November 5, 2026
Uncategorizedಆರೋಗ್ಯಉದ್ಯೋಗ/ಶಿಕ್ಷಣಕಲೆ/ಸಾಹಿತ್ಯಜಿಲ್ಲಾ ಸುದ್ದಿವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸ್ಥಳೀಯ/ಪ್ರಾದೇಶಿಕ ಸುದ್ದಿ

ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬಟ್ಟೆ ಬ್ಯಾಗ್, ಆಟಿಕೆಗಳ ವಿತರಣೆ ;

ವರದಿ /ಚಿತ್ರ : ರೋನ್ಸ್ ಬಂಟ್ವಾಳ್

ಮುಂಬಯಿ : ಮಂಗಳೂರು, ಲೋಬೊ ಫೌಂಡೇಶನ್ ಮುಂಬಯಿ ಹಾಗೂ ಗ್ಲೋಬಲ್ ಸಿಂಪಥಿ ಫೌಂಡೇಶನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಬಿಜೈ ಕಾಪಿಕಾಡ್ ಅಂಗನವಾಡಿ ಶಾಲೆಯ ಮಕ್ಕಳಿಗೆ ಬಟ್ಟೆ ಬ್ಯಾಗ್, ಆಟಿಕೆಗಳು ಹಾಗೂ ಸಿಹಿ ತಿಂಡಿ ವಿತರಣೆ ಮಾಡಲಾಯಿತು.

ಇದೇ ವೇಳೆ ಶಾಲಾ ಮಕ್ಕಳ ಶೈಕ್ಷಣಿಕ ಕಲಿಕೆಗೆ ಅಗತ್ಯವಿರುವ ಇಂಟರ್‌ನೆಟ್ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ರೋನ್ಸ್ ಬಂಟ್ವಾಳ್ ತಿಳಿಸಿದರು.

ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಾಯ ನೀಡಲಾಗುವುದು ಹಾಗೂ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಸಮವಸ್ತ್ರ ಒದಗಿಸುವುದಾಗಿ ಅಂತಾರಾಷ್ಟ್ರೀಯ ಜೂಡೋ ತರಬೇತುದಾರ ಹಾಗೂ ಕರ್ನಾಟಕ ರಾಜ್ಯ ಜೂಡೋ ಅಸೋಸಿಯೇಷನ್ ಅಧ್ಯಕ್ಷ ಯತೀಶ್ ಎನ್. ಬಂಗೇರಾ ತಿಳಿಸಿದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಶಾಲಾ ಶಿಕ್ಷಕಿಯರಾದ ನಂದಾ, ಲಕ್ಷ್ಮೀ ಉಪಸ್ಥಿತರಿದ್ದರು.

Related posts

ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಹೈಕೋರ್ಟ್ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ನೇಮಕ;

Voiceoftulunadu

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಬೆಂಗಳೂರು ವಲಯಕ್ಕೆ ನೂತನ ಸಾರಥ್ಯಅಧ್ಯಕ್ಷರಾಗಿ ಪುರುಷೋತ್ತಮ ಚೇಂಡ್ಲ, ,ಪ್ರಧಾನ ಸಂಚಾಲಕರಾಗಿ ಶಾಂತಾರಾಮ್ ವಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಸಾಲ್ಯಾನ್ ಆಯ್ಕೆ ;

Voiceoftulunadu

ಧನ್ವಂತರಿ ಜಯಂತಿ ಅಂಗವಾಗಿ ನ. 6ರಂದು ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ : ಡಾ. ಕೇಶವರಾಜ್ ನೇತೃತ್ವದಲ್ಲಿ ಶಿಬಿರ ಆಯೋಜನೆ – ಉಚಿತ ವೈದ್ಯಕೀಯ ಸಮಾಲೋಚನೆ, ಮಧುಮೇಹ ತಪಾಸಣೆ ಹಾಗೂ ಔಷಧ ವಿತರಣೆ ;

Voiceoftulunadu

Leave a Comment