November 5, 2026
Uncategorizedಕಲೆ/ಸಾಹಿತ್ಯಜಿಲ್ಲಾ ಸುದ್ದಿಧಾರ್ಮಿಕ/ಸಾಂಸ್ಕೃತಿಕವಾಣಿಜ್ಯ/ಉದ್ಯಮಸಾಮಾಜಿಕ/ಇತಿಹಾಸಸಿನಿಮಾ/ಮನರಂಜನೆಸ್ಥಳೀಯ/ಪ್ರಾದೇಶಿಕ ಸುದ್ದಿ

ಸುಭಾಶ್ ನಗರ: ಅ.17ರಿಂದ ‘ಸಜಿಪ ದಸರಾ’ ಶತ ಸಂಭ್ರಮ. ಆರು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ : ರೂ 40 ಲಕ್ಷ ವೆಚ್ಚದ ಶಾಲಾ ಕಟ್ಟಡ ಹಸ್ತಾಂತರ ;

ವರದಿ/ ಚಿತ್ರ : ಸಂತೋಷ್ ಕುಲಾಲ್ ನೆತ್ತರಕೆರೆ

ಬಂಟ್ವಾಳ: ಸಜಿಪಮೂಡ ಗ್ರಾಮದ ಸುಭಾಶ್ ನಗರದಲ್ಲಿ ಸುಭಾಶ್ ಯುವಕ ಮಂಡಲ ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಅ.17ರಿಂದ 22ರವರೆಗೆ ‘ಸಜಿಪ ದಸರಾ’ ಶತ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಎನ್. ವಿವೇಕ್ ಶೆಟ್ಟಿ ನಗ್ರಿಗುತ್ತು ತಿಳಿಸಿದರು.

ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1925ರಲ್ಲಿ ಕಂದೂರು ಅನಂತ ಐತಾಳ್ ಅವರು ಆರಂಭಿಸಿದ ಶಾರದಾ ಮಹೋತ್ಸವವು ಬಳಿಕ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದಿವಂಗತ ಬಿ. ಸದಾನಂದ ಪೂಂಜ ಅವರ ನೇತೃತ್ವದಲ್ಲಿ ಸುಭಾಶ್ ನಗರ ಶಾಲೆಯಲ್ಲಿ 75 ವರ್ಷಗಳನ್ನು ಪೂರೈಸಿದೆ. ಇದೀಗ ಶತ ಸಂಭ್ರಮದ ಸಂಭ್ರಮಾಚರಣೆಗೆ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.

ಆರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 100 ಮಂದಿ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ. ಇದರೊಂದಿಗೆ ಸುಮಾರು ರೂ.40 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡವನ್ನು ಅ.17ರಂದು ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.

ಅ.17ರಂದು ಉದ್ಘಾಟನೆ, ಧಾರ್ಮಿಕ ಸಭೆ : ಅ.17ರಂದು ಬೆಳಿಗ್ಗೆ 9 ಗಂಟೆಗೆ ಶಾರದಾ ದೇವಿಯ ಪ್ರತಿಷ್ಠೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ. ಬಳಿಕ ಭಕ್ತಿ-ಭಾವ-ಲಹರಿ ಮತ್ತು ಭಜನಾ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 6 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೇಜಾವರ ಶ್ರೀಗಳು ಆಶೀರ್ವಚನ ನೀಡಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಅ.18ರಂದು ಬೆಳಿಗ್ಗೆ 8 ಗಂಟೆಗೆ : ಚಂಡಿಕಾಯಾಗ, ಮಧ್ಯಾಹ್ನ 12 ಗಂಟೆಗೆ ಗಾನ ವೈಭವ ನಡೆಯಲಿದೆ. ಸಂಜೆ 6 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ, ವಿಧಾನಪರಿಷತ್ ಸದಸ್ಯ ಬಿ. ಮಂಜುನಾಥ ಭಂಡಾರಿ, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಅ.19ರಂದು ಬೆಳಿಗ್ಗೆ 8 ಗಂಟೆಗೆ ಲಕ್ಷ್ಮೀ ಸಹಸ್ರನಾಮ ಯಾಗ, ಮಧ್ಯಾಹ್ನ ಮಹಾಪೂಜೆ ಹಾಗೂ ಬಳಿಕ ವೀರಮಣಿ ಕಾಳಗ ತಾಳಮದ್ದಳೆ ನಡೆಯಲಿದೆ. ಸಂಜೆ 6.30ಕ್ಕೆ ಚಾಪರ್ಕ ತಂಡದಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ.ಅ.20ರಂದು ಬೆಳಿಗ್ಗೆ 8 ಗಂಟೆಗೆ ಸರಸ್ವತಿ ಸಹಸ್ರನಾಮ ಯಾಗ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆಯಲಿದ್ದು, ಸಂಜೆ 6.30ರಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಪ್ರದರ್ಶನಗೊಳ್ಳಲಿದೆ.ಅ.21ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಭಜನಾ ಸೇವೆ ಇರಲಿದೆ ಎಂದು ಶಾರದಾ ಪೂಜಾ ಸಮಿತಿ ಅಧ್ಯಕ್ಷ ಬಿ. ಶೋಭಿತ್ ಪೂಂಜ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಭಾಶ್ ಯುವಕ ಮಂಡಲ ಅಧ್ಯಕ್ಷ ಎಸ್. ಶ್ರೀಕಾಂತ್ ಶೆಟ್ಟಿ, ಪ್ರಮುಖರಾದ ಕೀರ್ತನ್ ಆಳ್ವ ಕಾಂತಾಡಿಗುತ್ತು ಹಾಗೂ ಸುಜಿತ್ ಕುಮಾರ್ ಬೇಂಕೆ ಉಪಸ್ಥಿತರಿದ್ದರು.

Related posts

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲ : ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಮಾಜಿ ಉಪಾಧ್ಯಕ್ಷೆ ಎರ್ಮಾಳು ಶೀಲಾ ಕೆ. ಶೆಟ್ಟಿ.”ಆಟಿಡೊಂಜಿ ದಿನ” ;

Voiceoftulunadu

ನಿಮಗೆ ಮಾರಿದ ನಕ್ಷೆ ಹಳೆಯದಾಗಿದೆ : ವಿಶೇಷ ಲೇಖನ : ಬಂಟಕಲ್ ತಾಂತ್ರಿಕ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಡಾ. ನೇಹಾ ಲಖೋಟಿಯಾ ಲೇಖನ!

Voiceoftulunadu

ಕುಂತಳ ನಗರ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ :5ನೇ ಬೃಹತ್ ಉದ್ಯೋಗ ಮೇಳಎಂ.ಆರ್.ಜಿ. ಗ್ರೂಪ್, ನಿಟ್ಟೆಯ ಎನ್‌ಎಂಎಎಂ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗ ;

Voiceoftulunadu

Leave a Comment