಸೇವೆ ಹಾಗೂ ಮಾನವೀಯ ಕಳಕಳಿಯನ್ನು ಶ್ಲಾಘಿಸಿದ ಗಣ್ಯರು, ರವಿ ಕಟಪಾಡಿಯವರ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಾಧಕರಿಗೆ ಸನ್ಮಾನ – ಗೌರವಮಾರ್ಗದೀಪ ಸಾಂಸ್ಕೃತಿಕ ಸಮಿತಿಯು ಪ್ರತಿವರ್ಷದಂತೆ ಈ ಬಾರಿಯೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸಿತು.

ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಬಿ. ಕೆ. ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಹಾಗೆಯೇ ಶ್ರೀ ಸಂತೋಷ್ ಶೆಟ್ಟಿ ಪೊಳಲಿ ರವರ ಸಾಮಾಜಿಕ ಸೇವೆ ಮತ್ತು ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು.ಇದರೊಂದಿಗೆ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಸಂಪ್ರದಾಯದಂತೆ ಪ್ರತಿವರ್ಷ ನೀಡಲಾಗುವ ದಂಪತಿ ಸನ್ಮಾನವನ್ನು ಈ ಬಾರಿ ಶ್ರೀರತ್ನಾಕರ ಶೇರಿಗಾರ್ ಮತ್ತು ಶ್ರೀಮತಿ ಪುಪ್ಪ ರತ್ನಾಕರ್ ಶೇರಿಗಾರ್ ದಂಪತಿಗೆ ನೀಡಿ ಗೌರವಿಸಲಾಯಿತು.

ಮರಳುನಾಡಿನಲ್ಲಿ ಕನ್ನಡ ಸಂಸ್ಕೃತಿ ಮತ್ತು ಭಕ್ತಿಯ ಸಂಗಮಉದ್ಯೋಗ ಮತ್ತು ಉದ್ಯಮದ ನಿಮಿತ್ತ ತಾಯ್ನಾಡಿನಿಂದ ಸಾವಿರಾರು ಮೈಲಿ ದೂರದಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ನಾಡಿನ ಹಬ್ಬ-ಹರಿದಿನಗಳು, ಸಂಸ್ಕೃತಿ, ಸಂಪ್ರದಾಯ ಮತ್ತು ದೈವಭಕ್ತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಆಶಯದೊಂದಿಗೆ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಕಳೆದ 12 ವರ್ಷಗಳಿಂದ ಸಾರ್ವಜನಿಕ ಶ್ರೀಗಣೇಶೋತ್ಸವವನ್ನು ಆಚರಿಸುತ್ತಾ ಬಂದಿದೆ.

ಈ ಬಾರಿಯ ಗಣೇಶೋತ್ಸವವು ಧಾರ್ಮಿಕ ಆಚರಣೆ, ಭಜನೆ, ಸಂಗೀತ, ನೃತ್ಯ, ಸಮಾಜಸೇವೆ, ಅನ್ನಸಂತರ್ಪಣೆ ಹಾಗೂ ಕನ್ನಡಿಗರ ಒಗ್ಗಟ್ಟಿನ ಸುಂದರ ಸಂಗಮವಾಗಿ ಮೂಡಿಬಂದಿತು.ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇಯ ಪದಾಧಿಕಾರಿಗಳು, ಸದಸ್ಯರು, ಸ್ವಯಂಸೇವಕರು, ಪ್ರಾಯೋಜಕರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ವಿಜೃಂಭಣೆಯ ಶೋಭಾಯಾತ್ರೆಯೊಂದಿಗೆ ಶ್ರೀಗಣೇಶ ವಿಸರ್ಜನೆದಿನವಿಡೀ ನಡೆದ ಧಾರ್ಮಿಕ, ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಸಂಜೆ ಶ್ರೀಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರ ಜಯಘೋಷ, ಭಜನೆ ಹಾಗೂ ಸಂಭ್ರಮದ ನಡುವೆ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು.ಭಕ್ತಿ, ಸಂಭ್ರಮ, ಸೇವೆ, ಸಾಂಸ್ಕೃತಿಕ ವೈಭವ ಮತ್ತು ಕನ್ನಡಿಗರ ಒಗ್ಗಟ್ಟಿಗೆ ಸಾಕ್ಷಿಯಾದ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇಯ 12ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸ್ಮರಣೀಯವಾಗಿ ಸಂಪನ್ನಗೊಂಡಿತು

Related posts

ಉಡುಪಿ – ಉಚ್ಚಿಲ ದಸರಾ 2026: ಅ.18 ರಂದು ಆಹ್ವಾನಿತ ತಂಡಗಳ ಪುರುಷರ ಹುಲಿ ಕುಣಿತ ಸ್ಪರ್ಧೆ “ಅಬ್ಬರದ ಪಿಲಿ ಪಂಥ 2026 ಸೀಸನ್ 1” ರ ಪೋಸ್ಟರ್ ಬಿಡುಗಡೆಗೊಳಿಸಿದ ಉದ್ಯಮಿ ಯುವರಾಜ್ ಕಿದಿಯೂರು ;

Voiceoftulunadu

ಕಾಂಚನ್ ಅಟೋಮೊಬೈಲ್ ಸಂಸ್ಥೆಯಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ಕೊಡುಗೆ : ಉಡುಪಿ ಎಸ್ಪಿ ಹರಿರಾಮ್ ಶಂಕರ್ ರವರಿಗೆ ಜೀಪಿನ ಕೀಲಿ ಹಸ್ತಾಂತರಿಸಿದ ಪ್ರಸಾದ್ ರಾಜ್;

Voiceoftulunadu

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾದ ಡಾ|ಕೆ.ಸಿ. ನಾರಾಯಣ ಗೌಡ ನಿಯೋಗ ;

Voiceoftulunadu

Leave a Comment